ರೇಡಿಯೊ ಮಣಿಪಾಲದಲ್ಲಿ ಜನರೆಡೆಗೆ ಜ್ಞಾನವಾಹಿನಿ- 2ನೇ ಸಂಚಿಕೆ ಪ್ರಸಾರ

Upayuktha
0


ಮಣಿಪಾಲ: ಮಾಹೆಯ ಎಂ.ಐ.ಸಿ ಕ್ಯಾಂಪಸ್‌ನಲ್ಲಿರುವ ರೇಡಿಯೊ ಮಣಿಪಾಲ್ 90.4 Mhz ಸಮುದಾಯ ಬಾನುಲಿಯು ಪಂಚಾಯತ್ ರಾಜ್ ಸಚಿವಾಲಯ ಮತ್ತು ಕಮ್ಯುನಿಟಿ ರೇಡಿಯೊ ಅಸೋಸಿಯೇಶನ್ ಸಹಯೋಗದಲ್ಲಿ ಜನರೆಡೆಗೆ ಜ್ಞಾನವಾಹಿನಿ ಸರಣಿ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ.


ಈ ಸರಣಿಯ 2 ನೇ ಸಂಚಿಕೆಯಲ್ಲಿ ಅಧಿಕಾರ ಅಧ್ಯಕ್ಷೆಯದ್ದು -ಪತಿಯದ್ದಲ್ಲ ಎನ್ನುವ ವಿಷಯದ ಕುರಿತು ಪ್ರಹಸನ ಮತ್ತು ಸಂದರ್ಶನ ಪ್ರಸಾರವಾಗಲಿದೆ. ಇದು ಆಗಸ್ಟ್ ತಿಂಗಳ ದಿನಾಂಕ 22 ರಂದು ಗುರುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಬಾನುಲಿ ಸ್ವಯಂಸೇವಕರಾದ ಪ್ರಿಯಾ, ಅಂಬಲ್ಪಾಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಸುಜಾತ ಶೆಟ್ಟಿ ಮತ್ತು ಡಾ. ರಶ್ಮಿ ಅಮ್ಮೆಂಬಳ ಅಮ್ಮೆಂಬಳ ಕೆ.ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ 23 ರಂದು ಮಧ್ಯಾಹ್ನ 2 ಗಂಟೆಗೆ ಇದರ ಮರುಪ್ರಸಾರವಿರುವುದು.


ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ಮತ್ತು ಐಫೋನ್ ನ ಆಪ್ ಗಳ ಮೂಲಕವೂ ಈ ಕಾರ್ಯಕ್ರಮ ಕೇಳಬಹುದಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top