ಎಸ್.ಡಿ.ಎಂ. ಎನ್.ಎಸ್.ಎಸ್. ಘಟಕದಿಂದ ಕ್ಷೇತ್ರ ಭೇಟಿ

Upayuktha
0


ಉಜಿರೆ: ಐದು ವರ್ಷಗಳ ಹಿಂದೆ ಪ್ರವಾಹಕ್ಕೆ ತುತ್ತಾಗಿದ್ದ ಚಾರ್ಮಾಡಿ ಸಮೀಪದ ಕೊಳಂಬೆ ಪ್ರದೇಶಕ್ಕೆ ಉಜಿರೆಯ ಶ್ರೀ ಧ. ಮಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸ್ವಯಂಸೇವಕರು ಹಾಗೂ ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು ನಿನ್ನೆ (ಆ.8) ಭೇಟಿ ನೀಡಿ ಅವಲೋಕನ ನಡೆಸಿದರು.


(2019ರ ಆಗಸ್ಟ್ 9ರಂದು ಕೊಳಂಬೆ ಪ್ರದೇಶದಲ್ಲಿ ನೆರೆ ಬಂದು, ಕುಟುಂಬಗಳು ತಮ್ಮ ಸ್ವತ್ತು ಮತ್ತು ಮನೆಗಳನ್ನು ಕಳೆದುಕೊಂಡಿದ್ದ ಸಂದರ್ಭದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದೊಂದಿಗೆ ಶ್ರೀ ಧ. ಮಂ. ಕಾಲೇಜಿನ ಎನ್ನೆಸ್ಸೆಸ್ ಸ್ವಯಂಸೇವಕರು ನಿರಾಶ್ರಿತರಿಗೆ ನೆರವಾಗಿದ್ದರು.)


ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಮಾತನಾಡಿ, "ಐದು ವರ್ಷಗಳ ಹಿಂದೆ ಇಲ್ಲಿ ನಡೆದು ಬರಲೂ ಸಾಧ್ಯವಾಗದ ಪರಿಸ್ಥಿತಿ ಇತ್ತು. ಆದರೆ ಈಗ ಇಲ್ಲಿ ಆಗಿರುವ ಬದಲಾವಣೆ ಕಂಡಾಗ ಅತ್ಯಂತ ತೃಪ್ತಿಯಾಗುತ್ತದೆ. ಇಲ್ಲಿನ ಜನರ ಮೊಗದ ನಗು ನನಗೂ ಖುಷಿಯನ್ನು ತಂದಿದೆ” ಎಂದರು.


ಕೊಳಂಬೆ ಪ್ರದೇಶವನ್ನು ಅಭಿವೃದ್ಧಿಪಡಿಸುವಲ್ಲಿ ಮಾಧ್ಯಮದ ಪಾತ್ರವೂ ಬಹಳ ಪ್ರಶಂಸನೀಯ ಎಂದರಲ್ಲದೆ, ಕೇರಳದ ವಯನಾಡ್ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದರು.


ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಮಾತನಾಡಿ, "ಬದುಕು ಕಟ್ಟೋಣ ಬನ್ನಿ ತಂಡ ಕೊಳಂಬೆ ಊರಿನ ಜನರಿಗೆ ಮರುಭೂಮಿಯಲ್ಲಿ ಓಯಸಿಸ್ ದೊರೆತಂತೆ. 2019 ರ ಕಹಿ ಘಟನೆ ಈಗ ಸಿಹಿ ಘಟನೆಯಾಗಿ ಬದಲಾಗಿದೆ. ನಿಸ್ವಾರ್ಥ ಸೇವೆಯ ಮೂಲಕ ಬದುಕು ಕಟ್ಟೋಣ ಬನ್ನಿ ತಂಡ ಈ ಊರಿಗೆ ದೀಪವಾಗಿದೆ. ಪ್ರತಿಯೊಬ್ಬ ಪತ್ರಕರ್ತನೂ ಸ್ವಯಂಸೇವಕರಾಗಿ ಇಲ್ಲಿನ ಸಂಪೂರ್ಣ ಚಿತ್ರಣವನ್ನು ವರದಿಯ ಮೂಲಕ ರಾಜ್ಯದ ಪ್ರತೀ ಮೂಲೆಗೂ ತಲುಪುವಂತೆ ಮಾಡಿದ್ದಾರೆ. ವರದಿಯನ್ನು ಕಂಡು ರಾಜ್ಯದ ಮುಖ್ಯಮಂತ್ರಿ ಖುದ್ದಾಗಿ ಭೇಟಿ ನೀಡಿದ್ದು ನಮ್ಮ ಯಶಸ್ಸು ಎಂದೇ ಹೇಳಬಹುದು" ಎಂದರು.

 

ಊರಿನ ಪರವಾಗಿ ಗ್ರಾಮಸ್ಥೆ ಯಶೋದಾ ಅವರು ನೆರೆಯ ಸಂದರ್ಭದ ಕಷ್ಟಗಳು ಮತ್ತು ನಂತರದ ಸವಾಲುಗಳ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು.


ಪತ್ರಕರ್ತರಿಗೆ ಶಾಲು ಹೊದಿಸಿ ಗೌರವ ನೀಡಲಾಯಿತು. ಊರಿನಲ್ಲಿ ಹರಿಯುತ್ತಿರುವ ಮೃತ್ಯುಂಜಯ ನದಿಯು ಸದಾ ಶಾಂತವಾಗಿರಲಿ ಎನ್ನುವ ಪ್ರಾರ್ಥನೆಯೊಂದಿಗೆ ನದಿಗೆ ಹಾಲೆರೆಯಲಾಯಿತು. ವಯನಾಡ್ ದುರಂತದಲ್ಲಿ ಮೃತಪಟ್ಟವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.


ಬದುಕು ಕಟ್ಟೋಣ ಬನ್ನಿ ತಂಡದ ಇನ್ನೋರ್ವ ಸಂಚಾಲಕ ರಾಜೇಶ್ ಪೈ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ವಂದಿಸಿದರು, ಕಿರಣ್ ಕಾರ್ಯಕ್ರಮ ನಿರೂಪಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top