ಮಂಗಳೂರು: ಸಂತ ಅಲೋಸಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರು ,ಎನ್ಇಪಿ 2020 ನಿಯಮದ ಪ್ರಕಾರ ಶಿಕ್ಷಣವನ್ನು ನೀಡುತ್ತಿದೆ. ಈ ಶಿಕ್ಷಣದ ಕಲಿಕೆಯಲ್ಲಿ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣವನ್ನೂ ಕಡ್ಡಾಯವಾಗಿ ನೀಡಲಾಗುತ್ತಿದೆ. ಈಗಾಗಲೇ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಪ್ರಾರಂಭಗೊಂಡಿದೆ.
ಅದೇ ರೀತಿಯಲ್ಲಿ ಆಯುಷ್ಮಾನ್ ಯೋಗ ಸಂಸ್ಥೆಯ ಕುಶಾಲಪ್ಪ ಗೌಡರ ಸಹಕಾರವೂ ಇದೆ. ಕಳೆದ ಮಂಗಳವಾರ (30-7-2024) ವಿವಿಯ ಪ್ರಥಮ ಬಿ ಬಿ ಎ ಹಾಗೂ ಬಿ. ಕಾಮ್ ವಿದ್ಯಾರ್ಥಿಗಳಿಗೆ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಹಾಗೂ ಅವರ ವಿದ್ಯಾರ್ಥಿಗಳಿಂದ ತರಬೇತಿ ಕಾರ್ಯಕ್ರಮ ನಡೆಯಿತು. ದೇಲಂಪಾಡಿ ಪ್ರತಿಷ್ಟಾನದ ನೀತಾ ಶೆಟ್ಟಿ ಹಾಗೂ ಸುಮಾ ಶೆಟ್ಟಿಯವರು ಸಹಕರಿಸಿದರು. ಕಾಲೇಜಿನ ಹಿರಿಯ ಯೋಗ ವಿದ್ಯಾರ್ಥಿಗಳಾದ ರೋಶನಿ ಶೆಣೈ ಹಾಗೂ ಪ್ರತಿನಿಧಿ ಶೆಟ್ಟಿ ಯೋಗ ತರಬೇತಿ ನೀಡುವಲ್ಲಿ ಸಹಕರಿಸುತ್ತಿದ್ದಾರೆ. ವಿವಿಯ ಕುಲಪತಿಗಳಾದ ರೆ. ಡಾ ಪ್ರವೀಣ್ ಮಾರ್ಟಿಸ್ ಎಸ್ ಜೆ ಅವರು ತಮ್ಮ ಸಂಸ್ಥೆಯಲ್ಲಿ ನೀಡುತ್ತಿರುವ ಯೋಗ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ