ಅನಾಥಾಶ್ರಮದ ಮಕ್ಕಳಿಗೆ 'ಸಂಸ್ಕಾರ ನೋಟ್ ಬುಕ್' ವಿತರಣೆ

Upayuktha
0

ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿಯಿಂದ ಸ್ತುತ್ಯರ್ಹ ಕಾರ್ಯ



ಬೆಂಗಳೂರು: ಜೆಪಿ ನಗರದ 'ಪ್ರಸನ್ನ ಜ್ಯೋತಿ' ಹೋಂ ಫಾರ್ ಹೋಂ ಲೆಸ್ ಗರ್ಲ್ಸ್ ಆಶ್ರಮದ ಹೆಣ್ಣು ಮಕ್ಕಳಿಗೆ ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿ ವತಿಯಿಂದ 'ಸಮಾಜ ಸಹಾಯ' ಅಭಿಯಾನದ ಅಡಿಯಲ್ಲಿ ಸಂಸ್ಕಾರ ನೋಟ್ ಬುಕ್ ವಿತರಿಸಲಾಯಿತು.


ಈ ಸಂದರ್ಭದಲ್ಲಿ ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿಯ ಕಾರ್ಯಕರ್ತರಾದ ಸೌ. ಕೋಮಲ ಕಾಶಿ ಇವರು ಮಕ್ಕಳಿಗೆ ಸಂಸ್ಕಾರ ವಹಿಗಳ ಮಹತ್ವ ಮತ್ತು ಉದ್ದೇಶಗಳ ಬಗ್ಗೆ ತಿಳಿಸಿದರು ಹಾಗೂ ರಾಷ್ಟ್ರ ಪ್ರೇಮದ ವಿಷಯ, ಸನಾತನ ಧರ್ಮದ ಸಂಸ್ಕಾರಗಳ ಬಗ್ಗೆ ಮಾಹಿತಿ ನೀಡಿದರು. ಭಗವಂತನ ನಾಮಜಪ ಮಾಡುವುದರಿಂದ ಓದಿನಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಇನ್ನೂ ಹಲವಾರು ವಿಷಯಗಳನ್ನು ಮಕ್ಕಳಿಗೆ ತಿಳಿಸಿದರು. ಈ ವೇಳೆ ಸಮಿತಿಯ ಕಾರ್ಯಕರ್ತರಾದ ಸೌ. ಪಲ್ಲವಿ, ಸೌ. ಪುಣ್ಯವತಿ ಹಾಗೂ ಆಶ್ರಮದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top