ಮಂಗಳೂರು: ತಮ್ಮ ವಿದ್ಯಾರ್ಥಿಗಳಿಗೆ ಬಹು-ಮಾದರಿ ಶಿಕ್ಷಣವನ್ನು ನೀಡುವ ಶಾಲೆಗಳು ಪಠ್ಯಪುಸ್ತಕಗಳಂತಹ ಸಾಂಪ್ರದಾಯಿಕ ರೂಪಗಳನ್ನು ಮಾತ್ರ ಬಳಸುವ ಶಾಲೆಗಳಿಗಿಂತ ಉತ್ತಮ ಸಾಧನೆ ಮಾಡಿರುವುದು ಭಾರತದ ಪ್ರಮುಖ ಸ್ಕೂಲ್ ಎಜ್ಯುಟೆಕ್ ಸಂಸ್ಥೆಯಾದ ಲೀಡ್ ಗ್ರೂಪ್ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
ಭಾರತದಲ್ಲಿ ಪ್ರಸ್ತುತ ಶಾಲಾ ಶಿಕ್ಷಣದ ಸ್ಥಿತಿಯನ್ನು ವಿಶ್ಲೇಷಿಸುವ 'ದಿ ಪಲ್ಸ್ ಆಫ್ ಸ್ಕೂಲ್ ಲೀಡರ್ಸ್ ಸರ್ವೆ' ಎಂಬ ಹೊಸ ಅಧ್ಯಯನ ವರದಿ ಬಿಡುಗಡೆ ಮಾಡಿದ್ದು, ರಾಷ್ಟ್ರವ್ಯಾಪಿ ಸಮೀಕ್ಷೆಯು ಸುಮಾರು 1.7 ಲಕ್ಷ ವಿದ್ಯಾರ್ಥಿಗಳನ್ನು ಪ್ರತಿನಿಧಿಸುವ 500 ಕ್ಕೂ ಅಧಿಕ ಖಾಸಗಿ ಶಾಲೆಗಳ ರೇಟಿಂಗ್‍ಗಳನ್ನು ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಲೀಡ್ ಗ್ರೂಪ್ ಸಿಇಒ ಮತ್ತು ಸಹ-ಸಂಸ್ಥಾಪಕ ಸುಮೀತ್ ಮೆಹ್ತಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪರಿಕಲ್ಪನಾ ತಿಳುವಳಿಕೆ, ಆತ್ಮವಿಶ್ವಾಸ, ಇಂಗ್ಲಿಷ್ ಮಾತನಾಡುವಿಕೆ ಮತ್ತು ಶಿಕ್ಷಣದ ಒಟ್ಟಾರೆ ಗುಣಮಟ್ಟ ಹೀಗೆ ನಾಲ್ಕು ನಿರ್ಣಾಯಕ ಮಾನದಂಡಗಳ ಆಧಾರದಲ್ಲಿ ಶಾಲೆಗಳು ರೇಟಿಂಗ್ ನೀಡುವಂತೆ ಸಮೀಕ್ಷೆಯಲ್ಲಿ ಕೇಳಲಾಗಿತ್ತು.
ಹೆಚ್ಚಿನ ಶಾಲೆಗಳು ಪರಿಕಲ್ಪನಾ ತಿಳುವಳಿಕೆ ಮತ್ತು ಒಟ್ಟಾರೆ ಗುಣಮಟ್ಟದ ಮೇಲೆ ಉನ್ನತವಾಗಿ ರೇಟಿಂಗ್ ಮಾಡಿಕೊಂಡಿದ್ದು, ವಿದ್ಯಾರ್ಥಿಗಳ ಆತ್ಮವಿಶ್ವಾಸದ ಮಟ್ಟ ಮತ್ತು ಇಂಗ್ಲಿಷ್ ಮಾತನಾಡುವ ಕೌಶಲ್ಯದಲ್ಲಿ ಅಗಾಧ ಅಂತರ ಇರುವುದು ಸ್ಪಷ್ಟವಾಗಿದೆ. ಕೇವಲ ಪಠ್ಯಪುಸ್ತಕ ಬೋಧಿಸುವ ಶಾಲೆಗಳಿಗಿಂತ ಪಠ್ಯಪುಸ್ತಕ, ವಿಡಿಯೊ ಮತ್ತು ಚಟುವಟಿಕೆಗಳ ಮೂಲಕ ಬೋಧಿಸುವ ಶಾಲೆಗಳ ಫಲಿತಾಂಶ ಉತ್ತಮವಾಗಿದೆ. ಈ ವಿಧಾನಗಳನ್ನು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2023 ಕೂಡಾ ಶಿಫಾರಸು ಮಾಡಿತ್ತು ಎಂದು ಪ್ರಕಟಣೆ ವಿವರಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ