ಪ್ರತಿಯೊಬ್ಬರಲ್ಲೂ ದೈವತ್ವ ಕಂಡವರು ಡಾ.ಕಲಾಂ: ಅಶೋಕ್ ಕಿಣಿ ಎಚ್
ಪುತ್ತೂರು: ಡಾ.ಎಪಿಜೆ ಅಬ್ದುಲ್ ಕಲಾಂ ಭಾರತ ದೇಶ ಕಂಡ ಒಬ್ಬ ಅಪ್ರತಿಮ ವ್ಯಕ್ತಿ. ಸಾಮಾನ್ಯ ಬಡ ಕುಟುಂಬದಲ್ಲಿ ಬೆಳೆದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ದೇಶದ ರಾಷ್ಟ್ರಪತಿಯಾಗಿ ದೇಶವನ್ನು ಅತ್ಯುನ್ನತ ರೀತಿಯಲ್ಲಿ ಮುನ್ನಡೆಸಿದವರು. ಅತ್ಯಂತ ಸರಳ ಜೀವನವನ್ನು ನಡೆಸುತ್ತಿದ್ದ ಇವರು ಎಲ್ಲರೊಂದಿಗೂ ಆಪ್ತರಾಗಿ ಬೆರೆಯುವ ವ್ಯಕ್ತಿತ್ವವುಳ್ಳವರು. ದೇಶದ ಸುಭಿಕ್ಷೆಗಾಗಿ ಸದಾ ಮಿಡಿಯುತ್ತಿದ್ದ ಕಲಾಂ ಪ್ರತಿಯೊಬ್ಬರಲ್ಲೂ ದೈವತ್ವವನ್ನು ಕಂಡವರು.
ಪರರಿಗೆ ಸಹಾಯ ಮಾಡುವ ಅವಕಾಶ ಎಲ್ಲರಿಗೂ ಲಭಿಸುವುದಿಲ್ಲ.ಸಿಕ್ಕಾಗ ಅಂತಹ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂಬುವುದು ಕಲಾಂ ಅವರ ಅಭಿಪ್ರಾಯವಾಗಿತ್ತು. ಹೂವುಗಳು ಮಾಲೆಯಾಗಿ ದೇವರ ಪಾದವನ್ನು ಸೇರಿ ಹೇಗೆ ಸಾರ್ಥಕತೆ ಪಡೆಯುವುದೋ ಹಾಗೆ ಮಾನವರು ದೇವರನ್ನು ಒಲಿಸಿಕೊಳ್ಳಬೇಕಾದರೆ ಸತ್ಯದ ದಾರಿಯಲ್ಲಿ ನಡೆಯಬೇಕು ಎಂದು ಲೆಫ್ಟಿನೆಟ್ ಕರ್ನಲ್, ಫಾರ್ಮರ್ ಕಂಮ್ಪ್ಟ್ರೋಲರ್ (comptroller) ಅಶೋಕ್ ಕಿಣಿ ಎಚ್ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ಎನ್.ಎಸ್.ಎಸ್, ಎನ್.ಸಿ.ಸಿ, ರೆಡ್‌ಕ್ರಾಸ್, ರೋವರ್ ಆ್ಯಂಡ್ ರೇಂಜರ್ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ನಡೆದ ರಾಷ್ಟ್ರಪತಿ ಕೀರ್ತಿಶೇಷ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ನೆನಪು ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಮಾತನಾಡಿ, ಆಚಾರ ವಿಚಾರ, ನಡೆ ನುಡಿಗಳ ಮೂಲಕ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಎಲ್ಲರಿಗೂ ಆದರ್ಶರಾಗಿ ದ್ದವರು.ಹಾಗಾಗಿ ಇವರು ನಡೆದಂತೆ ನಾವು ನಡೆದುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಅತಿಥಿಗಳು ವೇದಿಕೆಗೆ ತಾಯಿ ಭಾರತಮಾತೆ, ಸ್ವಾಮಿ ವಿವೇಕಾನಂದರ ಹಾಗೂ ಡಾ.ಎ.ಪಿ.ಜೆ ಅಬ್ದುಲ್ ಕಲಾಂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಗಮಿಸಿದರು. ವೇದಿಕೆಯಲ್ಲಿ ಕಾಲೇಜಿನ ವಿಶೇಷ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ನಾಯ್ಕ್.ಬಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಸ್ವಾಗತಿಸಿ ಐಕ್ಯೂಎಸಿ ಘಟಕದ ಸಂಯೋಜಕ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಶಿವಪ್ರಸಾದ್ ಕೆ. ಎಸ್ ವಂದಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಶ್ರೀಶ ಕುಮಾರ್ ಎಂ.ಕೆ ನಿರ್ವಹಿಸಿದರು. ಬಿಬಿಎ ವಿಭಾಗದ ಮುಖ್ಯಸ್ಥೆ ರೇಖಾ.ಪಿ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ.ಎಸ್ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ