ಕರ್ನಾಟಕ ಕಲಾ ದರ್ಶಿನಿಯಿಂದ 'ಶ್ರಾವಣ ಕಲೋತ್ಸವ 2024'

Upayuktha
0


ಬೆಂಗಳೂರು: ಕರ್ನಾಟಕ ಕಲಾ ದರ್ಶಿನಿ ಸಂಸ್ಥೆಯ ವತಿಯಿಂದ ಶನಿವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ 'ಶ್ರಾವಣ ಕಲೋತ್ಸವ-2024' ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.


ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಜಿ ಕಪ್ಪಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ 'ಯಕ್ಷಗಾನ ಕಲೆ ಯಾವ ಕಲೆಗೂ ಕಡಿಮೆ ಇಲ್ಲ, ಕರ್ನಾಟಕದ ಈ ಶ್ರೀಮಂತ ಕಲೆ ದೇಶ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಮೇಲುಗೈ ಸಾಧಿಸಬೇಕು' ಎಂದು ಶುಭಹಾರೈಸಿದರು.


ಅತಿಥಿಗಳಾಗಿ ಖ್ಯಾತ ಭರತನಾಟ್ಯ ಮತ್ತು ಕಥಕ್ ನೃತ್ಯ ಕಲಾವಿದೆ ಹಾಗೂ ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಶುಭಾ ಧನಂಜಯ, ಆದಾಯ ತೆರಿಗೆ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಧೀರೇಂದ್ರ, ಕಲಾ ಕುಟೀರದ ಗುರುಗಳಾದ ಮಾಲಾ ವೆಂಕಟೇಶ್, ಕರ್ನಾಟಕ ಕಲಾ ದರ್ಶಿನಿಯ ಅಧ್ಯಕ್ಷರು ಮಟ್ಟಿ ರಾಮಚಂದ್ರ ರಾವ್, ಕಾರ್ಯದರ್ಶಿಗಳು ಹಾಗೂ ಯಕ್ಷಗಾನ ಗುರು ಶ್ರೀನಿವಾಸ ಸಾಸ್ತಾನ ಉಪಸ್ಥಿತರಿದ್ದರು.

 


ಈ ಸಂದರ್ಭದಲ್ಲಿ ಡಾ ಸುಪ್ರೀತಾ ಗೌತಮ್ ಮತ್ತು ತಂಡದವರಿಂದ ಕರ್ನಾಟಕ ಸಂಗೀತ 'ನಾದ- ನೀಲಾಂಜನ' ಸಂಗೀತ ಕಾರ್ಯಕ್ರಮ, ವೇದಾಂತ ಮಾಲಾ ಕಲಾಕುಟೀರ ಹಾಗೂ ಕಲಾ ಕುಟೀರ ಇದರ ಗುರುಗಳಾದ ಮಾಲಾ ವೆಂಕಟೇಶ್ ಇವರ ಶಿಷ್ಯರಿಂದ ಭರತನಾಟ್ಯ, ಕರ್ನಾಟಕ ಕಲಾ ದರ್ಶಿನಿಯ ಮಕ್ಕಳ ತಂಡದಿಂದ ಯಕ್ಷಗಾನ ಪೂರ್ವರಂಗ ಮತ್ತು 'ಮೈಂದ ದಿವಿದ ಕಾಳಗ' ಯಕ್ಷಗಾನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿಶ್ವನಾಥ ಶೆಟ್ಟಿ, ಮೃದಂಗದಲ್ಲಿ ನರಸಿಂಹ ಆಚಾರ್ ಹಾಗೂ ಗೌತಮ್ ಸಾಸ್ತಾನ, ಚಂಡೆಯಲ್ಲಿ ಸುಬ್ರಹ್ಮಣ್ಯ ಸಾಸ್ತಾನ ಇದ್ದರು.


ನಂತರ ಕರ್ನಾಟಕ ಕಲಾ ದರ್ಶಿನಿಯ ಕಲಾವಿದರಿಂದ 'ಮೋಹಿನಿ ಭಸ್ಮಾಸುರ' ಎಂಬ ಯಕ್ಷಗಾನ ಪ್ರಸಂಗ ನಡೆಯಿತು. ಇದರಲ್ಲಿ ಭಾಗವತರಾಗಿ ವಿನಯ್ ಶೆಟ್ಟಿ, ಮೃದಂಗದಲ್ಲಿ ಎ.ಪಿ ಪಾಠಕ್, ಚಂಡೆಯಲ್ಲಿ ಮನೋಜ್ ಆಚಾರ್ ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top