ಹಾನಗಲ್ಲ ಗುರು ಶ್ರೀ ಕುಮಾರೇಶ್ವರ ತಂಡಕ್ಕೆ ಭರ್ಜರಿ ಬೆಂಬಲ: ಚಾನಾಳ್ ಶೇಖರ್
ಸಿರುಗುಪ್ಪ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಕ್ಕೆ ದಿನಾಂಕ 21 ರಂದು ನಡೆಯಲಿರುವ ಚುನಾವಣೆ ಪ್ರಚಾರ ಕಾರ್ಯವು ತಾಲೂಕಿನ ತೆಕ್ಕಲಕೋಟೆಯ ಶ್ರೀ ಶರಣಬಸವೇಶ್ವರ ಸಭಾ ಮಂಟಪದಲ್ಲಿ ಸೋಮವಾರ ನಡೆಯಿತು.
ಕಳೆದ ಅವಧಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಕ್ಕೆ ಅತ್ಯುತ್ತಮವಾಗಿ ಕರ್ತವ್ಯ ನಿಭಾಯಿಸಿ ಮಹಾಸಭಾವನ್ನು ಉತ್ತಮ ವೇಗದಲ್ಲಿ ಅಭಿವೃದ್ಧಿಗೊಳಿಸಲು ಶ್ರಮಿಸುತ್ತಿರುವ ಇದೇ ಚಾನಾಳ್ ಶೇಖರ್ ತಂಡಕ್ಕೆ ತೆಕ್ಕಲಕೋಟೆಯ ಬಹುತೇಕ ಮತದಾರರು ಬೆಂಬಲಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚಾನಾಳು ಶೇಖರ್ ಮಾತನಾಡಿ, ನಿಮ್ಮೆಲ್ಲರ ವಿಶ್ವಾಸ ಮತ್ತು ಬೆಂಬಲದಿಂದಾಗಿ ಹೆಚ್ಚಿನ ಕೆಲಸ ಮಾಡಲು ಶಕ್ತನಾಗಿದ್ದೇನೆ ಈ ಬಾರಿ ಇನ್ನು ಹೆಚ್ಚಿನ ಕಾರ್ಯರೂಪಗಳ ಗುರಿ ಹೊಂದಿದ್ದೇವೆ ಎಲ್ಲರೂ ಸೇರಿ ಮಹಾಸಭಾ ಕಾರ್ಯಗಳನ್ನು ಗುರು ಕುಮಾರೇಶ್ವರ ಆಶೀರ್ವಾದ ಪಡೆದು ಮಾಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೋರಿ ವಿರೂಪಾಕ್ಷಪ್ಪ ನವರು ರೂಪನಗುಡಿ ಬಸವರಾಜನ್ ಅವರು ತೆಕ್ಕಲಕೋಟೆ ಸಿದ್ದಯ್ಯ ತಾತನವರು ಜಿಎಂ ವಿರೇಶ ತೆಕ್ಕಲಕೋಟೆಯವರು ಮಲ್ಲಿಕಾರ್ಜುನ ಎಂ ಆರ್ ಬಸವನಗೌಡ ವೀರನಗೌಡ ಇಬ್ರಾಂಪುರ ಕರೇಗೌಡ ಮುಂತಾದ ಮುಖಂಡರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ