ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ತಮ್ಮ ತವರು ಗ್ರಾಮ ಬಾಡಗಂಡಿಯ ಹೆಮ್ಮೆಯ ಪುತ್ರ, ಮಾಜಿ ಸಚಿವ ಎಸ್ ಆರ್ ಪಾಟೀಲರು ದೇಶವೇ ಬೆಕ್ಕಸ ಬೆರಗಾಗುವಂತೆ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಮಹಾವಿದ್ಯಾಲಯವನ್ನು ಪ್ರಾರಂಭಿಸಿ ಇಡೀ ಕಾರ್ಪೊರೇಟ್ ವ್ಯವಸ್ಥೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ.
ತಮ್ಮ ಗ್ರಾಮ ಬಾಡಗಂಡಿಯಲ್ಲಿ ಈಗಾಗಲೇ ಸಕ್ಕರೆ ಕಾರ್ಖಾನೆ, ಅಂತಾರಾಷ್ಟ್ರೀಯ ಶಾಲೆ ಮುಂತಾದ ಸಂಸ್ಥೆಗಳನ್ನು ಪ್ರಾರಂಭಿಸುವು ದರ ಮುಖಾಂತರ ಇಂದಿನ ಪಟ್ಟಣ ಕೇಂದ್ರೀಕೃತ ಮನಸ್ಸುಗಳಿಗೆ ಆಶ್ಚರ್ಯವನ್ನು ಉಂಟು ಮಾಡಿದ್ದಾರೆ. ಅವರ ತವರ ಪ್ರೀತಿ ತುಂಬಾ ದೊಡ್ಡದು.
ಈ ಹಿನ್ನೆಲೆಯಲ್ಲಿ ಬೀಳಗಿ ತಾಲೂಕಿನ ಕಾ.ನಿ.ಪ ಬಳಗವು ಬಾಗಲಕೋಟೆಯ ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವ ನೀಡಿದರು. ಈ ಸಂದರ್ಭದಲ್ಲಿ ಕಾ.ನಿ.ಪ ಗೌರವಾಧ್ಯಕ್ಷ ಕಿರಣ ಬಾಳಗೋಳ ಅಧ್ಯಕ್ಷ ಸುಭಾಸ್ ರಾಥೋಡ, ಮತ್ತು ಪದಾಧಿಕಾರಿಗಳಾದ ಡಿ.ಎಂ. ಸಾಹುಕಾರ, ಕಾಶೀನಾಥ್ ಸೋಮನ ಕಟ್ಟಿ, ಕಿರಣ ನಾಯಕರ, ಚನ್ನಬಸು ಚಲವಾದಿ ತಿಪ್ಪಣ್ಣ ಚಲವಾದಿ ನಾಗೇಶ್ ಗೆಚ್ಚಿನಮನಿ ಸಂತೋಷ ಕಳ್ಳಿಮನಿ ಮುಂತಾದವರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ