ನಿಟ್ಟೆ: ಬೆಂಗಳೂರಿನ ನ್ಯೂ ಹೊರೈಜನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಜುಲೈ 10 ಮತ್ತು 11 ರಂದು ನಡೆದ ವಿಟಿಯು ರಾಜ್ಯ ಮಟ್ಟದ ಅಂತರ ಕಾಲೇಜು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಎನ್.ಎಂ.ಎ.ಎಂ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಿಟ್ಟೆಯ ಪುರುಷರ ತಂಡವು 9 ಅಂಕಗಳೊಂದಿಗೆ ಒಟ್ಟಾರೆ ಚಾಂಪಿಯನ್ ಶಿಪ್ ನಲ್ಲಿ 2 ನೇ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಇನ್ಫೋರ್ಮೇಶನ್ ಸೈನ್ಸ್ ವಿಭಾಗದ 7ನೇ ಸೆಮಿಸ್ಟರ್ ನ ರೋಹನ್ ಕುಮಾರ್ 83 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 59 ಕೆಜಿ ವಿಭಾಗದಲ್ಲಿ 7ನೇ ಸೆಮಿಸ್ಟರ್ ಮೆಕ್ಯಾನಿಕಲ್ ವಿಭಾಗದ ಅಖಿಲ್ 2ನೇ ಸ್ಥಾನ ಪಡೆದಿದ್ದಾರೆ ಹಾಗೂ 105 ಕೆಜಿ ವಿಭಾಗದಲ್ಲಿ 7ನೇ ಸೆಮಿಸ್ಟರ್ ಮೆಕ್ಯಾನಿಕಲ್ ವಿಭಾಗದ ಸಮರ್ಜೀತ್ ಅಮೀನ್ 3ನೇ ಸ್ಥಾನ ಪಡೆದಿರುವರು ಎಂದು ನಿಟ್ಟೆ ಕಾಲೇಜಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ