ಬಾಗಲಕೋಟೆ: ಪ್ರತಿಭಾವಂತ ವಿದ್ಯಾರ್ಥಿನಿಗೆ ಸನ್ಮಾನ

Upayuktha
0


ಬಾಗಲಕೋಟೆ: ತಾಲೂಕಿನ ಬೆನಕಟ್ಟಿಯ ಸದ್ಬೋಧನ ಪೀಠದ ದತ್ತು ವಿದ್ಯಾರ್ಥಿನಿ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದ ಕುಮಾರಿ ಭಾರತಿ ಅರ್ಜುನ ಪರೀಟ ಈಗ ಇಂಜಿನಿಯರಿಂಗ್ ಪದವಿ ಮುಗಿಸಿ ಸಾಫ್ಟ್‌ವೇರ್ ಇಂಜಿನಿಯರಾಗಿ ಬೆಂಗಳೂರಿನಲ್ಲಿ ನೌಕರಿಗೆ ಸೇರಿಕೊಂಡಿದ್ದಾರೆ.


ಇದು ನಮ್ಮ ಪೀಠಕ್ಕೆ ಹೆಮ್ಮೆಯ ಸಂಗತಿ. ನಮ್ಮ ಸಮಾಜದ ಹಿರಿಯ ವೈದ್ಯ, ಬಾಗಲಕೋಟೆಯ ಚಿಕ್ಕಮಕ್ಕಳ ತಜ್ಞ ಡಾ. ಆರ್.ಟಿ.ಪಾಟೀಲ ಅವರು ಈ ವಿದ್ಯಾರ್ಥಿಯ ಕಲಿಕೆಗೆ ಆರ್ಥಿಕ ಸಹಾಯ ನೀಡಿದ್ದರು.


ರವಿವಾರ ಮೆಟಗುಡ್ಡ ಗ್ರಾಮದಲ್ಲಿ ಜರುಗಿದ ಸಮಾರಂಭದಲ್ಲಿ ಭಾರತಿ ಪರೀಟ ಅವಳನ್ನು ಗ್ರಾಮದ ಹೇಮ ವೇಮ ಸಂಘದ ಪರವಾಗಿ ಸನ್ಮಾನಿಸಲಾಯಿತು.


ಇದೇ ಸಂದರ್ಭದಲ್ಲಿ ಭಾರತಿ ನಮ್ಮ ಪೀಠಕ್ಕೆ ತನ್ನ ಮೊದಲ ತಿಂಗಳ ಸಂಬಳದಲ್ಲಿ 15000 ರೂಪಾಯಿಗಳನ್ನು ನಮ್ಮ ಪೀಠದ ಸಂಸ್ಥಾಪಕ ಅಧ್ಯಕ್ಷ ರಾಗಿದ್ದ, ದಿವಂಗತ ಡಾ. ಶಿವಣ್ಣ ಅಮಾತೆಪ್ಪನವರ ಅವರ ಪುತ್ರ, ಪೀಠದ ಸಂಚಾಲಕ ಮಾಲತೇಶ ಅಮಾತೆಪ್ಪನವರ ಅವರಿಗೆ ಭಾರತಿ 15000 ರೂಪಾಯಿಗಳನ್ನು ನೀಡಿದರು. ಈ ಸಂದರ್ಭದಲ್ಲಿ ಪೂಜ್ಯರು, ಶರಣರು, ಗ್ರಾಮದ ಹಿರಿಯರಾದ ಶಿವನಗೌಡ ಪಾಟೀಲ, ಪೀಠದ ಕಾರ್ಯಕರ್ತರಾದ ರಮೇಶ ಅಣ್ಣಿಗೇರಿ, ಏಚ್.ಜಿ.ಹುದ್ದಾರ, ಈಶ್ವರ ಕೋಣಪ್ಪನವರ, ಶ್ರೀನಿವಾಸ ಬೆನಕಟ್ಟಿ ಹಾಗೂ ಭಾರತಿ ಅವರ ತಂದೆ ಅರ್ಜುನ ಪರೀಟ ಇದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top