ಪಣಜಿ: ಹಬ್ಬಗಳ ಆಚರಣೆ ನಮಗೆ ಹೊಸ ಹುರುಪು ತಂದುಕೊಡುತ್ತದೆ. ಮನೆ ಮನಗಳನ್ನು ಒಗ್ಗೂಡಿಸುವ ಕಾರ್ಯವನ್ನು ಸಹ ಈ ಹಬ್ಬಗಳು ಮಾಡುತ್ತದೆ. ಹಬ್ಬಗಳ ಆಚರಣೆ ನಮ್ಮಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಸಹೋದರತ್ವ ಬೆಸೆಯುವುದು ರಕ್ಷಾಬಂಧನ ಹಬ್ಬವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ನುಡಿದರು.
ಕರ್ನಾಟಕ ರಕ್ಷಣಾ ವೇದಿಕೆ ಗೋವಾ (ಪ್ರವೀಣಕುಮಾರ್ ಶೆಟ್ಟಿ ಬಣ) ಸಂಘಟನೆ ವತಿಯಿಂದ ವಾಸ್ಕೊದಲ್ಲಿ ಅಣ್ಣ ತಂಗಿಯರ ಪವಿತ್ರ ಹಬ್ಬ ರಕ್ಷಾ ಬಂಧನ ಹಬ್ಬವನ್ನು ಕರವೇ ಗೋವಾ ಮಹಿಳಾ ಘಟಕದ ವತಿಯಿಂದ ಆಚರಣೆ ಮಾಡಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯು ಗೋವಾದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಹೀಗೆ ಕಾರ್ಯಕ್ರಮಗಳ ಮೂಲಕ ಗೋವಾದಲ್ಲಿರುವ ಕನ್ನಡಿಗರು ಒಗ್ಗೂಡಿಸುವ ಕಾರ್ಯವನ್ನು ಕರವೇ ಮಾಡುತ್ತಿದೆ. ಇಷ್ಟೇ ಅಲ್ಲದೆಯೇ ಗೋವಾ ಕನ್ನಡಿಗರ ಸಮಸ್ಯೆಯನ್ನು ಬಗೆಹರಿಸಲು ಕರವೇ ಸದಾ ಕಂಕಣ ಬದ್ಧವಾಗಿದೆ. ಈಗಾಗಲೇ ಕರವೇ ಸಂಘಟನೆಯು ಕನ್ನಡಿಗರ ಹಲವು ಸಮಸ್ಯೆಯನ್ನು ಬಗೆಹರಿಸುವಲ್ಲಿ ಕರವೇ ಯಶಸ್ವಿಯಾಗಿದೆ ಎಂದು ಕರವೇ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ನುಡಿದರು.
ಈ ಸಂದರ್ಭದಲ್ಲಿ ಕರವೇ ಗೋವಾ ರಾಜ್ಯ ಕಾರ್ಯದರ್ಶಿ ಶಿವಾನಂದ ಮಸಬಿನಾಳ, ರಾಜ್ಯ ಖಜಾಂಚಿ ವೈ.ಎಸ್.ಬಿರಾದಾರ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಾಲ್ಮಿಕಿ, ಮಾಧ್ಯಮ ಸಂಚಾಲಕ ರಮೇಶ ಮಾದರ್, ಯುವ ಘಟಕದ ಅಧ್ಯಕ್ಷ ಮನೀಶ ಛಲವಾದಿ, ಶಿವಶರಣ ಹಡಪದ ಸಮಾಜದ ಅಧ್ಯಕ್ಷ ಮಹೇಶ ಹಡಪದ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ರುದ್ರಯ್ಯ ಹಿರೇಮಠ, ಕರವೇ ಸಡಾ ನಗರ ಘಟಕದ ಅಧ್ಯಕ್ಷ ಚಾಂದ್ ಸಾಬ್ ನದಾಫ್, ಉಪಾಧ್ಯಕ್ಷ ಶಿವು ತಲ್ವಾರ್, ಪರಶುರಾಮ ಮಡಿಕೇಶ್ವರ, ಬಸವರಾಜ ಮುರಾಳ, ಕರವೇ ಮಹಿಳಾ ಘಟಕದ ಮುಖಂಡರಾದ ಪಾರ್ವತಿ ಚಲವಾದಿ, ರೇಖಾ ಚಲವಾದಿ, ಗೀತಾ ಚಲವಾದಿ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ