ಒತ್ತಡಗಳನ್ನು ನಿಭಾಯಿಸಲು ಹಲವು ರೀತಿಯ ಬೆಂಬಲ ಅನಿವಾರ್ಯ. ಆಪ್ತಸಲಹೆ, ಪ್ರೀತಿ ಗೌರವದ ಸಂವಹನ, ಸಮತೋಲಿತ ಜೀವನ ಪದ್ಧತಿ ಏಳೆಂಟು ಗಂಟೆ ಅವಧಿಯ ನಿದ್ರೆ, ಯೋಗಾಸನ, ಚಿತ್ಯಾ ಪೂರ್ಣ ಹವ್ಯಾಸಗಳಿಂದ ವಿಪರೀತ ಒತ್ತಡಗಳಿಂದ ಹೊರಬಂದು ಶಾಂತಿಯುತ ಉತ್ತಮ ಜೀವನ ನಡೆಸಲು ಸಾಧ್ಯವಿದೆ ಎಂದು ಖ್ಯಾತ ಮನೋವೈದ್ಯರೂ ಡಾ. ಎಂ ವಿ ಬಾಳಿಗಾ ಚಾರಿಟೇಬಲ್ ಆಸ್ಪತ್ರೆಯ ನಿರ್ದೇಶಕರೂ ಆದ ಪ್ರೊ. ಡಾ. ಪಿ ವಿ ಭಂಡಾರಿ ಅಭಿಪ್ರಾಯಪ್ರಟ್ಟರು.
ಅವರು ನಿಟ್ಟೆಯ ಜಸ್ಟೀಸ್ ಕೆ ಎಸ್ ಹೆಗ್ಡೆ ಉದ್ಯಮ ಮಂಡಳಿ (ಎಂ.ಬಿ.ಎಂ) ಸಂಸ್ಥೆಯ ಎಂ.ಬಿ.ಎಂ ವಿದ್ಯಾರ್ಥಿಗಳ ಓರಿಯಂಟೇಷನ್ ಕಾರ್ಯಕ್ರಮದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ "ಮಾನಸಿಕ ಆರೋಗ್ಯ: ಸಮತೋಲಿತ ಜೀವನ ಶೈಲಿ" ವಿಚಾರದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ತನ್ನ ಉಪನ್ಯಾಸದಲ್ಲಿ- ಈ ವಿಷಯದಲ್ಲಿ ಕಂಡುಕೊಂಡ ಇತ್ತೀಚಿನ ಸಂಶೋಧನೆಗಳು ಆಧರಿಸಿ, ವಾಸ್ತವ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಒದಗಿಸಿದರು. ಸಂಸ್ಥೆಯ ಪ್ರಾಧ್ಯಾಪಕ ಡಾ. ಸುಧೀರ್ ರಾಜ್ ಕೆ ಮತ್ತು ಪ್ರೊ. ಕಾರ್ತಿಕ್ ಕುದ್ರೋಳಿ ನಿರೂಪಿಸಿದರು. ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ. ಸುಧೀರ್ ಎಂ ಉಪಸ್ಥಿತರಿದ್ದರು. ಬಳಿಕ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ