ಲೋಕಸಭೆ ಚುನಾವಣೆ ನಂತರ ದೇಶವಿರೋಧಿ ಶಕ್ತಿಗಳು ಆಕ್ರಮಣಕಾರಿಯಾಗಿವೆ. ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಈಗ ಉದ್ದೇಶಪೂರ್ವಕವಾಗಿ ಜಮ್ಮುವಿನಲ್ಲಿ ನಡೆಸಲಾಗುತ್ತಿದೆ. ಪಂಜಾಬ, ಪಶ್ಚಿಮ ಬಂಗಾಳ, ಮಣಿಪುರ ಮಾತ್ರವಲ್ಲದೆ ದೇಶದ ಹಲವೆಡೆ ಹಿಂದೂಗಳ ಮೇಲೆ ದಾಳಿಗಳು ಹೆಚ್ಚುತ್ತಿದೆ. ಆದ್ದರಿಂದ, ಮುಂಬರುವ ಕಾಲವು ಬಹಳ ಕಠಿಣವಾಗಿದೆ. ದಾರ್ಶನಿಕ ಸಂತರು ಸಾಧನೆಯಿಂದ ಈ ವಾತಾವರಣವನ್ನು ಬದಲಾಯಿಸಬಹುದು ಎಂದು ಹೇಳಿದ್ದಾರೆ.
ಉದಾ : ಅರ್ಜುನನ ಬಳಿ ದೊಡ್ಡ ಸೈನ್ಯ ಇರಲಿಲ್ಲ; ಆದರೆ ಸಾಕ್ಷಾತ್ ಭಗವಾನ ಶ್ರೀಕೃಷ್ಣನು ಇದ್ದನು, ಹಾಗೆಯೇ ನಮ್ಮ ಬಳಿ ಧಾರ್ಮಿಕ ಶಕ್ತಿ, ಈಶ್ವರೀ ಶಕ್ತಿಯ ಆವಶ್ಯಕತೆಯಿದೆ. ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರತಿಯೊಬ್ಬ ಹಿಂದುವೂ ಸಾಧನೆ ಮಾಡುವುದು ಆವಶ್ಯಕವಾಗಿದೆ. ಈಗ ರಾಮರಾಜ್ಯದ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವನ್ನು ಪ್ರತ್ಯಕ್ಷ ಸಾಕಾರಗೊಳಿಸಲು ಸ್ವಕ್ಷಮತೆಯನುಸಾರ ತನು-ಮನ-ಧನ ಮತ್ತು ಪ್ರಸಂಗ ಬಿದ್ದರೆ ಸರ್ವಸ್ವವನ್ನು ತ್ಯಾಗ ಮಾಡುವ ಅಂದರೆ ಸರ್ವೋಚ್ಚ ಕೊಡುಗೆ ನೀಡುವ ಆವಶ್ಯಕತೆಯಿದೆ. ಈ ಸಂದೇಶವನ್ನು ಈ ಅಧಿವೇಶನದ ಮೂಲಕ ಹಿಂದೂಗಳಿಗೆ ನೀಡಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ