ಉಡುಪಿ: ಆ. 31ರಂದು ರಾಗರತ್ನ ಮಾಲಿಕೆ-27

Upayuktha
0

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠ ಉಡುಪಿ, ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು, ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದಂಗಳವರ ಶುಭಾಶೀರ್ವಾದದೊಂದಿಗೆ ರಾಗ ಧನ ಉಡುಪಿ ಸಂಸ್ಥೆಯು ಪ್ರಸ್ತುತಪಡಿಸುವ ಸಂಗೀತ ಕಾರ್ಯಕ್ರಮ 'ರಾಗರತ್ನ ಮಾಲಿಕೆ- 27' ಆಗಸ್ಟ್ 31ರಂದು ಶನಿವಾರ ಸಂಜೆ 7 ಗಂಟೆಗೆ ಉಡುಪಿಯ ರಾಜಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗವಿದೆ.


ಬೆಂಗಳೂರಿನ ಈಶ್ವರ ಅಯ್ಯರ್ ಅವರ ಹಾಡುಗಾರಿಕೆ, ವಯೊಲಿನ್‌ನಲ್ಲಿ ಪೃಥ್ವಿ ಭಾಸ್ಕರ್ ಹಾಗೂ ಮೃದಂಗದಲ್ಲಿ ಪವನ್ ಮಾಧವ್ ಮಾಸೂರ್ ಸಹಕರಿಸಲಿದ್ದಾರೆ ಎಂದು ರಾಗ ಧನ ಉಡುಪಿ ಇದರ ಕಾರ್ಯದರ್ಶಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0 Comments
Post a Comment (0)
To Top