ಮಂಗಳೂರು: ಕೆನರಾ ಕಾಲೇಜಿನಲ್ಲಿ ಭಾರತದ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಭಾರತೀಯ ಭೂಸೇನೆಯ ನಿವೃತ್ತ ಅಧಿಕಾರಿ ಬೆಳ್ಳಾಲ ಗೋಪಿನಾಥ ರಾವ್ ಮುಖ್ಯ ಅತಿಥಿಯಾಗಿದ್ದು ಧ್ವಜಾರೋಹಣ ಗೈದು ಮಾತನಾಡಿದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ದೇಶಪ್ರೇಮಿಗಳ ಸಮಾಧಿಯ ಮೇಲೆ ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಎಂಬ ನೆನಪು ನಮಗಿರಬೇಕು. ಮಾಧ್ಯಮಗಳನ್ನು ಬಹಳಷ್ಟು ಬಳಸುತ್ತಿರುವ ಇಂದಿನ ವಿದ್ಯಾರ್ಥಿಗಳು ಆ ಮೂಲಕವಾದರೂ ಭಾರತದ ಸ್ವಾತಂತ್ರ್ಯ ಸಂಗ್ರಾಮದ ನೈಜ ವಿಚಾರಗಳನ್ನು ಓದಿದರೆ ಈ ದಿನದ ಮಹತ್ವ ಏನೆಂದು ತಿಳಿಯಲು ಸಾಧ್ಯ ಎಂದರು.
ಕಾಲೇಜು ಸಂಚಾಲಕ ಸಿಎ ಎಂ ಜಗನ್ನಾಥ ಕಾಮತ್ ಮಾತನಾಡಿ, ಭಾರತವು ಮುಂದುವರಿಯುತ್ತಿರುವ ರಾಷ್ಟ್ರವಾಗಿರುವುದರಿಂದ ಮುಂದಿನ ನಾಗರಿಕರಾದ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲೆ ಪ್ರಸ್ತಾಪಿಸಿದರು. ರೋವರ್ಸ್ ಅಂಡ್ ರೇಂಜರ್ಸ್ ವಿದ್ಯಾರ್ಥಿ ವರದರಾಜ ಭಕ್ತ ಅತಿಥಿಗಳನ್ನು ಸ್ವಾಗತಿಸಿದರು. ಸೌರವ್ ಸಾಲಿಯಾನ್ ನಿರೂಪಿಸಿದರು. ಕಾಲೇಜಿನ ವ್ಯವಸ್ಥಾಪಕ ಕೆ ಶಿವಾನಂದ ಶೆಣೈ, ಆಡಳಿತಾಧಿಕಾರಿ ಡಾ.ದೀಪ್ತಿ ನಾಯಕ್, ಸಂಧ್ಯಾ ಕಾಲೇಜು ಪ್ರಾಂಶುಪಾಲೆ ಅನಿಲಾ, ರೋವರ್ಸ್ ಅಂಡ್
ರೇಂಜರ್ಸ್ ಅಧಿಕಾರಿಗಳಾದ ಸವಿತಾ ಡಿ.ಕೆ , ಕಾರ್ತಿಕ್ ಎನ್ ಶಿಕ್ಷಕ ಶಿಕ್ಷಕೇತರ ಸಿಬ್ಬಂಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ