ಬೆಂಗಳೂರು : ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಷಾಢ ಶುದ್ಧ ಪ್ರಥಮ "ಏಕಾದಶಿ" ಪ್ರಯುಕ್ತ ಜು.17ರಂದು ಮಂತ್ರಾಲಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಪ್ತಾ ಮುದ್ರಾಧಾರಣೆ ನೆರವೇರಿಸಲಿದ್ದಾರೆ.
ಶ್ರೀಮನ್ ಮೂಲ ರಾಮಚಂದ್ರದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ, ಶ್ರೀ ಸುದರ್ಶನ ಹೋಮದೊಂದಿಗೆ ತಾವು ತಪ್ತ ಮುದ್ರಧಾರಣೆಯನ್ನು ಸ್ವೀಕರಿಸಿ ತದನಂತರ ಶ್ರೀಮಠದ ಶಿಷ್ಯರಿಗೆ ಬೆಳಗ್ಗೆ 7:30 ರಿಂದ ರಾತ್ರಿ 9:30 ವರೆಗೆ ನಿರಂತರವಾಗಿ ತಪ್ತ ಮುದ್ರಾ ಧಾರಣೆಯನ್ನು ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಮಠದ ಪಂಡಿತರಿಂದ ಉಪನ್ಯಾಸ ಮಾಲಿಕೆಯು ನೆರವೇರಲಿದೆ ಎಂದು ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರಾಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ