ಮಂಗಳೂರು: ಪಶ್ಚಿಮ ಬಂಗಾಳದಲ್ಲಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ಮೃಗೀಯ ರೀತಿಯಲ್ಲಿ ನಡೆದ ಅತ್ಯಾಚಾರ-ಕೊಲೆ ಇಡೀ ಮಾನವ ಕುಲವೇ ತಲೆತಗ್ಗಿಸುವಂತದ್ದು. ಅಂತಹದರಲ್ಲಿಯೂ ಆರೋಪಿಗಳನ್ನು ರಕ್ಷಿಸಲು ಯತ್ನಿಸಿದ ಮಮತಾ ಬ್ಯಾನರ್ಜಿ ಸರ್ಕಾರದ ಹೀನ ಮನಸ್ಥಿತಿಗೆ ಧಿಕ್ಕಾರವಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಮಾಧ್ಯಮಗಳು, ಪ್ರಧಾನಿಗಳು, ಅನೇಕ ಪಕ್ಷಗಳ ಸಹಿತ ಇಡೀ ದೇಶವೇ ಈ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿವೆ. ಕಲ್ಕತ್ತ ಹೈಕೋರ್ಟ್ ಅಂತೂ ದೀದಿ ಸರ್ಕಾರಕ್ಕೆ ಚಾಟಿ ಬೀಸಿ ತರಾಟೆಗೆ ತೆಗೆದುಕೊಂಡಿದ್ದರೂ ಕಾಂಗ್ರೆಸ್ ಮಾತ್ರ ತನ್ನ I.N.D.I.A ಮೈತ್ರಿಕೂಟದ ಪಕ್ಷವಾಗಿರುವ ಟಿಎಂಸಿ ವಿರುದ್ದ ಚಕಾರವೆತ್ತಿಲ್ಲ. ಅಲ್ಲಿ ಗಲಭೆ ಎಬ್ಬಿಸಿ ಸಾಕ್ಷ್ಯನಾಶಕ್ಕೆ ಯತ್ನಿಸಿದ ಟಿಎಂಸಿ ಸರ್ಕಾರದ ಅಕ್ಷಮ್ಯ ಕೃತ್ಯವನ್ನೂ ಕಾಂಗ್ರೆಸ್ ಖಂಡಿಸುವುದಿಲ್ಲ ಎಂದಾದರೆ ಏನರ್ಥ? ವೈದ್ಯರ ಮೇಲಿನ ಈ ದೌರ್ಜನ್ಯವನ್ನು ಖಂಡಿಸುತ್ತೇವೆ ಎಂದು ಮೊಸಳೆ ಕಣ್ಣೀರು ಸುರಿಸಿ ಮತ್ತೆ ಹಿಂದಿನಿಂದ ಮೈತ್ರಿಕೂಟದ ದೀದಿ ಸರ್ಕಾರದ ಬೆಂಬಲಕ್ಕೆ ನಿಲ್ಲುವ ದ್ವಿಮುಖ ನೀತಿಯನ್ನು ಬಿಟ್ಟು ಕೊನೆಪಕ್ಷ ಇಂತಹ ಘಟನೆಗಳಲ್ಲಾದರೂ ಈ ಕಾಂಗ್ರೆಸ್ಸಿಗರು ರಾಜಕಾರಣವನ್ನು ಬಿಡಲಿ ಎಂದು ಆಗ್ರಹಿಸಿದರು.
ವೈದ್ಯೋ ನಾರಾಯಣೋ ಹರಿ ಎನ್ನುವಂತಹ ಭಾರತೀಯ ಸಮಾಜದಲ್ಲಿ ಇಂತಹ ಘಟನೆಗಳು ಎಂದಿಗೂ ಸಹಿಸುವಂತದ್ದಲ್ಲ. ನಮ್ಮೆಲ್ಲರ ಯೋಗ ಕ್ಷೇಮವನ್ನು ಕಾಪಾಡುವ ವೈದ್ಯರ ಹಿತಕ್ಕಾಗಿ ಬಿಜೆಪಿ ಎಂದಿಗೂ ಬದ್ಧವಾಗಿದೆ. ಆ ಹೆಣ್ಣು ಮಗಳ ಸಾವಿಗೆ ನ್ಯಾಯ ಸಿಗಬೇಕಾದರೆ ತಪ್ಪಿತಸ್ಥರಿಗೆ ಶೀಘ್ರದಲ್ಲಿ ಮರಣದಂಡನೆ ಜಾರಿಯಾಗಲೇಬೇಕು ಎಂದು ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ