ನಿಟ್ಟೆ: ಪ್ರತಿಷ್ಠಿತ ನಿಟ್ಟೆ ರೋಟರಿ ಕ್ಲಬ್ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಂದು 6 ಜನ ನೂತನ ಸದಸ್ಯರನ್ನು ಸೇರ್ಪಡೆ ಮಾಡಲಾಯಿತು.
ಆಗಸ್ಟ್ ತಿಂಗಳು ನಿಟ್ಟೆ ರೋಟರಿ ಸಂಸ್ಥೆಗೆ ನೂತನ ಸದಸ್ಯರ ಸೇರ್ಪಡೆ ಮತ್ತು ಅಭಿವೃದ್ಧಿಯ ತಿಂಗಳಾಗಿದ್ದು ಅನ್ ಫೀಲ್ಡ್ ಕ್ಲಾಸಿಫಿಕೇಶನ್ ಅಡಿಯಲ್ಲಿ ಪದಗ್ರಹಣ ಸಮಾರಂಭದಲ್ಲಿ ಗುರುತಿಸಲಾದ 6 ಮಂದಿ ಮತ್ತು ಇನ್ನೋರ್ವ ನೂತನ ಸದಸ್ಯರನ್ನು ಸೇರಿಸಿ ಒಟ್ಟು 7 ಸದಸ್ಯರನ್ನು ಸೇರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷ ರೊ. ಸತೀಶ್ ಕುಮಾರ್, ಕಾರ್ಯದರ್ಶಿ ರೊ. ಡಾ. ರಘುನಂದನ್, ಮಾಜಿ ಸಹಾಯಕ ಗವರ್ನರ್‌ಗಳಾದ ರೊ. ಡಾ. ಶಶಿಕಾಂತ್ ಕರಿಂಕ, ರೊ. ಪಿ.ಹೆಚ್.ಎಫ್. ತುಕಾರಾಮ್ ಶೆಟ್ಟಿ, ರೊ. ಪಿ.ಹೆಚ್.ಎಫ್ ಯೋಗೀಶ್ ಹೆಗ್ಡೆ, ರೊ. ಪಿ.ಹೆಚ್.ಎಫ್ ಸುಧಾಕರ್ ಕೋಟ್ಯಾನ್, ರೊ. ಕರುಣಾಕರ ಶೆಟ್ಟಿ, ರೊ. ಡಾ. ವೇಣುಗೋಪಾಲ, ರೊ. ಸುರೇಶ ಶೆಟ್ಟಿ, ರೊ. ಸುಮನಾ ಜಗದೀಶ್, ರೊ. ಡಾ. ದಿಲೀಪ್ ಕುಮಾರ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ