ಒಡಹುಟ್ಟದಿದ್ದರೂ ಅಚ್ಚುಮೆಚ್ಚಿನ ಅಣ್ಣಂದಿರು

Upayuktha
0


ಮ್ಮ ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಸಂಬಂಧಗಳಿಗೆ ಅದರದೇ ಆದ ಮಹತ್ವವಿದೆ. ಅಪವಿತ್ರ ಬಂಧಗಳಿಗೆ ಬೆಲೆ ಕಟ್ಟಲು ಅಸಾಧ್ಯ. ಅಂತಹುಗಳಲ್ಲಿ ಸಹೋದರ ಸಹೋದರಿಯರ ಬಾಂಧವ್ಯವನ್ನು ಪದಗಳಲ್ಲಿ ವರ್ಣಿಸಲು ಕಷ್ಟಸಾಧ್ಯ. ಒಂದು ಮನೆಯಲ್ಲಿ ಅಣ್ಣ ತಂಗಿಯರಿರುವರೆಂದರೆ ಆ ಮನೆಯ ಲಕ್ಷಣಗಳೇ ಬೇರೆ. ಬಾಲ್ಯದ ಆರಂಭದಲ್ಲಿ ಅಣ್ಣ ತಂಗಿಯನ್ನು ಪೋಷಣೆ ಮಾಡುವುದು, ನಂತರ ಬೆಳೆದಂತೆ ಆ ಮುದ್ದು ಮುದ್ದಾದ ಕಿತ್ತಾಟಗಳು - ಚೇಷ್ಟೆಗಳು, ಪ್ರೀತಿ ಮನದಲ್ಲಿದ್ದರೂ ಎದುರಿಗೆ ಹೊಡೆದಾಟ, ತಂಗಿಯಲ್ಲಿ ಹೇಳಿಕೊಳ್ಳದಿದ್ದರೂ ಅಣ್ಣನಲ್ಲಿರುವ ಕಾಳಜಿ ಮತ್ತು ರಕ್ಷಣೆಯ ಭಾವ. ಅದೆಷ್ಟು ವರ್ಣಿಸಿದರೂ ಆ ಭಾವನೆಗಳನ್ನು ಪದಗಳಲ್ಲಿ ಕಟ್ಟಿಕೊಡಲು ಅಸಾಧ್ಯ.


ಈ ಅಣ್ಣ ತಂಗಿ ಸಂಬಂಧವನ್ನು ನಾನು ಸ್ವತಃ ಅನುಭವಿಸಲಾಗದಿದ್ರೂ, ದೂರದಿಂದ ನೋಡಿ ಇದು ಎಷ್ಟು ಚೆಂದ ಅಲ್ವಾ ಅಂತ ಬಾಲ್ಯದಲ್ಲಿ ಯೋಚನೆ ಮಾಡ್ತಾ ಇದ್ದೆ. ನನಗೆ ತಮ್ಮ ಇದ್ದರು ಸಹ, ಆ ಹಿರಿಯ ಸಹೋದರನ ಸಂಬಂಧವೇ ಬೇರೆ ಎಂಬ ಭಾವನೆಯಲ್ಲಿದ್ದೆ. ಆದರೆ ದಿನ ಕಳೆದಂತೆ ಆತನೇ ಅಣ್ಣನ ಸ್ಥಾನವನ್ನು ತುಂಬುವಂತೆ ವರ್ತಿಸುದ್ದರಿಂದ ನನ್ನಲ್ಲಿನ ಅಳುಕು ಕಡಿಮೆಯಾಗುತ್ತಿತ್ತು. ಅಷ್ಟೇ ಅಲ್ಲದೆ ಕುಟುಂಬದವರೆಲ್ಲ ಒಂದುಗೂಡಿದಾಗ, ಅಣ್ಣ ತಮ್ಮಂದಿರು ಸಿಕ್ಕಾಗ ನನಗೂ ನನ್ನವರಿದ್ದಾರೆ ಎಂಬ ಭಾವನೆ ಮಾಡುತ್ತಿತ್ತು.


ಶಾಲಾ ದಿನಗಳಲ್ಲಂತೂ, ರಕ್ಷಾಬಂಧನದ ಆಚರಣೆಯು ಒಂದು ದೊಡ್ಡ ಹಬ್ಬವಿದ್ದಂತಿತ್ತು. ಹಿಂದಿನ ದಿನವೇ ಅಪ್ಪ ಅಮ್ಮಂದಿರಲ್ಲಿ ಹಠ ಮಾಡಿ ಪೇಟೆಗೆ ಹೋಗಿ ಬಣ್ಣ ಬಣ್ಣದ ರಾಖಿಯ ಸರಮಾಲೆಯನ್ನೇ ಖರೀದಿಸಿ, ಮನೆಯಲ್ಲಿ ಪೂಜೆಯನ್ನು ಮಾಡಿ, ದೇವಸ್ಥಾನಕ್ಕೆ ತೆರಳಿ, ಸಹೋದರ ಸಹೋದರಿಯರಿಗೆ ರಾಕಿಯನ್ನು ಕಟ್ಟಿ, ಆಶೀರ್ವಾದವನ್ನು ಪಡೆದುಕೊಂಡು ಶಾಲೆಯನ್ನ ಆಚರಣೆಗಾಗಿ ಕಾತುರದಿಂದ ತೆರಳುತ್ತಿದ್ದೆವು. ಶಾಲೆಯಲ್ಲಿ ಪರಸ್ಪರ ರಕ್ಷಣೆ ಕಟ್ಟಿ, ಯಾರ ಕೈಯಲ್ಲಿ ಎಷ್ಟು ರಾಕಿಗಳಾದವು? ಯಾವ ಯಾವ ವಿಧವಾದ ರಾಕಿಗಳಾದವು? ಎಂದು ನೋಡುತ್ತಿದ್ದೆವು. ನಾನು ಗಮನಿಸಿದಂತೆ ಬಾಲ್ಯದಲ್ಲಿ ಕೆಲವರು ಅಂತೂ ನನ್ನ ಕೈಯಲ್ಲೇ ಜಾಸ್ತಿ ರಾಕಿಗಳಾಗಬೇಕೆಂದು ಕೇಳಿ ಕೇಳಿ ರಾಖಿ ಕಟ್ಟಿಸಿಕೊಳ್ಳುವುದು, ತಾನೇ ತಂದರಾಕಿಯನ್ನು ಕಟ್ಟಿಸಿಕೊಳ್ಳುವುದು ಮಾಡುತ್ತಿದ್ದರು. ಆ ದಿನದಲ್ಲಿನ ಆಚರಣೆಗಳನ್ನು ಎಂದೆಂದಿಗೂ ಮರೆಯಲಾಗದು.


ಸುಮ್ಮನೆ ಆಚರಣೆಗೆ ಎಂದಾಗಲಿ ರಾಕಿಯನ್ನು ಕಟ್ಟಿಸಿಕೊಂಡ ಸಹೋದರರು, ಕಷ್ಟದಲ್ಲಿ ಸಹಾಯ ಮಾಡಿ ಹತ್ತಿರವಾದವರು, ಆಕಸ್ಮಿಕವಾಗಿ ಸಿಕ್ಕವರು, ಅವರಿಗೆ ಸಹೋದರಿಯರಿಲ್ಲವೆಂದು ನಮ್ಮನ್ನು ಸಹೋದರಿಯರಂತೆ ಕಂಡು ನಗುನಗುತ್ತಾ ಮಾತನಾಡುವವರು, ಹೀಗೆ ಶಾಲಾ-ಕಾಲೇಜುಗಳಲ್ಲಿ ಅಣ್ಣ ತಮ್ಮಂದಿರಾಗಿ ದೊರೆತ ಸಹೋದರರು ಎಂದಿಗೂ ಮನದಲ್ಲಿ ಅನನ್ಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಒಡಹುಟ್ಟಿನಿಂದ ತಂಗಿಯಾಗದಿದ್ದರೂ ಸ್ವಂತ ತಂಗಿಯಂತೆ ಪ್ರೀತಿಸಿ ಕಾಳಜಿ ಮಾಡುವ ಅಣ್ಣಂದಿರು ಸ್ವಂತ ಅಣ್ಣನಿಲ್ಲವೆಂಬ ಭಾವನೆಯನ್ನು ಮಾಯೆನ್ನಾಗಿಸಿದರು. ಪ್ರತಿಕ್ಷಣ ಪ್ರತಿ ಸಂದರ್ಭದಲ್ಲೂ, ಸುಖ- ದುಃಖಗಳಲ್ಲೂ ತಮ್ಮ ತಂಗಿಯಂತೆ ರಕ್ಷಣೆ ಮಾಡುವ ಅಣ್ಣಂದಿರು ದೊರೆತಿರುವುದೇ ಪುಣ್ಯ ಎಂದು ಹೇಳಬಹುದು. ಬರೀ ಪ್ರೀತಿ ಕಾಳಜಿಗಳಲ್ಲ ನಮ್ಮಲ್ಲೂ ಕಿತ್ತಾಟ ಜಗಳಾಟಗಳು ಎಲ್ಲಾ ಸಹೋದರ ಸಹೋದರಿರಲ್ಲಿರುವಂತೆಯೇ ಇದ್ದೇ ಇದೆ. ಎದುರಿಗೆ ಕಂಡಾಗ ಒಂದು ಪೆಟ್ಟು ಹೊಡೆಯುವುದರ ಮೂಲಕ ಶುರುವಾಗುವ ಸಂಭಾಷಣೆಗಳು ಪೆಟ್ಟನ್ನು ತಿಂದಾಗ ಆಗುವ ನೋವಿಗಿಂತ ಕೊಡುವ ಖುಷಿಯೇ ಹೆಚ್ಚು.


ಒಟ್ಟಾರೆ ಅಣ್ಣ ತಂಗಿಯರ ಸಂಬಂಧ ಒಂದು ಅನನ್ಯ ಬಂಧವೆಂದೇ ಹೇಳಬಹುದು. ರಕ್ತ ಸಂಬಂಧ ದಿಂದ ಅಣ್ಣ ತಂಗಿಯಾಗಿಲ್ಲದಿದ್ದರೂ ಮನದಲ್ಲಿ ಒಮ್ಮೆ ಅಣ್ಣ- ತಂಗಿಯಂದು ನೆನೆದರೆ ಆ ಬಂಧವು ಯಾವ ಬಂಧಕ್ಕೂ ಕಡಿಮೆಯೆನಿಸದು.


- ಸುಶ್ಮಿತಾ ಬಿ. ಆರ್.

ದ್ವಿತೀಯ ಬಿ.ಎ.

ಚಾಣಕ್ಯ ವಿಶ್ವವಿದ್ಯಾನಿಲಯ

ದೇವನಹಳ್ಳಿ, ಬೆಂಗಳೂರು

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top