ಮಂಗಳೂರು:ಬಿಕರ್ನಕಟ್ಟೆ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಕೊಂಕಣಿ ಮಾನ್ಯದ ದಿನದ ಆಚರಣೆ

Upayuktha
0


ಮಂಗಳೂರು:ಬಾಲ ಯೇಸುವಿನ ಪುಣ್ಯಕ್ಷೇತ್ರದ  ಕ್ಯಾಂಪಸ್‌ನಲ್ಲಿ ಆಗಸ್ಟ್ ೨೨, ಗುರುವಾರದಂದು ’ಕೊಂಕಣಿ ಮಾನ್ಯತಾ ದಿನ 2024’  ಮತ್ತು ಕೊಂಕಣಿ ಚಲನಚಿತ್ರದ ಪ್ರದರ್ಶನವನ್ನು ಅಯೋಜಿಸಲಾಗಿತ್ತು.


ಕೊಂಕಣಿ ಬಾವುಟವನ್ನು ಹಾರಿಸಿ ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡೆಮಿಯ ಅಧ್ಯಕ್ಷರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ, ಮಾತಾನಾಡಿದ ಅವರು. "ಕೊಂಕಣಿ ಭಾಷೆಯನ್ನು ಮನೆಯಲಿ ಮಾತನಾಡಬೇಕು ಮತ್ತು ಕೊಂಕಣಿ ಸಂಸ್ಕೃತಿಯ ಮಹತ್ವವನ್ನು ತಿಳಿದು ಮುಂದಿನ ಪೀಳಿಗೆಗೆ ಹಸ್ತಾತಂತರಿಸಬೇಕು ಎಂದು ಹೇಳಿದರು ಹಾಗೂ ಕೊಂಕಣಿ ಮಾನ್ಯತಾ ದಿನದ ಶುಭಾಶಯಗಳನ್ನು ಕೋರಿದರು.


ಭಾರತದಲ್ಲಿ ನಾವು ನೂರಾರು ಭಾಗಗಳನ್ನು ಮಾತನಾಡುತ್ತೇವೆ, ಆದರೆ ಕೆಲವೇ  ಭಾಗಗಳನ್ನು ಅಧಿಕೃತ ಭಾಗಯಾಗಿ ಗುರುತಿಸಲಾಗಿದೆ. ಕೊಂಕಣಿ ೧೮ ನೇ ಸ್ಥಾನವನ್ನು ಪಡೆದುಕೊಂಡಿದೆ. ಇದರ ಪ್ರಯುಕ್ತ ಕೊಂಕಣಿ ಭಾಷೆಯ ಪುಸ್ತಕ ಹಾಗೂ ಚಲನಚಿತ್ರದ ಪ್ರದರ್ಶನವನ್ನು ಆಯೋಜಿಸಲಾಗಿತ್ತು.


ಈ ಕಾರ್ಯಕ್ರಮಕ್ಕೆ ಚಿತ್ರನಟಿ ವೆಲ್ಸಿಟಾ ಡಯಾಸ್, ಶ್ರೀ ಜೋಸೆಫ್ ಮತಾಯಸ್, ಪಾ. ಮೆಲ್ವಿನ್ ಡಿಕುನ್ಹಾ, ಪಾ. ಐವನ್ ಡಿಸೋಜಾರವರು ವೇದಿಕೆಯಲ್ಲಿ  ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತಾದಿಗಳು ಕೊಂಕಣಿ ಚಲನಚಿತ್ರದ ಪ್ರದರ್ಶನವನ್ನು ವಿಕ್ಷೀಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top