ಸೂರು ಕಳೆದು ಕೊಂಡವರಿಗೆ ತಾತ್ಕಾಲಿಕ ಗುಡಿಸಲು ನಿರ್ಮಾಣ ಮಾಡಿದ ಶ್ರೀರಾಮುಲು

Upayuktha
0


ಬಳ್ಳಾರಿ: 
ಕಳೆದ ಹತ್ತು ದಿನಗಳ ಹಿಂದೆ ತಾಳೂರು ರಸ್ತೆ ಹೆಚ್ಎಲ್ಸಿ ಸಬ್  ಕೆನಾಲ್ (ನಂಬರ್ 6 ಡಿವಿಜನ್ ಕ್ಯಾನಲ್) ಮೇಲೆ ಇರೋ ಹತ್ತಕ್ಕೂ ಹೆಚ್ಚು ಗುಡಿಸಲುಗಳನ್ನು ತೆರವು ಮಾಡಿದ್ದರು. ಸೂರು ಕಳೆದುಕೊಂಡ ಬಡವರು ಬದುಕನ್ನು ಕಳೆದುಕೊಂಡು ಬಿದಿಗೆ ಬಿದ್ದಿದ್ದರು. ಅಳಿದುಳಿದ ಗುಡಿಸಲು ಮುಂದೆಯೇ ವಾಸ ಮಾಡುತ್ತಿದ್ದರು.


ಸಂತ್ರಸ್ತರ ಕಷ್ಟವನ್ನು ಅರಿತ ಶ್ರೀರಾಮುಲು ಸ್ಥಳಕ್ಕಾಗಮಿಸಿ ಹತ್ತು ಕುಟುಂಬದವರಿಗೆ ತಾತ್ಕಾಲಿಕ ಸೂರನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಸ್ಥಳದಲ್ಲಿ ನಾಲ್ಕು ತಾಸು ಮುಕ್ಕಾಂ ಹೂಡುವ ಮೂಲಕ ಗುಡಿಸಲು ನಿರ್ಮಾಣ ಮಾಡಿ ಹತ್ತು ಕುಟುಂಬ ಒಂದು ತಿಂಗಳಿಗಾಗುವಷ್ಟು ಆಹಾರ ಧಾನ್ಯವನ್ನು ನೀಡಿದ್ದಾರೆ. ಸ್ಥಳೀಯ ಪ್ರಭಾವಿ ನಾಯಕರ ಕುಮ್ಮಕ್ಕಿನಿಂದಾಗಿ ಕಳೆದ ನಲವತ್ತು ವರ್ಷದಿಂದ ವಾಸ ಮಾಡುತ್ತಿರುವ ಬಡವರ ಗುಡಿಸಲು ತೆರವು ಮಾಡಿದ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳ್ಳಾರಿಯಲ್ಲಿ ಅದೆಷ್ಟೋ ಜನರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ದೊಡ್ಡ ದೊಡ್ಡ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಅವರಿಗೊಂದು ಬಡವರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು.

ಅಲ್ಲದೇ ನಿಯಮದ ಪ್ರಕಾರ ತೆರವು ಮಾಡಲಿ ಆದರೆ ತೆರವು ಮಾಡಿದವರಿಗೆ ಮತ್ತೊಂದು ಕಡೆ ಸೂರನ್ನು ನೀಡಬೇಕಲ್ಲವೇ ಎಂದು ಪ್ರಶ್ನಿಸಿದರು. ತಹಶಿಲ್ದಾರರ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಪೋನ್ ನಲ್ಲಿ ಮಾತನಾಡುವ ಮೂಲಕ ರಾಜ್ಯದಲ್ಲಿ ಡೆಂಗ್ಯೂ ತಾಂಡವವಾಡ್ತಿದೆ. ಮಳೆಗಾಲ ಇದೆ ಬೀದಿಗೆ ಬಿದ್ದ ಹತ್ತು ಕುಟುಂಬಲ್ಲಿ ಪುಟ್ಟ ಪುಟ್ಟ ಮಕ್ಕಳಿವೆ ಇಲ್ಲಿಯೂ ಡೆಂಗ್ಯೂ ಬಂದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಈ ವೇಳೆ ಬಿಜೆಪಿ ಕಾರ್ಪೋರೇಟರ್ ಹನುಂತಪ್ಪ, ಗುಡಿಗಂಟಿ ಹನುಮಂತ, ಗೋವಿಂದರಾಜು, ಗುರುಲಿಂಗನಗೌಡ, ಬಿಜೆಪಿ ಮುಖಂಡರಾದ ಸುಗುಣ, ನಾಗವೇಣಿ, ರೂಪ ಇತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top