ಮೂಡಾ ಹಗರಣ ಪ್ರಾಸಿಕ್ಯೂಷನ್: ಮಾಜಿ ಸಚಿವ ಅಭಯಚಂದ್ರ ಖಂಡನೆ

Chandrashekhara Kulamarva
0


ಮೂಡುಬಿದಿರೆ: ರಾಜ್ಯಪಾಲರು ಮೂಡಾ ಹಗರಣವನ್ನು ಪ್ರಾಶ್ಯೂಕೇಶನ್‌ಗೆ ಅನುಮೋದನೆ ನೀಡಿರುವುದನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಖಂಡಿಸಿದ್ದಾರೆ.


ಸಿದ್ಧರಾಮಯ್ಯ ಸರಕಾರದ ಪಂಚ ಗ್ಯಾರಂಟಿಗಳು ದೇಶಕ್ಕೆ ಮಾದರಿಯಾಗಿದ್ದು ಎಂದು ಹೊಗಳಿದ್ದ ರಾಜ್ಯಪಾಲರು ಈಗ ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸಿರುವುದು ವಿಷಾಧನೀಯ. ರಾಜ್ಯಪಾಲರು ಹಲವು ಬಾರಿ ಸಂಸದರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದು ತನ್ನತನವನ್ನು ಉಳಿಸಿಕೊಳ್ಳಬೇಕು. ರಾಜ್ಯಪಾಲರ ಈ ನಡೆಯನ್ನು ಕಾಂಗ್ರೆಸ್ ಪಕ್ಷವು ಹಿಂಸಾಚಾರವಿಲ್ಲದೆ ಕಾನೂನಾತ್ಮಕವಾಗಿ ಹೋರಾಟ ನಡೆಸಿ ಯಶಸ್ಸು ಕಾಣಲಿದೆ. 

 

ಸಿದ್ಧರಾಮಯ್ಯ ಅವರ ಪತ್ನಿಗೆ ಬಸವರಾಜ್ ಬೊಮ್ಮಾಯಿ ಅವರ ಕಾಲದಲ್ಲಿ ನಿವೇಶನ ಹಂಚಿಕೆಯಾಗಿದ್ದು ಸಿದ್ಧರಾಮಯ್ಯ ಅವರು ಶಿಫಾರಸು ಮಾಡಿಲ್ಲ. ಅವರು ಪ್ರಾಮಾಣಿಕ ಮತ್ತು ದಕ್ಷ ರಾಜಕಾರಣಿಯಾಗಿದ್ದು ದ್ವೇಷದಿಂದ ಮಾಡಿದ ಯಾವುದೇ ಕ್ರಮವನ್ನು ಜನ ಕ್ಷಮಿಸುವುದಿಲ್ಲ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top