ಶ್ರೀ ಸತ್ಯಾತ್ಮವಾಣಿ- 12: ಶ್ರದ್ಧೆ ಇರುವಲ್ಲಿ ಲಕ್ಷ್ಮೀದೇವಿ ವಾಸ ಮಾಡುತ್ತಾಳೆ

Upayuktha
0


ಹಾಲಕ್ಷ್ಮಿದೇವಿ ಸಕಲ ಜಗತ್ತಿನ ಜನನಿ ತನ್ನ ಸಂತತಿ ಮಕ್ಕಳು ಹೇಗಿರಬೇಕು ಎಂದು ಪ್ರೀತಿ ವಾತ್ಸಲ್ಯದಿಂದ ಇಂದ್ರದೇವರ ಮತ್ತು ನಾರದ ಮಹರ್ಷಿಗಳ ಮೂಲಕ ಹೇಳುತ್ತಾಳೆ, ವೇದವ್ಯಾಸದೇವರು ಇದನ್ನು ಮಹಾಭಾರತದಲ್ಲಿ ದಾಖಲು ಮಾಡಿದ್ದಾರೆ.  ನಮ್ಮ ದೇಹಕ್ಕೆ ಉಣಬಡಿಸಿ ಆಭರಣಗಳನ್ನು ಅಲಂಕರಿಸಿದರೆ ತಾಯಿಯ ಕರ್ತವ್ಯ ಮುಗಿಯಲಿಲ್ಲ, ಬಹಳ ಮುಖ್ಯವಾಗಿ ಮಗನ ಗುಣಗಳು ಸಂಯಮ ಅಧ್ಯಯನ ಶೀಲತೆ ಸದಾಚಾರ ಶುದ್ಧ ಚಾರಿತ್ರ್ಯ ಇವುಳ ಬಗೆಗೆ ತಾಯಿ ಮತ್ತು ತಂದೆ ಗಮನ ಹರಿಸಬೇಕೆಂದು ತೋರಿಸಲು ಲಕ್ಷ್ಮೀದೇವಿ ಕೂಲಂಕುಷವಾಗಿ ಹೇಳುತ್ತಾಳೆ. ವಾಕ್‌ ಮನಸಿನ ದೇವತೆ ಅವಳು ಸಾಮಾನ್ಯರಿಗೂ ತಿಳಿಯುವಂತೆ ಉಪದೇಶ ಮಾಡಿದ್ದಾಳೆ.


ವೃಷಭನಾಮ ಪರಮಾತ್ಮ ತಂದೆಯಾಗಿ ಉಪದೇಶ ಮಾಡಿದ್ದಾನೆ. ತಪಸ್ಸನ್ನು ಮಾಡಿ ಎಂದು ಹೇಳುತ್ತಾನೆ ಜಾಯಂತೇಯರಿಗೆ ವೃಷಭನಾಮಕ ಪರಮಾತ್ಮನು ಹೇಳುತ್ತಾನೆ ದೇವರು ನನ್ನ ಅಧಿಷ್ಠಾನ ಎಂದು ಚಿಂತನೆ ಮಾಡು ಎಂದು ಹೇಳಿದರೆ ನಾವು ಪರಮಾತ್ಮನ ಅಧಿಷ್ಠಾನ ಮಾಡು ಎಂದು ತಿಳಿಯಬೇಕು. ಎಲ್ಲದರಲ್ಲೂ ಭಗವಂತನು ಇದ್ದಾನೆ ಎಂದು ಚಿಂತನೆಯನ್ನು ಮಾಡಬೇಕು.  ವೃಷಭನಾಮಕ ಪರಮಾತ್ಮ ತಂದೆಯಂತೆ ದೇವರ ವಿಷಯ ಜ್ಞಾನವನ್ನು ತಿಳಿಸಿದಂತೆ ಲಕ್ಷ್ಮಿದೇವಿಯು ತಾಯಿಯಂತೆ ಉಪದೇಶ ಮಾಡಿದ್ದಾಳೆ. ಸಾಮಾನ್ಯ ತಾಯಂದಿರು ಸಣ್ಣಮಕ್ಕಳಿಗೆ ತಾಯಂದಿರು ಬಿಟ್ಟು ಹೋದರೆ ಭಯವಾಗುತ್ತದೆ. ಆದರೆ ಲಕ್ಷ್ಮಿದೇವಿಯನ್ನು ಬಿಟ್ಟು ಹೋಗುತ್ತೇನೆ ಎಂದರೆ ಅದರಿಂದ ಮುದುಕರಿಗೂ ಬಹಳ ಭಯವಾಗುತ್ತದೆ.


ಮಹಾಲಕ್ಷ್ಮಿ ಎಂದರೆ ಕೇವಲ ಸಂಪತ್ತಲ್ಲ ಆರೋಗ್ಯ,ಸೌಭಾಗ್ಯ ಸಂಪತ್ತು ಎಲ್ಲವೂ. ಸ್ತ್ರೀಪುರುಷರು ಇಬ್ಬರಿಗೂ ಹೇಳುತ್ತಾಳೆ, ಮನೆಯನ್ನು ದೇವರ ಮನೆಯಂದು ತಿಳಿಯಬೇಕು. ಇಲ್ಲಿರಲು ಸದಾವಕಾಶ ಕೊಟ್ಟವನು ಭಗವಂತ ಅವನ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಂಬರೀಷ ಮಹಾರಾಜ ದೇವರ ಮನೆಯನ್ನು ಸ್ವತಃ ಸ್ವಚ್ಛ ಮಾಡುತ್ತಾ ಇದ್ದ. ಶಾಸ್ತ್ರದಲ್ಲಿ ಹೇಳುತ್ತಾರೆ ದೇವರ ಮನೆಯನ್ನು ಸ್ವಚ್ಛ ಮಾಡಿದರೆ ಸಾವಿರಾರು ವರ್ಷ ಸ್ವರ್ಗದ ಸುಖವು ದೊರೆಯುತ್ತದೆ ಎಂದು ಹೇಳುತ್ತಾರೆ. ಮನೆಯೇ ದೇವರದು ಎಂದು ತಿಳಿಯಬೇಕು, ಆ ಅನುಸಂಧಾನವಿರಬೇಕು. ಪುಣ್ಯವು ಬರುತ್ತದೆ ಆರೋಗ್ಯವೂ ಇರುತ್ತದೆ. ಗೃಹಕರ್ಮವ ಮಾಡುವಾಗ ಬೇಸರಿಸಬಾರದು ಸ್ವಚ್ಛವಾಗಿರುವ ಮನೆಯಲ್ಲಿ ಲಕ್ಷ್ಮಿಯು ಮನೆಯಲ್ಲಿ ನೆಲೆಸುತ್ತಾಳೆ. ಮನೆಯಲ್ಲಿ ಸ್ತ್ರೀ ಪುರುಷರು ಇಬ್ಬರೂ ಧರ್ಮ ಮಾರ್ಗದಲ್ಲಿ ಇರಬೇಕು.  



ಗಂಡನಾಗಲಿ ಹೆಂಡತಿಯಾಗಲಿ ಅಧರ್ಮದ ಮಾತಾಡಿದರೆ ಪರಸ್ಪರ ವಿರೋಧ ಮಾಡಬೇಕು. ಯಜ್ಞ ಯಾಗಾದಿಗಳನ್ನು ಮಾಡಬೇಕು, ಗುರು ಹಿರಿಯರಿಗೆ ಮಾನ ಸನ್ಮಾನ ಗಳನ್ನು ಮಾಡಬೇಕು, ಇಂದ್ರಿಯ ನಿಗ್ರಹ ಮಾಡಬೇಕು. ಅತಿಥಿ ಅಭ್ಯಾಗತರ ಸೇವೆ ಸಹಾಯ ಪರೋಪಕಾರ ಮಾಡಿದರೆ ಪರಮತ್ಮನು ಲಕ್ಷ್ಮಿ ದೇವಿಯೊಂದಿಗೆ ಎಲ್ಲ ದೇವತೆಗಳು ವಾಸ ಮಡುತ್ತಾರೆ ಎಂದು ಹೇಳುತ್ತಾರೆ ಸತ್ಯವಾದಿಗಳು, ಶ್ರದ್ಧೆ ಇರಬೇಕು, ಜಿತ ಕ್ರೋಧವಾಗಿರಬೇಕು, ಆಸ್ತಿಕ ಬುದ್ಧಿ ಇರಬೇಕು, ವಿಶ್ವಾಸ ಇರಬೇಕು, ಇದು ಶ್ರದ್ಧೆಯಿಟ್ಟು ಅನುಸಂಧಾನ ಮಾಡಿದರೆ ಲಕ್ಷ್ಮಿದೇವಿಗೆ ಪರಮಾತ್ಮನಿಗೆ ಸ್ವಾಗತ ಹೇಳಿದಂತೆ, ಮನೆ ಮಾತ್ರವಲ್ಲ ಮನಸ್ಸು ಕೂಡ ಸ್ವಚ್ಛವಾಗಿರಬೇಕು. ಶ್ರದ್ದೆಯಿಂದ  ದೇವರನ್ನು ಮನದಲ್ಲಿ ಮಾಡುವ ಸ್ವಾಗತ ಮುಖ್ಯವಾದುದು. ಮನಸ್ಸಿನ ಸ್ವಚ್ಛತೆ ಅಂದರೆ ಶ್ರದ್ಧೆ. ಪುಣ್ಯಗಳಿಸುವುದು ಕಷ್ಟ ಗಳಿಸಿದ ಪುಣ್ಯವನ್ನು ಕಳೆದುಕೊಂಡವರ ಮನೆಗೆ ನಾನು ಬರುವುದಿಲ್ಲ ಎನ್ನುತ್ತಾಳೆ.


ಜಿತಕಾಮ ಕ್ರೋಧ ಬರಬೇಕಾದರೆ ಭಗವಂತನ ಮೇಲೆ ಭಕ್ತಿ ಶ್ರದ್ಧೆಯಿರಬೇಕು. ಬಯಸಿದ್ದು ನಿಜ ಆದರೆ ಸಿಗಲಿಲ್ಲ. ದೇವರಲ್ಲಿ ಪ್ರಾರ್ಥನೆ ಮಾಡಬೇಕು ಪ್ರಯತ್ನ ಮಾಡಬೇಕು ಭಕ್ತಿಯಲ್ಲಿ ನ್ಯೂನತೆ, ಜ್ಞಾನದಲ್ಲಿ ನ್ಯೂನತೆ ಇದ್ದೆ ಅಪರಾಧ ಮಾಡಿದ್ದರೆ ದೇವರು ಯಶಸ್ಸು ಕೊಟ್ಟಿರುವುದಿಲ್ಲ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಸ್ಥಿಮಿತತೆ ಇರುತ್ತದೆ ಅವರು ಕಾಮ ಕ್ರೋಧಗಳನ್ನು ಗೆಲ್ಲುತ್ತಾರೆ. ಎಂದು ಹೇಳುತ್ತಾಳೆ ಲಕ್ಷ್ಮಿದೇವಿ.  ಸಿಟ್ಟನ್ನು ನಿಯಂತ್ರಿಸಲು ಕಲಿಯಬೇಕು, ಸಿಟ್ಟುಬಂದಾಗ ಸ್ವಲ್ಪ ಹೊತ್ತು ಸುಮ್ಮನೆ ಇರಬೇಕು ದೇವರ ಸ್ಮರಣೆ ಮಾಡಬೇಕು. ಕೆಲವು ಚಿಂತಕರು ಹೇಳುತ್ತಾರೆ ಸಿಟ್ಟು ಬಂದಾಗ 1,2,3 ಎಣಿಸಬೇಕು. ಅಗ ಮತ್ಸ್ಯ ಕೂರ್ಮ ವರಾಹ ಎಂದು ಎಣಿಸಬಹುದು. ಹತ್ತು ಕ್ಷಣ ನಿಂತು ಆ ಕಾರ್ಯಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು ನೀಡಬಹುದು ಹಾಗೆ ಮಾಡಿದಾಗ ಅನಾಹುತ ಆಗುವುದಿಲ್ಲಒಂದು ಕ್ಷಣದ ಕೋಪಕ್ಕೆ ಮುಂದೆ ಅಳುವಂತೆ ಮಾಡಿಕೊಳ್ಳಬಾರದು ನಾವೇ ನಮ್ಮ ಸುಖಕ್ಕೆ ಕೊಡಲಿ ಪೆಟ್ಟಕೊಟ್ಟಂತೆ,ಅದೇ ಕ್ರೋಧ ಕ್ರೋಧವನ್ನು ಮಾಡಬಾರದು ಎಂದು ಹೇಳುತ್ತಾಳೆ.



ಇನ್ನೊಬ್ಬರನ್ನು ನೋಡಿ ಅಸೂಯೆ ಪಡದಿರುವವರಲ್ಲಿ ವಾಸ ಮಾಡುತ್ತೇನೆ. ಇನ್ನಬ್ಬರ ಗುಣ ಪರಮಾಣುವಿನಷ್ಟು ಇದ್ದರೂ ಅದನ್ನೇ ಹಿರಿದಾಗಿ ಮಾಡಿನೋಡುವ ವಿಶಾಲ ಗುಣವಿರಬೇಕು ಅಂತಹವರಲ್ಲಿ ಲಕ್ಷ್ಮಿ ದೇವಿ ಜೊತೆಗೆ ಪರಮಾತ್ಮನು ನೆಲೆಸುತ್ತಾನೆ. ಗುಣಗಳನ್ನು ಪೂಜನೀಯವಾಗಿ ನೋಡಬೇಕು ಎಂದು ಕವಿ ಹೇಳುವಂತೆ ಗುಣಗಳನ್ನು ಪ್ರೀತಿಸುವ ಗುಣಗಳನ್ನು ಗೌರವಿಸುವ ವಿಶಾಲ ಭಾವನೆಯಿದ್ದರೆ ಒಬ್ಬೊಬ್ಬರಲ್ಲಿ ಇರುವ ಗುಣಗಳನ್ನು ಗುರುತಿಸಿದರೆ ಸಾಲದು ಆ ಗುಣವನ್ನು ನನ್ನಲ್ಲಿ ಬರುವಂತೆ ಪ್ರಯತ್ನ ಮಾಡಬೇಕು. ಒಬ್ಬೊಬ್ಬರಲ್ಲಿ ಒಂದು ಗುಣವಿದೆ. ಅವುಗಳನ್ನು ನಮ್ಮಲ್ಲಿ ನಾವು ಬೆಳೆಸಿಕೊಂಡರೆ ಉತ್ತಮನಾಗುತ್ತಾನೆ. ಆಗ ಅವನಲ್ಲಿ ಅಸೂಯೆ ಬರುವುದಿಲ್ಲ, ಅಂತಹ ಗುಣವಂತರಲ್ಲಿ ನನ್ನ ಸನ್ನಿಧಾನ ಇರುತ್ತದೆ ಎಂದು ದೇವಿ ಹೇಳುತ್ತಾಳೆ.


ಅಕ್ಷರ ರೂಪ: ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top