ಕೃಷ್ಣಂ ವಂದೇ ಜಗದ್ಗುರುಮ್

Upayuktha
0


ಪ್ರತಿ ವರ್ಷವೂ ಶ್ರಾವಣ ಮಾಸ ಬಂತೆಂದರೆ ನಮಗೆ. ನೆನಪಾಗುವುದು ಕೃಷ್ಣ ಜನ್ಮಾಷ್ಟಮಿ. ಇದನ್ನು ಮಕ್ಕಳ ಹಬ್ಬವೆಂದೇ ಪರಿಗಣಿಸಲಾಗುತ್ತಿದೆ.


ಶ್ರಾವಣ ಮಾಸದ ಅಷ್ಟಮಿಯ ರೋಹಿಣಿ ನಕ್ಷತ್ರವನ್ನೂ ಕೃಷ್ಣನ ಜನ್ಮ ದಿನವನ್ನಾಗಿ ಆಚರಿಸಲಾಗುತ್ತಿದೆ. ಕೃಷ್ಣನನ್ನು ಮಕ್ಕಳ ಮಾಣಿಕ್ಯ ಎಂದೇ ಪರಿಗಣಿಸಲಾಗುತ್ತದೆ. ಕೃಷ್ಣ ಎಂದರೆ. ನಮ್ಮ ನೆನಪಿಗೆ ಬರುವುದು ಮುದ್ದು ಕೃಷ್ಣ, ಕೊಳಲು ಊದುವ ಕೃಷ್ಣ, ಗೀತಾಚಾರ್ಯ ಕೃಷ್ಣ ಮುಂತಾದ ಕೃಷ್ಣನ ಚಿತ್ರಗಳೇ ನೆನಪಿಗೆ ಬರುತ್ತವೆ.


ಮಹಾಭಾರತದಲ್ಲಿ ಒಂದು ಪ್ರಸಂಗ ಬರುತ್ತದೆ. ಒಮ್ಮೆ ಕರ್ಣನು ಕೃಷ್ಣನ ಮುಂದೆ ತನ್ನ ದುರದೃಷ್ಟವನ್ನು ತೋಡಿಕೊಳ್ಳುತ್ತಿದ್ದ. ಆಗ ಕೃಷ್ಣನ ಉತ್ತರ ತುಂಬ ಸೊಗಸಾಗಿತ್ತು. "ನಾನು ಹುಟ್ಟುತ್ತಲೇ ನನ್ನನ್ನು ಅಗಲಿಸಿ ಗೋಕುಲದ ಗೌಳಿಗರ ಮನೆಯಲ್ಲಿ ಇಡಲಾಯಿತು.


16 ವರ್ಷ ಆದಮೇಲೆ ಉಪನಯನ ಸಂಸ್ಕಾರವಾಗಿ ವಿದ್ಯೆ ಕಲಿತೆ. ರಾಧೆ ಸಿಗಲಿಲ್ಲ. 16108 ಸ್ತ್ರೀಯರನ್ನು ಮದುವೆಯಾಗಿ ಸ್ತ್ರೀ ಲೋಲ ಎಂಬ ಅಪವಾದ ಹೊತ್ತೆ. ಮಹಾಭಾರತ ಯುದ್ಧ ನಿಲ್ಲಿಸಲಿಲ್ಲ ಎಂದು ಗಾಂಧಾರಿಯ ಶಾಪಕ್ಕೆ ಗುರಿಯಾದೆ. ನಿನಗೆ ಸಿಕ್ಕ ರಾಜ ಯೋಗ, ವಿದ್ಯೆ ಕಲಿಯುವ ಅವಕಾಶ ಸಿಗಲಿಲ್ಲ. ಆದರೆ ಕಡೆಗೆ ಗೀತೆಯನ್ನು ಬೋಧಿಸಿ ಗೀತಾಚಾರ್ಯಾ ಎಂದು ಹೆಸರಾದೆ.


ಅಂದರೆ ನಮ್ಮ ಹಣೆಬರಹವನ್ನು ಹಳಿಯುತ್ತಾ ಕೂಡದೆ ನಮಗೆ ಸಿಕ್ಕ ಪ್ರತಿಕೂಲ ಸನ್ನಿವೇಶಗಳಲ್ಲಿ ಕೂಡ ಸಾಧನೆ ಮಾಡಿ ತೋರಿಸಬೇಕು.

ನಮ್ಮ ಜೀವನವನ್ನು ಕೃಷ್ಣನ ಜೀವನದೊಂದಿಗೆ ಹೋಲಿಸಿಕೊಂಡರೆ ನಾವೇ ಎಷ್ಟೋ ಪಾಲು ಉತ್ತಮವಾಗಿದ್ದೇವೆ ಎನಿಸುತ್ತದೆ.


ಸ್ನೇಹಕ್ಕೆ ಒಂದು ಉತ್ತಮ ಉದಾಹರಣೆ ಕೃಷ್ಣ. ದಾಸರು ಹಾಡಿದ ಹಾಗೆ ಮುಷ್ಟಿ ಅವಲಕ್ಕಿಗೆ ರಾಜ್ಯವನ್ನೇ ಕೊಡಲು ತಯಾರಾದ ಕೃಷ್ಣ "Down to earth"ಗೇ ಒಂದು ಮಾದರಿ.


ಅವನು ಉಪದೇಶಿಸಿದ ಭಗವದ್ಗೀತೆ ಜಗತ್ತಿನ ಎಲ್ಲ ಭಾಷೆಗಳಿಗೆ. ಅನುವಾದಗೊಂಡಿದೆ. ಗಾಂಧೀಜಿಯವರು ಗೀತೆಯನ್ನು ತಮ್ಮ ತಾಯಿಯೆಂದು ಕರೆದಿದ್ದಾರೆ.

ಗೋ ಸೇವೆಯೇ ಗೋಪಾಲನ ಸೇವೆ ಎಂದು ಬೋಧಿಸಿ ಗೋವಿನ ಮಹತ್ವವನ್ನು ಸಾರಿದ. ಇಂದಿಗೂ ಪಶುಪಾಲನಾ ಇಲಾಖೆಯವರು ಗೋ ಸೇವೆಯೇ ಗೋಪಾಲನ ಸೇವೆ ಎಂಬುದನ್ನು ಘೋಷ ವಾಕ್ಯವನ್ನು ಇಟ್ಟುಕೊಂಡಿದ್ದಾರೆ.


ಎಲ್ಲ ಕಾಲಕ್ಕೂ ಸಲ್ಲುವ ಕೃಷ್ಣನಿಗೆ ನಮಿಸಿ ಅವನ ಚಿಂತನೆಗಳನ್ನು ರೂಢಿಸಿಕೊಂಡು ಬದುಕೋಣ.

ವಸುದೇವ ಸುತಂ ದೇವಂ | ಕಂಸ ಚಾಣೂರ 

ಮರ್ಧನಮ್ | ದೇವಕೀ ಪರಮಾನಂದಂ | ಕೃಷ್ಣಂ ವಂದೇ ಜಗದ್ಗುರುಂ ||


- ಗಾಯತ್ರಿ ಸುಂಕದ, ಬದಾಮಿ

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top