ಮಂಗಳೂರು: ಕದರಿಕಾ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಂಗ ಸಂಸ್ಥೆಯಾದ ಕದ್ರಿ ಕ್ರಿಕೆಟರ್ಸ್ (ರಿ) ಇವರು ಆಯೋಜಿಸುವ 15ನೇ ವರ್ಷದ ಕದ್ರಿ ಸ್ಟಾರ್ ನೈಟ್ ಸಂಗೀತ ರಸ ಸಂಜೆ ಕಾರ್ಯಕ್ರಮವು ಇದೇ ಬರುವ ತಾರೀಕು ಆಗಸ್ಟ್ 27ರಂದು ಮಂಗಳವಾರ ಸಂಜೆ ಕದ್ರಿ ಮೊಸರುಕುಡಿಕೆ ಉತ್ಸವದ ಸಂದರ್ಭದಲ್ಲಿ ಕದ್ರಿ ಮೈದಾನದಲ್ಲಿ ನಡೆಯಲಿದೆ.
ಈ ಬಾರಿಯ ಕಾರ್ಯಕ್ರಮದಲ್ಲಿಯೂ ಸಹ ಖ್ಯಾತ ಚಿತ್ರ ನಟ ನಟಿಯರು ಹಾಗೂ ಹಿನ್ನೆಲೆ ಗಾಯಕರ ಸಂಗೀತ ಕಾರ್ಯಕ್ರಮ ನೀಡಲಿದ್ದು, ಬಹಳ ವರ್ಣ ರಂಜಿತವಾಗಿ ಅದ್ಧೂರಿಯಿಂದ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ ಕದ್ರಿ ಮನೋಹರ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕ ಕುನಾಲ್ ಗಾಂಜಾವಾಲಾ ಭಾಗವಹಿಸಲಿದ್ದು ಅಲ್ಲದೆ ಕನ್ನಡತಿ ಖ್ಯಾತಿಯ ಹಾಗೂ ಸ್ಯಾಂಡಲ್ವುಡ್ ನಟ ಕಿರಣ್ ರಾಜ್, ಸೈಮಾ ಪ್ರಶಸ್ತಿ ವಿಜೇತೆ ಕೃಷ್ಣಮ್ ಪ್ರಣಯ ಸಖಿ ಚಿತ್ರ ನಟಿ ಶರಣ್ಯ ಶೆಟ್ಟಿ, ಚಿತ್ರ ನಟಿ ರಾಧ್ಯಾ, ಖ್ಯಾತ ಚಿತ್ರ ನಿರ್ದೇಶಕ ಗುರುತೇಜ್ ಶೆಟ್ಟಿ, ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಲಿನ್, ಬಹುಭಾಷಾ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಖ್ಯಾತ ಹಿನ್ನೆಲೆ ಗಾಯಕ ವ್ಯಾಸರಾಜ್ ಸೋಸಲೆ, ಜಿಎ ಸರಿಗಮಪ ಖ್ಯಾತಿ ತನುಶ್ರೀ ಮಂಗಳೂರು, ಜೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರ ಹೀಗೆ ಹಲವು ಕಲಾವಿದರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇನ್ನು ವಿಶೇಷವಾಗಿ ಭಾರತೀಯ ಸೇನೆಯ ಕಾರ್ಗಿಲ್ ಯುದ್ಧದಲ್ಲಿ ಹೋರಾಟ ಮಾಡಿದ ಮಾಜಿ ಸೈನಿಕರು ಭಾಗವಹಿಸಲಿದ್ದು ಅವರನ್ನು ಸನ್ಮಾನಿಸುವ ಕಾರ್ಯಕ್ರಮವು ನಡೆಯಲಿದೆ ವಿಶೇಷವಾಗಿ ಮಳೆಯಿಂದ ಅಡ್ಡಿಯಾಗದಂತೆ ಕಾರ್ಯಕ್ರಮವು ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕದ್ರಿ ಕ್ರಿಕೆಟರ್ಸ್ ಕಾರ್ಯದರ್ಶಿ ರಾಘವೇಂದ್ರ ಬರವತ್ತಾಯ, ಸದಸ್ಯರುಗಳಾದ ಹೇಮಾನಂದ್, ತಾರಾನಾಥ್ ಶೆಟ್ಟಿ, ಶರಣ್ ಕದ್ರಿ, ಸುಜಿತ್ ಕದ್ರಿ, ಚೇತನ್ ಶಶಾಂಕ್, ಸಂದೀಪ್ ಕದ್ರಿ, ಲೋಹಿತ್ ಕದ್ರಿ, ಸುನಿಲ್ ಕದ್ರಿ, ಸಚಿನ್ ಕದ್ರಿ, ಸಹನ್ ಕದ್ರಿ, ಪ್ರತೀಕ್ ಶೆಟ್ಟಿ, ಸಾರ್ತಿಕ್ ಶೆಟ್ಟಿ, ಅವಿನಾಶ್ ರೈ, ಶ್ರವಣ್ ರಾಜ್ ಕದ್ರಿ, ಶ್ರೀನಾಥ್ ಕದ್ರಿ, ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ