ನಿಟ್ಟೆ: ರೋಟರಿಕ್ಲಬ್ ನಿಟ್ಟೆ, ರೋಟರಿ ಕ್ಲಬ್ ಬೆಳ್ಮಣ್ ಹಾಗೂ ನಿಟ್ಟೆ ರೈತ ಉತ್ಪಾದಕರ ಕಂಪನಿಯ ಸಂಯುಕ್ತ ಆಶ್ರಯದಲ್ಲಿ 'ರೈತ ಮಿತ್ರ- ರೈತ ಬಂಧು' ಕಾರ್ಯಕ್ರಮವು ಆ.17ರಂದು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸದಾನಂದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ರೊ. ಎಂ. ಪಿ. ಎಚ್. ಎಫ್. ಡಾ. ಭರತೇಶ್, ಮಾಜಿ ಗವರ್ನರ್, ರೋಟರಿ ಜಿಲ್ಲೆ-3182 ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಿಟ್ಟೆ ರೋಟರಿ ಕ್ಲಬ್ ನ ಅಧ್ಯಕ್ಷರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ರೊ. ಸತೀಶ್ ಕುಮಾರ್ ವಹಿಸಿದ್ದರು.
ಅಶೋಕ ಅಡ್ಯಂತಾಯ, ಅಧ್ಯಕ್ಷರು, ನಿಟ್ಟೆ ರೈತ ಉತ್ಪಾದಕರ ಕಂಪೆನಿ ಇವರು ಶುಭಾಸನೆಗೈದರು. ಅಭ್ಯಾಗತರಾಗಿ ರೊ. ಅನಿಲ್ ಡೇಸಾ, ಸಹಾಯಕ ಗವರ್ನರ್, ರೋಟರಿ ಜಿಲ್ಲೆ -3182, ರೊ. ಪಿ. ಹೆಚ್. ಎಫ್. ಸೂರ್ಯಕಾಂತ್ ಶೆಟ್ಟಿ, ಅಧ್ಯಕ್ಷರು, ರೈತ ಮಿತ್ರ ರೋಟರಿ ಜಿಲ್ಲೆ-3182 ಹಾಗೂ ಉಭಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.
ಸಭೆಯಲ್ಲಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ರಾವ್ ಕೃಷಿಯ ಮಾಹಿತಿಯೊಂದಿಗೆ ರೈತರ ಹಲವಾರು ಕೃಷಿ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸಿದರು. ಉಭಯ ಸಂಸ್ಥೆಗಳ ಸದಸ್ಯರು ಹಾಗೂ ಸುಮಾರು 200ಕ್ಕೂ ಮೇಲ್ಪಟ್ಟು ಫಲಾನುಭವಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ನಿಟ್ಟೆ ಇದರ ಕಾರ್ಯದರ್ಶಿ ರೊ. ಡಾ. ರಘುನಂದನ್ ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಸಲ್ಲಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ