ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಗುರಿ ಏನೆಂಬುವುದು ಸ್ಪಷ್ಟವಾಗಿರಬೇಕು. ನಾವು ಸ್ಪಷ್ಟವಾದ ಗುರಿ ರೂಪಿಸಿಕೊಂಡು ನಮ್ಮ ಕಲಿಕೆಯು ಮುಗಿದ ನಂತರ ನಾವು ಯಾವ ಹಾದಿಯಲ್ಲಿ ಮುಂದುವರೆಯಬೇಕು ಎಂದು ನಿರ್ಧರಿಸಿಕೊಂಡಿರಬೇಕು. ಯಾವ ಪದವಿ ಪಡೆದುಕೊಳ್ಳುತ್ತೇವೆ ಎಂಬುವುದಕ್ಕಿತ ಅದು ನಮ್ಮ ಮೇಲೆ ಯಾವ ರೀತಿಯಾದ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುವುದು ಮುಖ್ಯ. ನಮ್ಮ ಪ್ರತಿಭೆ, ಸಾಮರ್ಥ್ಯವನ್ನು ಗುರುತಿಸಿಕೊಳ್ಳುವುದೇ ಶಿಕ್ಷಣದ ಮೂಲ ಉದ್ದೇಶ.ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲೂ ಯಾವುದಾದರೊಂದು ಸುಪ್ತ ಪ್ರತಿಭೆಯು ಅಡಗಿರುತ್ತದೆ. ಅವುಗಳನ್ನು ಬೆಳೆಸಿ ಪೋಷಿಸಲು ಕಾಲೇಜಿನಲ್ಲಿ ಹಲವಾರು ಅವಕಾಶಗಳಿವೆ.ವಿದ್ಯಾರ್ಥಿಗಳೆಲ್ಲರೂ ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಸುಳ್ಯದ ರೋಟರಿ ಶಿಕ್ಷಣ ಸಂಸ್ಥೆ ಯ ಖಜಾಂಜಿ ಗಿರಿಜಶಂಕರ ಮಾತನಾಡುತ್ತಾ,ಶಿಕ್ಷಣ ಎಂಬುದು ಅರಿವನ್ನು ಮೂಡಿಸುವಂತದ್ದು. ವ್ಯಕ್ತಿಯ ಗುಣವನ್ನು ನಿರ್ಧರಿಸುವುದು ಅವನ ಆಂತರಿಕ ಶಕ್ತಿ. ವಿದ್ಯಾರ್ಥಿ ಜೀವನದಲ್ಲಿ ಸಂಕಲ್ಪ ಮತ್ತು ಆತ್ಮವಿಶ್ವಾಸ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಜೀವನವನ್ನು ನಿರ್ಲಕ್ಷ್ಯ ಮಾಡಬಾರದು.ವಿದ್ಯಾರ್ಥಿ ಜೀವನ ಎಂಬುದು ಒಮ್ಮೆ ಮಾತ್ರ ಸಿಗುವಂತದ್ದು. ಗುರುಗಳನ್ನು ಗೌರವಿಸಬೇಕು, ಅವರು ಏನೇ ಹೇಳಿದರು ಅದನ್ನು ಸಕಾರಾತ್ಮಆತ್ಮವಿಶ್ವಾಸಕವಾಗಿ ತೆಗೆದುಕೊಳ್ಳಬೇಕು.ವಿದ್ಯಾರ್ಥಿಗಳು ತಾಳ್ಮೆ, ಪಾರದರ್ಶಕತೆ, ,ಸಂಕಲ್ಪ ಮತ್ತು ಹಸನ್ಮುಖಿಯಾಗಿರುವುದು ಮುಖ್ಯ ಎಂದು ಹೇಳಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್, ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಲಾವಿಭಾಗದ ಡೀನ್ ಡಾ.ದುರ್ಗಾರತ್ನ ಸ್ವಾಗತಿಸಿ, ವಾಣಿಜ್ಯ ವಿಭಾಗದ ಡೀನ್ ಡಾ. ರವಿಕಲಾ ವಂದಿಸಿ, ಕನ್ನಡ ವಿಭಾಗ ಮುಖ್ಯಸ್ಥ ಡಾ.ಮನಮೋಹನ ಎಂ, ಇತಿಹಾಸ ವಿಭಾಗದ ಉಪನ್ಯಾಸಕ ಡಾ. ಪ್ರಮೋದ್ ಎಂ. ಜಿ ಹಾಗೂ ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕಾರ್ಯಕ್ರಮವನ್ನು ಕಲಾವಿಭಾಗದ ಡೀನ್ ಡಾ.ದುರ್ಗಾರತ್ನ ಸ್ವಾಗತಿಸಿ, ವಾಣಿಜ್ಯ ವಿಭಾಗದ ಡೀನ್ ಡಾ. ರವಿಕಲಾ ವಂದಿಸಿ, ಕನ್ನಡ ವಿಭಾಗ ಮುಖ್ಯಸ್ಥ ಡಾ.ಮನಮೋಹನ ಎಂ, ಇತಿಹಾಸ ವಿಭಾಗದ ಉಪನ್ಯಾಸಕ ಡಾ. ಪ್ರಮೋದ್ ಎಂ. ಜಿ ಹಾಗೂ ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾ ಕೆ.ಎಸ್ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ