ಶ್ರೀ ಸತ್ಯಾತ್ಮವಾಣಿ - 18: ತಪಸ್ಸಿನ ಮಹತ್ವ

Upayuktha
0

ಟ್ಟೆ ಹೊಲಸಾಗತ್ತೆ ನಮ್ಮ ಮೈ ಶುದ್ಧವಾಗಿ ಇರಬೇಕು ಎಂಬ ಕಾರಣಕ್ಕೆ ಬಟ್ಟೆಯನ್ನು ಧರಿಸುವುದು, ಕೆಸರಿನ ಮಣ್ಣಿನ ಧೂಳಿನ ಸ್ಪರ್ಶ ನೇರವಾಗಿ ಮೈಗೆ ಆಗಬಾರದೆಂದು ಬಟ್ಟೆಯನ್ನು ಉಡುತ್ತೇವೆ. ನೀರನ್ನು ಹಾಕಿ ಹೊಲಸಿನ ಬಟ್ಟೆಯನ್ನು ತೊಳೆದು ಉಡುತ್ತಾನೆ. ನಮ್ಮ ಮನಸ್ಸು ನಾನಾ ಪಾಪ ಕರ್ಮ, ದುಷ್ಕರ್ಮಗಳಿಂದ ಮಲಿನವಾದ ಮನಸ್ಸನ್ನು ಪುಣ್ಯ ಕರ್ಮಗಳೆಂಬ ಶುದ್ಧವಾದ ಕರ್ಮಗಳಿಂದ ಪವಿತ್ರವಾಗುತ್ತದೆ. ವೇದದಲ್ಲಿ ಕರ್ಮಕ್ಕೆ ನೀರು ಎಂದು ಹೇಳುತ್ತಾರೆ.


ಪ್ರಪಂಚದಲ್ಲಿ ಎಲ್ಲ ಜೀವರು ಮಾಡುವವರು ವಾಯುದೇವರು ಇಂತಹ ಎಲ್ಲ ಕರ್ಮಗಳನ್ನು ತಾವೇ ಮಾಡಿ ಮಾಡಿಸುತ್ತಾರೆ. ಅವರೇ ಸಮರ್ಪಣೆ ಮಾಡುತ್ತಾರೆ. ತಾನು ನೇರವಾಗಿ ಮಾಡಿದ ಕರ್ಮಗಳ ಜೊತೆಗೆ ಜೀವಗಳ ಮೂಲಕ ಮಾಡಿಸಿ ಅದನ್ನು ಕೂಡ ಸಮರ್ಪಣೆ ಮಾಡಿಸುತ್ತಾರೆ. ಯಾರ ಶ್ರಮದಿಂದ ದುಡಿದ  ವ್ಯಕ್ತಿ ಸಮರ್ಪಣೆ ಮಾಡುತ್ತಾರೆ ಅದರಂತೆ ದೇವರು ಸಂತುಷ್ಟನಾಗಲಿ ಎಂದು ಎಲ್ಲಕರ್ಮಗಳನ್ನು ಜೀವರ ಮೂಲಕ ಮಾಡಿಸುವ ವಾಯುದೇವರು ಮಾಡಿಸುವುದರ ಜೊತೆಗೆ ಅವರೇ ಸಮರ್ಪಣೆ ಮಾಡುವ ಅಧಿಕಾರ ಅವರಿಗಿದೆ.  ವೈದಿಕವಾದ ನಿಘಂಟಿನಲ್ಲಿ ನೀರು ಅಥವಾ ಕರ್ಮ ಎಂಬ ಪದಗಳು ಒಂದೇ . ನಮ್ಮ ಮನಸ್ಸಿನಲ್ಲಿರುವ ಹೊಲಸನ್ನು ತೊಳೆಯುವುದು ಕರ್ಮಗಳು ಮೈ ಬಟ್ಟೆ ಮನೆಯನ್ನು ನೀರಿನಿಂದ ಶುದ್ಧ ಮಾಡಲು ಆಗುತ್ತದೆ. ಮನಸ್ಸನ್ನು ಪುಣ್ಯಕರ್ಮಗಳೆಂಬ ನೀರಿನಿಂದ ತೊಳೆದು ಪ್ರಾಯಶ್ಚಿತ್ತಗಳನ್ನು ಭಗವಂತನ ನಾಮಸ್ಮರಣ ಮಾಡಿ ಪಾಪವನ್ನು ತೊಳೆಯಬಹುದು. 



ಮಹಾಭಾರತದ ಸಂದೇಶದಿಂದ ನಾವು ತಿಳಿಯಬೇಕಾದ್ದು ತಪ್ಪುಕಾರ್ಯಗಳನ್ನು ಮಾಡಿದ್ದರೂ ಅವುಗಳ ಪ್ರಾಯಶ್ಚಿತ್ತವನ್ನು ಮಾಡಿ ಪಾಪಗಳನ್ನು ತೊಳೆದುಕೊಳ್ಳಬೇಕು ಎಂಬುದನ್ನು. ಪ್ರಾಯಶ್ಚಿತ್ತಗಳನ್ನು ತಮ್ಮ ಶಕ್ತ್ಯಾನುಸಾರ ಮಾಡಬೇಕು. ಕಠಿಣ ತಪಸ್ಸನ್ನು ಮಾಡುತ್ತೇವೆ ಎಂದು ಸುಲಭವಾದ ಹರಿನಾಮ ಸಂಕೀರ್ತನ ಮಾಡುವುದನ್ನುನಿಲ್ಲಿಸಿರುವುದಿಲ್ಲ. ಕಠಿಣ ಪ್ರಾಯಶ್ಚಿತ್ತಗಳ ಜೊತೆಗೆ ಸುಲಭವಾದ ನಾಮಸ್ಮರಣೆಯನ್ನು ಮಾಡುತ್ತಿರಬೇಕು.  ನಮಗೆ ಲೌಕಿಕದಲ್ಲಿ ಹೊಲಸಾದಾಗ ತಕ್ಷಣ ಸ್ವಚ್ಛ ಮಾಡಿಕೊಳ್ಳುವ ಅಭ್ಯಾಸವಿರುವಂತೆ ಮನಸ್ಸಿನ ಹೊಲಸನ್ನು ತಕ್ಷಣದಲ್ಲಿ ಸ್ವಚ್ಚ ಮಾಡಿಕೊಳ್ಳುವ ಅಭ್ಯಾಸ ಬೆಳಸಿಕೊಳ್ಳಬೇಕು ಎಂದು ಮಹಾಭಾರತ ಹೇಳುತ್ತದೆ. ತಪಸ್ಸಿನಿಂದ ನ್ಮಮ ದೇಹವೂ ಶುದ್ಧವಾಗುತ್ತದೆ.   


ದೇಹವನ್ನು ಶುದ್ಧವಾಗಿಸಲು ಮಾಡುವುದು ತಪಸ್ಸು ಮನುಷ್ಯನ ಮನಸ್ಸಿಗೆ ತಾಪವಾದರೆ ದುಃಖವಾದರೆ ಪ್ರಾಯಶ್ಚಿತ್ತ. ದೇವರು ದುಃಖ ಕೊಟ್ಟಾಗ ರೋಗ ಕೊಟ್ಟಾಗ ಕೂಡ ಇದೇ ಅನುಸಂಧಾನ ಮಾಡಬೇಕು. ಅದನ್ನು ವಿಷ್ಣುವಿಗೆ ಅರ್ಪಣೆ ಮಾಡಿದರೆ ಅದು ನಿಜವಾದ ತಪಸ್ಸು ಎಂದು ಹೇಳುತ್ತಾರೆ.  ಅದಕ್ಕೂ ಕೂಡ ದೇವರು ಕಾರುಣ್ಯದಿಂದ ಫಲವನ್ನು ಕೊಡುತ್ತಾನೆ.  ದೇಹಕ್ಕೆ ಬರುವ ರೋಗಗಳು ನಾವಾಗಿ ಬಯಸದೇ ಬಂದಿರುವದರಿಂದ ಭಗವಂತನ ತಪಸ್ಸು ಎಂದು ಅನುಸಂಧಾನ ಮಾಡಿದರೆ ದೇವರು ಅನುಗ್ರಹ ಮಾಡುತ್ತಾನೆ ಏಕೆಂದರೆ ಇವೆರಡರಿಂದ ಮನಸ್ಸು ದೇಹಗಳು ಶುದ್ಧವಾಗುತ್ತವೆ.


ಆಸೆಗಳು ಇದ್ದರೆ ಸಾಲದು ಅದನ್ನು ಪಡೆಯಲು ಸಾಧನೆಯನ್ನು ಮಾಡಬೇಕು.  ಹಣ ಬೇಕು ಎಂದು ಮನೆಯಲ್ಲಿ ಕುಳಿತರೆ ದೊರೆಯುವುದಿಲ್ಲ ದುಡಿದರೆ ಫಲ ಸಿಗುತ್ತದೆ ಎಂದು ಹಿರಿಯರು ಹೇಳುತ್ತಾರೆ. 

ಭಾರವಿ ಹೇಳುತ್ತಾನೆ, ಕಾಳಿದಾಸ ಹೇಳುವ ಎಲ್ಲ ವಾಕ್ಯಗಳು ಎಲ್ಲವೂ ಮಹಾಭಾರತದಲ್ಲಿರುವುದನ್ನೇ ಹೇಳಿದ್ದಾರೆ. ವೇದವ್ಯಾಸರು ಹೇಳಿದ ಸಾಹಿತ್ಯವೆಂಬ ಸಮುದ್ರದಲ್ಲಿ ಮಿಕ್ಕವರು ಬಳಿಸಿ ಬರೆದಿರುವುದು ಬಿಂದುವನಷ್ಟು ಮಾತ್ರ. ಮನುಷ್ಯ ಪ್ರಯತ್ನವನ್ನು ಮಾಡಿದರೆ ದೊಡ್ಡ ಸಿದ್ಧಿಯನ್ನು ಪಡೆದದ್ದು ಕೇಳುತ್ತೇವೆ. ಆದರೆ ದೊಡ್ಡವರ ಯೋಗ್ಯತೆಗೆ ತಕ್ಕದ್ದನ್ನು ಪಡೆದಂತೆ ನಾವು ಕೂಡ ನಮ್ಮ ಪ್ರಯತ್ನದಿಂದ ನಮ್ಮ ಯೋಗ್ಯವಾದನ್ನು ಪಡೆಯಬೇಕೆಂದು ಮಹತ್ವಾಕಾಂಕ್ಷೆ ಇಟ್ಟುಕೊಂಡರೂ ದೊಡ್ಡವರೊಂದಿಗೆ ಹೊಲಿಕೆಯನ್ನು ಮಾಡಿಕೊಳ್ಳಬಾರದು, ಆದರೆ ತಪಸ್ಸನ್ನು ಮಾಡಬೇಕು ಎಂದು ಹೇಳುತ್ತಾರೆ. ತಪಸ್ಸಿನ ಫಲದಿಂದ ಪರಮಾತ್ಮನನ್ನು ಭಗವಂತನ ಬಳಿ ಬೇಡಿಕೊಳ್ಳುತ್ತಾರೆ. ಅವನು ಪ್ರಸನ್ನನಾಗಿ ಅವರಿಗೆ ಅವನೇ ಇಷ್ಟಾರ್ಥಗಳನ್ನು ಕೊಡುತ್ತಾನೆ. ಆದ್ದರಿಂದ ತಪಸ್ಸನ್ನು ಮನುಷ್ಯನು ಮಾಡಬೇಕು.


ಕರ್ದಮ ಪ್ರಜಾಪತತಿಗಳ ಕತೆಯನ್ನು ಕೇಳಿದ್ದೇವೆ, ಮದುವೆಯಾದ ಮಡದಿಯನ್ನು ಕಣ್ಣೆತ್ತಿ ನೋಡದೇ ಪರಮಾತ್ಮನ ಕುರಿತು ಮಾಡಿದ ತಪಸ್ಸಿನ ಫಲವಾಗಿ ಅವರು ಬೇಡಿದ ಎಲ್ಲವನ್ನೂ ಪರಮಾತ್ಮ ಕೊಡುತ್ತಾನೆ.  ಹೆಂಡತಿಗೆ ಏನು ಬೇಕು ಎಂದು ಕೇಳಿದಾಗ 9 ಅಂತಸ್ತಿನ ವಿಮಾನವನ್ನು ಸೃಷ್ಟಿ ಮಾಡುತ್ತಾರೆ. ಪುಷ್ಪಕವಿಮಾನ ಇಷ್ಟ ಪಟ್ಟಲ್ಲಿ ಪಡೆಯುವ ತಪಸ್‌ ಶಕ್ತಿ ವೇದ ಕಾಲದಲ್ಲಿಯೇ ಇತ್ತು. ಇಷ್ಟು ಪುರಾತನ ಮತ್ತು ಲೌಕಿಕ ವಿಜ್ಞಾನಗಳನ್ನಷ್ಟೇ ಅಲ್ಲ ಎಲ್ಲವನ್ನು ತಪಸ್ಸಿನಿಂದ ಪಡೆದುಕೊಂಡಿದ್ದರು. ಶ್ರೀಹರಿಯ ಕರುಣೆಯಿಂದ ಋಷಿಗಳು ಪಡೆದಿದ್ದರು. ಪುಟ್ಟ ಹೆಜ್ಜೆ ಇದ್ದರೂ ದಿಟ್ಟ ಹೆಜ್ಜೆ ಇಡಬೇಕು. 


ತಪಸ್ಸಿನಿಂದ ದೊಡ್ಡದಾದ ಫಲವನ್ನು ಪಡೆಯುತ್ತೇವೆ. ಕೇವಲ ಶ್ರಮದಿಂದ ಕೂಡಿದ ಫಲವು ಸ್ವಲ್ಪ ಅದೇ ಶ್ರಮದೊಂದಿಗೆ ತಪಸ್ಸಿನ ಫಲದಿಂದ  ದೊರೆತದ್ದು ಬಹಳ ದೊಡ್ಡದು ಎಂದು ಹೇಳುತ್ತಾರೆ.


ನಾವು ಏನನ್ನು ಪಡೆಯಬೇಕೆಂದು ಹೇಗೆ ಪಡೆಯಬೇಕೆಂದು ಮಹಾಭಾರತ ಹೇಳುತ್ತದೆ, ಶುದ್ಧವಾದ ಮನದಿಂದ ಏಕಾದಶಿಯನ್ನು ಮೊದಲಾದ ಉಪವಾಸ ಮಾಡುವ ಫಲದಿಂದ ತಪಸ್ಸಿನಿನ ಫಲವೆಂದು ಬೇಡಿದ್ದನ್ನು ಭಗವಂತವನು ಕೊಡುತ್ತಾನೆ ಎಂಬ ಸಂದೇಶವನ್ನು ಮಹಾಭಾರತ ನೀಡುತ್ತದೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top