ಶ್ರೀ ಆಂಜನೇಯ ದೇವಸ್ಥಾನದಲ್ಲಿ ಹಿಂದೂ ಜನಜಾಗೃತಿ ಸಮಿತಿ ಸಾಮೂಹಿಕ ಸ್ವಚ್ಛತಾ ಅಭಿಯಾನ

Upayuktha
0


ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿಯು ಕಳೆದ 20 ವರ್ಷಗಳಿಂದ ಸಮಾಜದಲ್ಲಿನ ಹಿಂದೂ ಗಳಿಗೆ ರಾಷ್ಟ್ರಧರ್ಮ, ಧರ್ಮಜಾಗೃತಿ ಮತ್ತು ಧರ್ಮಶಿಕ್ಷಣವನ್ನು ಉಚಿತವಾಗಿ ನೀಡುತ್ತಾ ಬಂದಿದೆ ಹಾಗೆಯೇ ಅದರ ಒಂದು ಭಾಗವಾಗಿ ಎಲೆಕ್ಟ್ರಾನಿಕ್ ಸಿಟಿಯ ಆರ್ ಕೆ ಟೌನ್ ಶಿಪ್ ಯಾರೆಂಡೆನಹಳ್ಳಿಯ ಗ್ರಾಮ ದೇವತೆಯಾದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಧರ್ಮಶಿಕ್ಷಣ ವರ್ಗವನ್ನು ಪ್ರಾರಂಭಿಸಿ ಅಲ್ಲಿಯ ಸ್ಥಳೀಯ ಧರ್ಮಪ್ರೇಮಿಗಳಿಗೆ ದೇವಸ್ಥಾನದ ಮಹತ್ವ, ದೇವಸ್ಥಾನದ ಪಾವಿತ್ರ್ಯವನ್ನು ಉಳಿಸುವಲ್ಲಿ ನಮ್ಮೆಲ್ಲರ ಪಾತ್ರದ ಬಗ್ಗೆ ಮಾರ್ಗದರ್ಶನ ಮಾಡಲಾಯಿತು.


ದೇವಸ್ಥಾನಕ್ಕೆ ಹೋಗುವಾಗ ನಾವೆಲ್ಲರೂ ಯಾವ ಭಾವವನ್ನು ಇಟ್ಟುಕೊಂಡು ಹೋಗಬೇಕು, ಹಾಗೆಯೇ ದೇವಸ್ಥಾನದ ದರ್ಶನವನ್ನು ಯೋಗ್ಯ ರೀತಿಯಲ್ಲಿ ಹೇಗೆ ಪಡೆಯಬೇಕು, ಕಳಸ ದರ್ಶನದ ಮಹತ್ವ, ಧರ್ಮ ಧ್ವಜದ ದರ್ಶನವನ್ನು ನಾವು ಹೇಗೆ ಪಡೆಯಬೇಕು ಈ ಎಲ್ಲಾ ವಿಷಯದ ಕುರಿತು ಮಾಹಿತಿ ನೀಡಿ ಅದರ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು, ಅದರ ಜೊತೆಗೆ ದೇವಸ್ಥಾನದ ಪೂರ್ಣ ಸ್ವಚ್ಛತೆಯನ್ನು ಮಾಡಲಾಯಿತು ಹಾಗೂ ಎಲ್ಲರೂ ಸೇರಿ ಸಾಮೂಹಿಕವಾಗಿ ದೇವರ ನಾಮಜಪವನ್ನು ಮಾಡಿಸಲಾ ಯಿತು. ಈ ಸಂದರ್ಭದಲ್ಲಿ  ದೇವಸ್ಥಾನದ ಅಧ್ಯಕ್ಷ ಶಂಕ್ರಪ್ಪ ರೆಡ್ಡಿ, ಅಲ್ಲಿಯ ಸ್ಥಳೀಯರಾದ ಬೋರೆ ಗೌಡ, ಯೆಲ್ಲಾರೆಡ್ಡಿ, ಶಿವಕುಮಾರ್  ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಭವ್ಯ ಗೌಡ,  ಪವಿತ್ರ ಗೌಡ, ಮಾಲಾ ಪ್ರಸಾದ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top