ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ

Upayuktha
0


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ವಿಭಾಗ ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ದ.ಕ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 39 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ 2024ರ ಕಾರ್ಯಕ್ರಮವು ವೆನ್‍ಲಾಕ್ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಹೆಚ್.ಆರ್ ತಿಮ್ಮಯ್ಯ ಮಾತನಾಡಿ, ಮಾನವನ ಸಾವಿನ ನಂತರ ಕಣ್ಣುಗಳು ಸುಟ್ಟು ಬುಧಿಯಾಗುವ ಬದಲು ನೇತ್ರಧಾನ ಮೂಲಕ ಇಬ್ಬರು  ಅಂಧರಿಗೆ  ಬೆಳಕೂ ನೀಡುವ ಮೂಲಕ ಜೀವ ಸಾರ್ಥಕತೆಯನ್ನು  ಪಡೆಯಬೇಕು. ಉಸಿರು ಶಾಶ್ವತವಲ್ಲ ಹೆಸರು ಮಾತ್ರ ಶಾಶ್ವತ. ನಮ್ಮ ಹೆಸರು ಶಾಶ್ವತವಾಗಬೇಕಾದರೆ ನಮ್ಮ ಸಾವಿನ ನಂತರ ಅಂಗಾಂಗದಾನ/ ನೇತ್ರದಾನದ ಮೂಲಕ ನೇತ್ರದಾನ ಮಹಾದಾನ ನೇತ್ರದಾನ  ಮನೆತನದ ಸಂಸ್ಕøತಿಯಾಗಿ ಮಾಡೋಣ ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೆನ್‍ಲಾಕ್  ಸ್ಥಾನಿಕ ವೈದ್ಯಾಧಿಕಾರಿಗಳು  ಡಾ|| ಸುಧಾಕರ್ ಇವರು ಮಾತನಾಡುತ್ತಾ, ನೇತ್ರದಾನ ಮಾಡುವುದು ಮರಣದ ನಂತರ, ಮರಣದ ಬಗ್ಗೆ ಹೆದರಬಾರದು ಎಲ್ಲರೂ ನೇತ್ರದಾನ ಮಾಡುವ ಮೂಲಕ ಅಂಧದ ಬಾಳಿಕೆ ಬೆಳಕಾಗುವ! ಮುಂದಿನ ದಿನಗಳಲ್ಲಿ ನೇತ್ರದಾನದ ಕೊರತೆಯಾಗಂದತೆ ಮಾಡಬೇಕಾದರೆ ನಾವೆಲ್ಲರೂ ಇಂದೆ ನೇತ್ರದಾನ ನೊಂದವಾಣೆ ಮಾಡಲು ಸೂಚಿಸಿದರು.


ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಜ್ಯೋತಿ ಕೆ. ಮಾತನಾಡಿ ಈ ವರ್ಷದ ಘೋಷಣೆ "ನಾನು ಈಗ ಸ್ಪಷ್ಟವಾಗಿ ನೋಡುತ್ತೇನೆ"  ಎಂಬ ಘೋಷಣೆಯಂತೆ  ನೇತ್ರದಾನದ ಮಹತ್ವವನ್ನು ತಿಳಿಸಿದರು. 39 ನೇ ರಾಷ್ಟ್ರೀಯ ಅಂಧತ್ವ ನೇತ್ರ ದಿನ ಕಾರ್ಯಕ್ರಮದ ಪಾಕ್ಷಿಕ ಆಗಸ್ಟ್ 25 ರಂದು ಆರಂಭವಾಗಿ ಸಪ್ಟೆಂಬರ್ 08 ರವರೆಗೆ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ನೇತ್ರದಾನದ ಮಹತ್ವ, ಅರಿವು, ಜಾಗೃತಿಯನ್ನು ಸಮಾಜದಲ್ಲಿ ಮೂಡಿಸಬೇಕಾಗಿದೆ. ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಲ್ಲಿ ವ್ಯಾಪಕವಾಗಿ ಪ್ರಚಾರ/ ಜಾಗೃತಿಯ ಮೂಲಕ ನೇತ್ರದಾನದ ನೊಂದಾವಣೆಯನ್ನು ಮಾಡಿಸಬೇಕಾಗಿದೆ. ಹೆಚ್ಚಿನ ನೊಂದಾವಣೆ ಮೂಲಕ ನಮ್ಮ ಜಿಲ್ಲೆ ಮಾದರಿಯಾಗಲಿ  ಎಂದರು.


ಡಾ|| ಸೌಮ್ಯ ನೇತ್ರ ತಜ್ಞರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ನೇತ್ರದಾನ ಮಹತ್ವದ ಬಗ್ಗೆ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಡಾ|| ಅನಿತಾ ಕಿರಣ್ ಹಿರಿಯ ನೇತ್ರ ತಜ್ಞರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಹಾಗೂ ಕಚೇರಿ ಸಿಬ್ಬಂದಿಗಳು ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಅಧಿಕಾರಿ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮ ಅನುಷ್ಠಾನಾಧಿಕಾರಿ  ಡಾ|| ಸುದರ್ಶನ್, ವಂದಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top