ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್: ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Upayuktha
0


ಪುತ್ತೂರು:
ಕರ್ನಾಟಕ ರಾಜ್ಯ ವೇಟ್  ಲಿಫ್ಟಿಂಗ್ ಸಂಘದ ಆಶ್ರಯದಲ್ಲಿ ಮೈಸೂರಿನ ಎಪಿಜೆ ಅಬ್ದುಲ್ ಕಲಾಂ ಇಂಡೋರ್ ಸ್ಟೇಡಿಯಂ ಮಹಾಜನ ಕಾಲೇಜಿನಲ್ಲಿ  ಆಗಸ್ಟ್ 16 ರಿಂದ 18ರವರೆಗೆ ನಡೆದ ರಾಜ್ಯಮಟ್ಟದ  ಯುವ ಕಿರಿಯ  ಮತ್ತು ಹಿರಿಯ ವಿಭಾಗದ ವೇಟ್  ಲಿಫ್ಟಿಂಗ್ ಚಾಂಪಿಯನ್ ಶಿಪ್  ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ  ಎರಡು ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.


ದ್ವಿತೀಯ ಕಲಾ ವಿಭಾಗದ ಧ್ರುವ ಜೆ ಭಂಡಾರಿ ಬೆಳ್ಳಿ ಪದಕವನ್ನು ಹಾಗೂ ಪ್ರಥಮ ಕಲಾ ವಿಭಾಗದ ದಿಶಾನ್ ಎಂ ಕಂಚಿನ ಪದಕವನ್ನು ಪಡೆದಿರುತ್ತಾರೆ. ಇವರಿಗೆ ಅಶ್ವತ್ ಕೆ ಎಸ್ ಮತ್ತು ಜಯಪ್ರಸಾದ್ ರೈ ತರಬೇತಿ ನೀಡಿರುತ್ತಾರೆ. ಧ್ರುವ ಜೆ ಭಂಡಾರಿ ಇವರು ಪಾಂಗಳಾಯಿ ನಿವಾಸಿ ನಯನಾ ಕೆ ಎಸ್ ರವರ ಪುತ್ರ. ದಿಶಾನ್ ಎಂ ಆರ್ಯಾಪು ನಿವಾಸಿ ಬಾಬು ಮರಿಕೆ ಮತ್ತು ಪವಿತ್ರ ದಂಪತಿಗಳ ಪುತ್ರ. ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಕ ನಿರ್ದೇಶಕರಾದ ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top