ಕೃಷ್ಣಜನ್ಮಾಷ್ಟಮಿ ನಮ್ಮ ದೇಶದಲ್ಲಿ ಆಚರಿಸುವ ಪ್ರಮುಖ ಹಬ್ಬ. ಶ್ರೀಕೃಷ್ಣನು ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ, ಗೋಕುಲಾಷ್ಟಮಿ, ಕೃಷ್ಣಾಷ್ಟಮಿ ಅಥವಾ ಶ್ರೀಜಯಂತಿ ಎಂದೂ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದಂದು ಆಚರಿಸುತ್ತಾರೆ. ಗೀತಗೋವಿಂದ ಮುಂತಾದ ಹಿಂದೂ ಗ್ರಂಥಗಳಲ್ಲಿ, ಕೃಷ್ಣನನ್ನು ಸರ್ವಶ್ರೇಷ್ಠ ದೇವರು ಮತ್ತು ಎಲ್ಲಾ ಅವತಾರಗಳ ಮೂಲ ಎಂದು ಹೇಳಲಾಗಿದೆ. ಹಿಂದೂ ಧರ್ಮದ ವೈಷ್ಣವ ಸಂಪ್ರದಾಯದಲ್ಲಿ ಇದು ಒಂದು ಪ್ರಮುಖ ಹಬ್ಬವಾಗಿದೆ. ಭಾಗವತ ಪುರಾಣದ ಪ್ರಕಾರ ಕೃಷ್ಣನ ಜೀವನದ ಆಚರಣೆಗಳು, ಮಧ್ಯರಾತ್ರಿಯವರೆಗೆ ಭಕ್ತಿಗೀತೆ (ಕೃಷ್ಣನ ಜನ್ಮ ಸಮಯ) ಮತ್ತು ಉಪವಾಸ (ಉಪವಾಸ), ಇತರ ವಿಷಯಗಳ ನಡುವೆ. ಇದನ್ನು ಭಾರತ ಮತ್ತು ವಿದೇಶಗಳಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ.
ಶ್ರೀ ಕೃಷ್ಣನು ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯ ದಿನ ಜನಿಸಿದನು. ‘ಜನ್ಮಾಷ್ಟಮಿ’ ಎಂಬ ಸಂಸ್ಕೃತ ಪದದ ಅರ್ಥವನ್ನು ‘ಜನ್ಮ’ ಮತ್ತು ‘ಅಷ್ಟಮಿ’ ಎಂಬ ಎರಡು ಪದಗಳಾಗಿ ವಿಭಜಿಸಲಾಗಿದೆ. ‘ಜನ್ಮ’ ಎಂಬ ಪದದ ಅರ್ಥ ‘ಹುಟ್ಟು’ ಮತ್ತು ‘ಅಷ್ಟಮಿ’ ಪದದ ಅರ್ಥ ‘ಎಂಟು’ ಎಂಬ ಅರ್ಥವಿದ್ದು, ಕೃಷ್ಣಜನ್ಮಾಷ್ಟಮಿಯು ಭಾದ್ರಪದ ಮಾಸದಲ್ಲಿ ಕರಾಳ ಹದಿನೈದು ದಿನಗಳ (ಕೃಷ್ಣ ಪಕ್ಷ) ಎಂಟನೇ ದಿನದಂದು ಆಚರಿಸುವ ಹಬ್ಬ ಎನ್ನುವ ಅರ್ಥವಿದೆ.
ಶ್ರೀಕೃಷ್ಣನ ಹುಟ್ಟಿನ ಇತಿಹಾಸ:
ಮಹಾಭಾರತ, ಪುರಾಣಗಳು ಮತ್ತು ಭಾಗವತದಲ್ಲಿ ಕೃಷ್ಣನ ಹುಟ್ಟಿನ ಬಗ್ಗೆ ಮಾಹಿತಿ ಇದೆ. ಭಗವಾನ್ ಮಹಾವಿಷ್ಣುವೇ ಅತ್ಯಂತ ಕ್ರೂರಿಯಾಗಿದ್ದ ಕಂಸ ಮತ್ತು ಚಾಣೂರರ ಸಂಹಾರಕ್ಕಾಗಿ ಶ್ರೀಕೃಷ್ಣನ ಅವತಾರವನ್ನು ಎತ್ತಿ ಭೂಮಿಯಲ್ಲಿ ಜನಿಸಿದನು. ಕಂಸನು ಮಥುರಾ ನಗರದ ರಾಜನಾಗಿದ್ದ ಉಗ್ರಸೇನನ ಮಗ. ಕಂಸನು ತನ್ನ ತಂದೆ ಉಗ್ರಸೇನನ್ನೇ ಬಂಧನದಲ್ಲಿಟ್ಟು ತಾನು ಪಟ್ಟಕ್ಕೇರಿ ರಾಜನಾದನು. ನಿನ್ನ ತಂಗಿಯ ಎಂಟನೇ ಪುತ್ರನಿಂದ ನಿನಗೆ ಮರಣ ಎನ್ನುವ ಅಶರೀರವಾಣಿ ಕಂಸನ ಕಿವಿಗೆ ಬಿದ್ದಿದ್ದರಿಂದ ತನ್ನ ತಂಗಿ ದೇವಕಿ ಮತ್ತು ಭಾವ ವಸುದೇವನನ್ನು ಕಾರಾಗೃಹದಲ್ಲಿ ಬಂಧಿಸಿದ್ದನು. ಕೃಷ್ಣನು ತನ್ನ ತಾಯಿ ದೇವಕಿ ಮತ್ತು ತಂದೆ ವಸುದೇವ ಅವರ ಎಂಟನೇ ಮಗ. ಅವನ ಜನನದ ಸಮಯದಲ್ಲಿ, ದೇವಕಿ ಮತ್ತು ವಸುದೇವರಿಗೆ ದೇವಕಿಯ ಅಣ್ಣ ಕಂಸನಿAದ ಅತಿಯಾದ ಕಿರುಕುಳವಿತ್ತು. ದೇವಕಿಯು ಕಾರಾಗ್ರಹದಲ್ಲೇ ಜನ್ಮ ನೀಡಿದ ಏಳು ಮಕ್ಕಳನ್ನೂ ಕಂಸನು ನೆಲಕ್ಕೆಸೆದು ಕೊಂದರೆ, ಎಂಟನೇ ಮಗು ಕೃಷ್ಣನು ಜನಿಸಿದ ಸಂದರ್ಭ ದೇವಕಿಯಿದ್ದ ಕಾರಾಗೃಹವನ್ನು ಕಾವಲು ಕಾಯುತ್ತಿದ್ದ ಕಾವಲುಗಾರರು ನಿದ್ರಿಸಿದರು ಮತ್ತು ಕಾರಾಗೃಹ ಹಾಗೂ ಕೋಟೆಯ ಬಾಗಿಲುಗಳು ಅದ್ಭುತವಾಗಿ ತೆರೆದುಕೊಂಡವು.
ಅದರ ಮೂಲಕ ಕೃಷ್ಣನ ತಂದೆ ವಸುದೇವನು ಮಧ್ಯರಾತ್ರಿಯಲ್ಲಿ ಬೃಂದಾವನದ ಕಡೆಗೆ ಬುಟ್ಟಿಯಲ್ಲಿಟ್ಟು ಧಾರಾಕಾರ ಸುರಿಯುತ್ತಿದ್ದ ಮಳೆಯಲ್ಲೇ ನಡೆದನು. ಆಗ ಮಹಾವಿಷ್ಣುವಿನ ವಾಹನ ಆದಿಶೇಷನೇ ಬುಟ್ಟಿಯಲ್ಲಿದ್ದ ಕೃಷ್ಣನಿಗೆ ರಕ್ಷಣೆಯನ್ನು ನೀಡುತ್ತಾ ತುಂಬಿ ಹರಿಯುತ್ತಿದ್ದ ಯಮುನಾ ನದಿಯನ್ನು ದಾಟಿ ಮಥುರೆಗೆ ಸಾಗಲು ಸಹಾಯ ಮಾಡಿದನು. ವಸುದೇವನು ಕೃಷ್ಣನನ್ನು ಮಥುರೆಯ ಸಾಕು ಪೋಷಕರಾದ ಯಶೋದಾ (ತಾಯಿ) ಮತ್ತು ನಂದನಿಗೆ ತಲುಪಿಸಿ, ನಂದನ ಪುತ್ರಿಯನ್ನು ವಸುದೇವನು ಮರಳಿ ಕಾರಾಗೃಹಕ್ಕೆ ತಂದನು.
ಮಗು ಕಾರಾಗೃಹಕ್ಕೆ ಬಂದೊಡನೆ ಅಳಲು ಪ್ರಾರಂಭಿಸಿತು. ಮಗುವಿನ ಧ್ವನಿ ಕೇಳಿದ ಕಂಸನು ತನ್ನ ಮೃತ್ಯುವನ್ನು ನೋಡಲು ಧಾವಿಸಿದನು. ಯಥಾಪ್ರಕಾರ ದೇವಕಿಗೆ ಹುಟ್ಟಿದ ಎಂಟನೇ ಶಿಶು, ನನ್ನ ಶತ್ರು ಎಂದು ಭ್ರಮಿಸಿ ಮಗುವನ್ನು ಕೊಲ್ಲಲು ಮುಂದಾಗುತ್ತಾನೆ. ಆದರೆ, ಆ ಶಿಶು ಆಕಾಶದತ್ತ ಹಾರಿ ನೀನು ನನ್ನನ್ನು ಕೊಲ್ಲಲಾರೆ, ನಿನ್ನನ್ನು ಕೊಲ್ಲುವಾತ ಈಗಾಗಲೆ ಜನಿಸಿದ್ದಾನೆ ಎಂದು ಹೇಳಿ ಮಾಯವಾಯಿತು. ಆ ಮಗುವೇ ಶ್ರೀಕೃಷ್ಣನ ಮುದ್ದಿನ ಸಹೋದರಿ ಸುಭದ್ರೆ. ಇಂತಹ ಕಠಿಣ ಸನ್ನಿವೇಶದಲ್ಲಿ ಹುಟ್ಟಿದ ಕೃಷ್ಣನ ಈ ದಂತಕಥೆಯ ನೆನಪಿಗಾಗಿ ಜನ್ಮಾಷ್ಟಮಿಯಂದು ಜನರು ಉಪವಾಸ ಆಚರಿಸುತ್ತಾರೆ, ಕೃಷ್ಣನಿಗೆ ಪ್ರೀತಿಯ ಭಕ್ತಿಗೀತೆಗಳನ್ನು ಹಾಡುತ್ತಾ ರಾತ್ರಿ ಜಾಗರಣೆ ಮಾಡುತ್ತಾರೆ. ಕೃಷ್ಣನ ಬಾಲ್ಯ ಮತ್ತು ಯೌವ್ವನದ ಉದ್ದಕ್ಕೂ, ಕೃಷ್ಣನ ಮಲ ಸಹೋದರ ಬಲರಾಮ ಅವನಿಗೆ ನಿರಂತರ ಒಡನಾಡಿ ಆಗಿದ್ದ. ವೃಜ, ಬೃಂದಾವನ ಮತ್ತು ದ್ರಾವರ್ಕ ಮಥುರಾದಲ್ಲಿ ಬೆಣ್ಣೆಯನ್ನು ಕದಿಯುವುದು, ಕರುಗಳನ್ನು ಓಡಿಸುವುದು, ಗೋಶಾಲೆಗಳಲ್ಲಿ ಆಡುವುದು ಮತ್ತು ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸುವುದು ಮುಂತಾದ ಪ್ರಮುಖ ತುಂಟಾಟಗಳಲ್ಲಿ ಕೃಷ್ಣನೊಂದಿಗೆ ಸೇರಿಕೊಂಡರು.
ಇತ್ತ ಕೃಷ್ಣ ಬೃಂದಾವನದಲ್ಲಿ ಯಶೋದೆಯ ಮಡಿಲಲ್ಲಿ ಬೆಳೆಯುತ್ತಿದ್ದ, ಕೃಷ್ಣ ಬದುಕಿರುವ ವಿಷಯ ತಿಳಿದ ಕಂಸನು ಕೃಷ್ಣನನ್ನು ಕೊಲ್ಲಲು ಹಲವು ರೀತಿಯ ತಂತ್ರಗಳ ಮೂಲಕ ಪ್ರಯತ್ನಿಸಿದರೂ ಅದರಲ್ಲಿ ವಿಫಲನಾದನು. ಕೃಷ್ಣನು ಬೆಳೆದು ತನ್ನ ಅಣ್ಣ ಬಲರಾಮನ ಜೊತೆಗೆ ಮಥುರಾ ನಗರಕ್ಕೆ ಬಂದು ಕಂಸ ಮತ್ತು ಚಾಣೂರರನ್ನು ಮಲ್ಲಯುದ್ಧದಲ್ಲಿ ಸಂಹರಿಸಿದನು. ನಂತರ ಮಥುರಾದ ಮಹಾರಾಜ ಉಗ್ರಸೇನನನ್ನು ಸೆರೆಯಿಂದ ಬಿಡುಗಡೆ ಮಾಡಿ ಅವನಿಗೆ ಪಟ್ಟಾಭಿಷೇಕ ಮಾಡಿದನು.
ಕೃಷ್ಣನ ಹುಟ್ಟಿದ ದಿನದಂದು ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸುತ್ತಾರೆ. ಜನ್ಮಾಷ್ಟಮಿಯ ದಿನ ಮನೆಯವರೆಲ್ಲರೂ ಬೆಳಗ್ಗೆ ಬೇಗನೇ ಎದ್ದು ಸ್ನಾನ ಮಾಡಿ, ಶುಭ್ರ ಉಡುಗೆ ಧರಿಸಿ, ಮನೆಯ ಕೋಣೆಗಳಲ್ಲಿ ಶ್ರೀಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸುತ್ತಾರೆ. ಶ್ರೀಕೃಷ್ಣನ ವಿಗ್ರಹಗಳನ್ನು ವೈವಿಧ್ಯಮಯ ರೀತಿಯಲ್ಲಿ ಸಿಂಗರಿಸುತ್ತಾರೆ. ದೇವರಿಗೆ ಹೂವು ಹಣ್ಣುಕಾಯಿ, ನೈವೇದ್ಯ ಮತ್ತು ನಾನಾ ಬಗೆಯ ತಿಂಡಿ ತಿನಸುಗಳನ್ನು ಇಟ್ಟು ಮಾಡಿ ಬಾಲ ಕೃಷ್ಣನನ್ನು ಪೂಜಿಸಿ ಅರ್ಘ್ಯವನ್ನು ಬಿಡಲಾಗುತ್ತದೆ. ಕೊನೆಗೆ ಕೃಷ್ಣನ ಮುಂದೆ ಕುಳಿತು ಭಜನೆ ಮತ್ತು ಸ್ತೊçÃತ್ರಗಳನ್ನು ಪಠಿಸಿ ಆರತಿ ಬೆಳಗಿ ಪ್ರಾರ್ಥಿಸುತ್ತಾರೆ.
ಗೋಕುಲದಲ್ಲಿದ್ದಾಗ ಕೃಷ್ಣನ ತುಂಟಾಟ ಹೇಳತೀರದು. ಕೃಷ್ಣನು ಬೆಣ್ಣೆಪ್ರಿಯನಾಗಿದ್ದು ಕದ್ದು ಬೆಣ್ಣೆ ತಿನ್ನುತ್ತಿದ್ದ. ಶ್ರೀ ಕೃಷ್ಣನ ತುಂಟಾಟಗಳು ಇಂದಿನ ಕೃಷ್ಣ ಜನ್ಮಾಷ್ಟಮಿ ದಿನ ಕೃಷ್ಣನಂತಹ ಮುದ್ದಾದ ಮಕ್ಕಳಲ್ಲಿ ಕಾಣಬಹುದು. ಜನ್ಮಾಷ್ಟಮಿಯ ದಿನ ಮಕ್ಕಳು ಮುದ್ದು ಕೃಷ್ಣನ ವೇಷ ತೊಟ್ಟು ಬೆಣ್ಣೆ ತಿನ್ನುವುದನ್ನು ನೋಡುವುದೇ ಚಂದ. ಜನ್ಮಾಷ್ಟಮಿಯ ದಿನ ಹೆತ್ತವರು ಗಂಡು ಮಕ್ಕಳಿಗೆ ಶ್ರೀ ಕೃಷ್ಣ, ಹೆಣ್ಣು ಮಕ್ಕಳಿಗೆ ರಾಧೆಯ ಉಡುಗೆ ತೊಡಿಸಿ ಸಂಭ್ರಮಿಸಿದರೆ, ಕೆಲವೆಡೆ ಮುದ್ದು ಕೃಷ್ಣ ಸ್ಪರ್ಧೆಯನ್ನು ಆಯೋಜಿಸುವ ಸ್ಪರ್ಧೆಯೂ ನಡೆಯುತ್ತದೆ. ಕೆಲವು ಕಡೆಗಳಲ್ಲಿ ಮೊಸರು ಕುಡಿಕೆ, ಜಾರುವ ಕಂಬವನ್ನೇರಿ ಮೊಸರಿನ ಕುಡಿಕೆ ತೆಗೆಯುವ ಮತ್ತು ಮಡಿಕೆ ಒಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು ನಡೆಯುತ್ತವೆ.
ಮಹಾರಾಷ್ಟçದಲ್ಲಿ ಜನ್ಮಾಷ್ಟಮಿಯಂದು ಮಣ್ಣಿನ ಮಡಕೆಗಳಲ್ಲಿ ಬೆಣ್ಣೆ ಮತ್ತು ಮೊಸರನ್ನು ಹಾಕಿ ಅದನ್ನು ಒಡೆಯುವ ‘ದಹಿಹಂಡಿ’ ಆಚರಣೆ ಎಂಬ ಸಾರ್ವಜನಿಕ ಆಟವನ್ನಾಡುತ್ತಾರೆ. ಮಡಕೆಯನ್ನು ನೆಲದಿಂದ ಬಹಳ ಎತ್ತರಕ್ಕೆ ಕಟ್ಟಲಾಗುತ್ತದೆ ಜನರು ಅಲ್ಲಿಗೆ ತಲುಪಲು ಮಾನವ ಪಿರಮಿಡ್ ರಚಿಸಿ, ಮಡಿಕೆಯನ್ನು ಒಡೆಯುತ್ತಾರೆ. ಈ ರೀತಿಯ ಆಚರಣೆಯನ್ನು ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಾಣಬಹುದಾಗಿದ್ದು, ಇದನ್ನು ಮೊಸರು ಕುಡಿಕೆ ಎನ್ನುತ್ತಾರೆ.
ಕೃಷ್ಣ ಜನ್ಮಾಷ್ಟಮಿ ಹಬ್ಬ ಕೃಷ್ಣನ ಜನನ ಹಾಗೂ ಅವನ ಜೀವನ ಸಾಧನೆಯ ಬಗ್ಗೆ ಭಕ್ತ ಜನರಿಗೆ ನೆನಪಿಸುತ್ತದೆ. ಈ ದಿನವನ್ನು ಆಚರಿಸುವ ಭಕ್ತರಿಗೆ ಶ್ರೀಕೃಷ್ಣನ ಅನುಗ್ರಹ ಸಿಕ್ಕಿ, ವೇಗವಾಗಿ ಓಡುತ್ತಿರುವ ಇಂದಿನ ದಿನದಲ್ಲಿ ಜನರು ನಿತ್ಯದ ಕೆಲಸದ ಜಂಜಾಟದಿAದ ಹೊರಬಂದು ಶ್ರೀಕೃಷ್ಣನ ಧ್ಯಾನದಲ್ಲಿ ತೊಡಗಲು, ಬಂಧುಗಳ ಮತ್ತು ಇತರರ ಜೊತೆಗೆ ಬೆರೆಯಲು, ಕುಟುಂಬಸ್ಥರ ಜೊತೆಗೆ ಖುಷಿಯಿಂದ ಕಾಲಕಳೆಯಲು ಸಾಧ್ಯವಾಗುತ್ತದೆ.
ಅಷ್ಟಮಿ ಉಪವಾಸದ ಮಹತ್ವವೇನು?
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ಮಾಡುವ ವ್ರತವನ್ನು ಅಥವಾ ಉಪವಾಸವನ್ನು ‘ವ್ರತರಾಜ' ಎಂದು ಕರೆಯುತ್ತಾರೆ. ಈ ದಿನ ಉಪವಾಸ ಮಾಡುವುದರಿಂದ ಉಳಿದೆಲ್ಲಾ ಉಪವಾಸಗಳ ಲಾಭವನ್ನೂ ಪಡೆದುಕೊಳ್ಳಬಹುದು ಎನ್ನುವ ನಂಬಿಕೆಯಿದೆ. ಈ ದಿನ ಶ್ರದ್ಧೆ ಹಾಗೂ ಭಕ್ತಿಯಿಂದ ಉಪವಾಸ ಮಾಡಿದರೆ ಜೀವನದಲ್ಲಿ ಸಂತೋಷ, ನೆಮ್ಮದಿ, ಸಮೃದ್ಧಿ, ದೀರ್ಘಾಯುಷ್ಯ ಮತ್ತು ಪಿತೃದೋಷ ಪರಿಹಾರ ಆಗುವುದೆಂಬ ನಂಬಿಕೆಯಿದೆ. ಕೃಷ್ಣ ಜನ್ಮಾಷ್ಟಮಿಯು ವಿಶ್ವಾದ್ಯಂತ ಹಿಂದೂಗಳಿಗೆ ಸಂತೋಷ, ಭಕ್ತಿಯ ಹಬ್ಬವಾಗಿದ್ದು, ಇದು ಜಗತ್ತಿಗೆ ಶ್ರೀಕೃಷ್ಣ ನೀಡಿದ ಸಂದೇಶವನ್ನು ನೆನಪಿಸುತ್ತದೆ. ಸದಾಚಾರ, ಸಹಾನುಭೂತಿ ಮತ್ತು ಭಕ್ತಿಯ ಜೀವನ ನಡೆಸಲು ಪ್ರೋತ್ಸಾಹ ನೀಡುವುದರಿಂದ ಕೃಷ್ಣನ ಜನ್ಮದಿನವನ್ನು ಆಚರಿಸಲು ಭಕ್ತರು ಎಲ್ಲೆಡೆ ಒಟ್ಟಾಗಿ ಸೇರುತ್ತಾರೆ.
- ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ