ಮಂಗಳೂರು: ಆರ್ಯ ಯಾನೆ ಮರಾಠ ಸಮಾಜ ಸಂಘಕ್ಕೆ 2024-25 ನೇ ಸಾಲಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇತ್ತೀಚೆಗೆ ಕಂಕನಾಡಿಯ ಸಂಘದ ಕಾರ್ಯಾಲಯದಲ್ಲಿ ನಡೆಯಿತು.
ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರೇಮಲತಾ ವೈ. ರಾವ್ ಸಂಘದ ಗೌರವಾಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಅಧ್ಯಕ್ಷರಾಗಿ ಯು. ಮೋಹನ್ ರಾವ್ ಭೋಂಸ್ಲೆ, ಉಪಾಧ್ಯಕ್ಷರಾಗಿ ಗಿರೀಶ್ ರಾವ್ ಭೋಂಸ್ಲೆ ಮತ್ತು ರಾಜೇಶ್ ಎಡನೀರು, ಕಾರ್ಯದರ್ಶಿಯಾಗಿ ನಿಖಿಲ್ ಜಾಧವ್, ಜೊತೆ ಕಾರ್ಯದರ್ಶಿಗಳಾಗಿ ಯು. ಶಿಶುಪಾಲ ರಾವ್ ಭೋಂಸ್ಲೆ ಮತ್ತು ಕುಸುಮಾಕರ ಚವ್ಹಾಣ್, ಕೋಶಾಧಿಕಾರಿಯಾಗಿ ಉದಯಶಂಕರ ಜಾಧವ್, ಉಪ ಕೋಶಾಧಿಕಾರಿಯಾಗಿ ವಾಣಿ ಜೆ. ಮೋರೆ ಅಧಿಕಾರ ವಹಿಸಿಕೊಂಡರು. ಮಹಿಳಾ ಘಟಕದ ಸಂಚಾಲಕಿ ಮತ್ತು ಯುವ ವೇದಿಕೆ ಸಂಚಾಲಕರಾಗಿ ಕ್ರಮವಾಗಿ ಪೂರ್ಣಿಮಾ ಚಂದ್ರಮಾನ್ ಮತ್ತು ಶೈಲೇಶ್ ಬಹುಮಾನ ಪದಗ್ರಹಣ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ