ಜುಲೈ 21ಕ್ಕೆ ವೀರಶೈವ ಮಹಾಸಭಾ ಚುನಾವಣೆ; ಮೆಣಸಿನ ಈಶ್ವರಪ್ಪ ನಾಮಪತ್ರ ಸಲ್ಲಿಕೆ ಸಲ್ಲಿಕೆ

Upayuktha
0


ಬಳ್ಳಾರಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇದೇ ತಿಂಗಳು 21ರಂದು ಚುನಾವಣೆ ನಡೆಯಲಿದ್ದು. ಅಧ್ಯಕ್ಷ ಸ್ಥಾನಕ್ಕೆ ವೀರಶೈವ ಮುಖಂಡ ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷರಾದ ಈಶ್ವರಪ್ಪ ಮೆಣಸಿನಕಾಯಿ ನಾಮಪತ್ರವನ್ನು ಸಲ್ಲಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕಕ್ಕೆ ತೀವ್ರ ಪೈಪೋಟಿ ಇದ್ದು ಇದರ ನಡುವೆ ಎಂ.ಈಶ್ವರಪ್ಪ ಮೆಣಸಿನ ಅವರು ನಾಮಪತ್ರ ಸಲ್ಲಿಸಿದ್ದಾರೆ. ಜುಲೈ 4ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, ಪರಿಶೀಲನೆಗೆ ಜುಲೈ 5, ಹಿಂಪಡೆಯಲು ಜುಲೈ 8ರ ಮಧ್ಯಾಹ್ನ 3:00ವರೆಗೆ ಸಮಯವಿದ್ದು, ಅಗತ್ಯವಿದ್ದರೆ ಜುಲೈ 21ರಂದು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ, ಮತದಾನದ ನಂತರ ಮತಗಳ ಏಣಿಕೆ ನಡೆಯಲಿದೆ.


ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಈಶ್ವರಪ್ಪ, ನಾನು ಈ ಚುನಾವಣೆಯಲ್ಲಿ ಗೆದ್ದು ಬಂದಲ್ಲಿ ನಮ್ಮ ವೀರಶೈವ ಸಮಾಜದಲ್ಲಿ ಇರುವ ಬಡವರಿಗೆ ವಿದ್ಯಾಭ್ಯಾಸ ಉದ್ಯೋಗವನ್ನು ಕಲ್ಪಿಸಿಕೊಡಲು ಪ್ರಯತ್ನಿಸುತ್ತೇನೆ ಎಂದರು.


ನಾಮಪತ್ರವನ್ನು ನಿವೃತ್ತಿ ಪ್ರಾಂಶುಪಾಲ ಎನ್.ಸಿ ಲಿಂಗನಗೌಡ ಮತ್ತು ಇವರಿಗೆ ಹೆಚ್ಚುವರಿ ಸಹಾಯಕ ಚುನಾವಣಾ ಅಧಿಕಾರಿಗಳಾಗಿ ನಿವೃತ್ತ ಪ್ರಾಂಶುಪಾಲರುಗಳಾದ ಎಸ್ ನಾಗರಾಜ್ ಮತ್ತು ವಿ.ಎಸ್.ಡಾ ಪ್ರಭಯ್ಯ ಅವರು ನಾಮಪತ್ರವನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಎಂ ಈಶ್ವರಪ್ಪನವರ ಸ್ನೇಹಿತರು ವೀರಶೈವ ಸಮಾಜದ ಮುಖಂಡರು ಸೇರಿದಂತೆ ಹಲವಾರು ಜನರಿದ್ದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top