ಅಂಬಿಕಾ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಈಜು ಸ್ಪರ್ಧೆಯಲ್ಲಿ ಹಲವು ಬಹುಮಾನ

Upayuktha
0

ಪುತ್ತೂರು: ಮಂಗಳೂರಿನ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಆಗಸ್ಟ್ 8ರಂದು ನಡೆದ ವಿದ್ಯಾ ಭಾರತಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಅಂಬಿಕಾ ಸಿಬಿಎಸ್‌ಇ ವಿದ್ಯಾಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿ ವರ್ಧಿನ್ ದೀಪಕ್  ರೈ 17 ವರ್ಷ ಕೆಳಗಿನ ಹುಡುಗರ ವಿಭಾಗದ  50 ಮೀಟರ್ ಬಟರ್ ಫ್ಲೈ, 100 ಮೀಟರ್ ಬ್ರೆಸ್ಟ್ರೋಕ್‌ಕ್,  50 ಮೀಟರ್ ಬ್ರೆಸ್ಟ್ರೋಕ್‌ಕ್‌ನಲ್ಲಿ  ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಆರನೇ ತರಗತಿಯ ವಿದ್ಯಾರ್ಥಿ ಪ್ರತ್ಯುಷ್ ಎಲ್ ಎಸ್ ಗೌಡ  14 ವರ್ಷ ಕೆಳಗಿನ   ಹುಡುಗರ ವಿಭಾಗದ  50ಮೀಟರ್ ಬಟರ್ ಫ್ಲೈ ಮತ್ತು 50 ಮೀಟರ್ ಫ್ರೀ ಸ್ಟೈಲ್‌ನಲ್ಲಿ  ದ್ವಿತೀಯ ಸ್ಥಾನ, 50ಮೀಟರ್  ಬ್ಯಾಕ್ ಸ್ಟ್ರೋಕ್‌ಕ್ ಮತ್ತು 4x100 ರಿಲೇಯಲ್ಲಿ ಪ್ರಥಮ  ಸ್ಥಾನವನ್ನು ಪಡೆದಿರುತ್ತಾರೆ.


ಎಂಟನೇ ತರಗತಿಯ ವಿದ್ಯಾರ್ಥಿನಿ ಮಹೆಕ್ ರವಿಕುಮಾರ್ ಕೊತಾರಿ  14  ವರ್ಷ ಕೆಳಗಿನ ಹುಡುಗಿಯರ ವಿಭಾಗದ 50 ಮೀಟರ್ ಬ್ರೆಸ್ಟ್ರೋಕ್‌ಕ್ ಮತ್ತು 50  ಮೀಟರ್ ಬ್ಯಾಕ್ ಸ್ಟ್ರೋಕ್‌ಕ್‌ನಲ್ಲಿ ತೃತೀಯ ಸ್ಥಾನವನ್ನು, 100 ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.


ಎಂಟನೇ ತರಗತಿಯ ವಿದ್ಯಾರ್ಥಿ ಲಲನ್ ಯು ನಾಯ್ಕ್ 14  ವರ್ಷ ಕೆಳಗಿನ ಹುಡುಗರ ವಿಭಾಗದ 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ದ್ವಿತೀಯ ಸ್ಥಾನವನ್ನು 4x100 ಫ್ರೀ ಸ್ಟೈಲ್ ರಿಲೇಯಲ್ಲಿ ಪ್ರಥಮ ಸ್ಥಾನವನ್ನು, 50 ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಆರನೇ ತರಗತಿಯ ವಿದ್ಯಾರ್ಥಿ ದೀಪಾಂಶ್ ಶೆಟ್ಟಿ 14  ವರ್ಷಕೆಳಗಿನ ಹುಡುಗರ ವಿಭಾಗದ  4x100 ರಿಲೇಯಲ್ಲಿ ಪ್ರಥಮ  ಸ್ಥಾನವನ್ನು ಪಡೆದಿರುತ್ತಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top