ಪುಣೆ: ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ವಿಕಸನಗೊಂಡ ನಿಯಂತ್ರಕ ಮಾನದಂಡಗಳಿಂದ ಎದುರಾಗುವ ಸವಾಲುಗಳನ್ನು ಎದುರಿಸಲು 'ಹೆಚ್ಚು ಮೈಲೇಜ್ ಪಡೆಯಿರಿ ಅಥವಾ ಟ್ರಕ್ ಹಿಂತಿರುಸಿ' ಎಂಬ ಉದ್ಯಮದಲ್ಲೇ ಮೊದಲು ಎನಿಸಿದ ಉಪಕ್ರಮವನ್ನು ಪರಿಚಯಿಸಿದೆ.
ಈ ಮೂಲಕ ಮಹೀಂದ್ರಾ ಉದ್ಯಮ ಸಮೂಹದ ಭಾಗವಾಗಿರುವ ಮಹೀಂದ್ರಾ ಟ್ರಕ್ ಮತ್ತು ಬಸ್ ವಿಭಾಗ ತಮ್ಮ ಸಂಪೂರ್ಣ ಬಿಎಸ್ 6 ಒಬಿಡಿ-2 ಶ್ರೇಣಿಯ ಬಿಎಲ್‍ಎಝಡ್ ಒ ಎಕ್ಸ್, ಫ್ಯೂರಿಯೋ, ಅಪ್ಟಿಮೊ ಮತ್ತು ಜಾಯೋ ಶ್ರೇಣಿಗಳಿಗೆ ಹೆಚ್‍ಸಿ ವಿ, ಐಸಿವಿ, ಮತ್ತು ಎಲ್‍ಸಿವಿ ಟ್ರಕ್‍ಗಳು ಗ್ರಾಹಕರಿಗೆ ಸಂಪೂರ್ಣ ಮೌಲ್ಯದ ಪ್ರತಿಪಾದನೆಯನ್ನು ಘೋಷಿಸಿದೆ ಮಹೀಂದ್ರಾ ಸಮೂಹದ ಟ್ರಕ್, ಬಸ್, ಸಿಇ, ಏರೋಸ್ಪೇಸ್ ಮತ್ತು ಡಿಫೆನ್ಸ್ ಬ್ಯುಸಿನೆಸ್‍ಗಳ ಅಧ್ಯಕ್ಷವಿನೋದ್ ಸಹಾಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮೌಲ್ಯವರ್ಧನೆಗಳ ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು, ಮಹೀಂದ್ರಾ ತನ್ನ ಪ್ರತಿ ಸ್ಪರ್ಧಿಗಳ ವಾಹನಗಳು ಸೇರಿದಂತೆ 21 ಉತ್ಪನ್ನ ವರ್ಗಗಳ 71 ಮಾದರಿಗಳಲ್ಲಿ ಇಂಧನ ದಕ್ಷತೆಯ (ಡೀಸೆಲ್ + ಎಡಿ ಬ್ಲೂ) ಪರೀಕ್ಷೆಯನ್ನು ನಡೆಸಿದೆ ಎಂದು ಹೇಳಿದ್ದಾರೆ.
"ಹೆಚ್ಚು ಮೈಲೇಜ್ ಪಡೆಯಿರಿ ಅಥವಾ ಟ್ರಕ್ ಹಿಂತಿರುಗಿಸಿ' ಎಂದು ಗ್ರಾಹಕರಿಗೆ ನೀಡಲಾಗುತ್ತಿರುವ ಭರವಸೆ ಉನ್ನತ ಹೈಟೆಕ್ ಪರಿಣತಿಯನ್ನು ಪ್ರತಿಬಿಂಬಿಸುವ ಹೆಗ್ಗುರುತಾಗಿದೆ, ವಿಭಾಗದ ಆಳವಾದ ತಿಳುವಳಿಕೆ ಮತ್ತು ನಮ್ಮ ಗ್ರಾಹಕರ ಅಗತ್ಯತೆಗಳನ್ನು ಇದು ಅಭಿವೃದ್ಧಿಪಡಿಸುತ್ತದೆ ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ