ಉಜಿರೆ: ಹವ್ಯಾಸಗಳು ಧನಾರ್ಜನೆಗೆ ಕೆಲವೊಮ್ಮೆ ನೆರವಾಗಬಹುದು. ಕೆಲವೊಮ್ಮೆ ಇತರರಿಂದ ಮನ್ನಣೆಗೆ ಪಾತ್ರವಾಗಬಹುದು. ಇವೆರಡು ಸಾಧ್ಯವಾಗಿಲ್ಲದಿದ್ದರೂ ಸಂತೋಷ ಹಾಗೂ ಸಂತೃಪ್ತಿಯ ಜೀವನವನ್ನು ಒದಗಿಸಿಕೊಡುವುದಂತೂ ನಿಶ್ಚಿತ ಎಂದು ಅನ್ವಿತ್ ಜಿ ರವರು ಅಭಿಪ್ರಾಯ ಪಟ್ಟರು.
ಇತ್ತೀಚೆಗೆ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ "ಹಾಬಿ ಸರ್ಕಲ್"ನ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು. ಮಂಗಳೂರು ವಿವಿಯ ಪಿಎಚ್‌ಡಿ ವಿದ್ಯಾರ್ಥಿ ಅನ್ವಿತ್ ರವರು ಉದ್ಘಾಟಿಸಿ ಹವ್ಯಾಸಗಳ ಮಹತ್ವವನ್ನು ವಿವರಿಸಿದರು.
ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ.ಎ. ಕುಮಾರ ಹೆಗ್ಡೆ ರವರು ಮಾತನಾಡಿ ಸಾಕ್ರೆಟಿಸ್, ಕುವೆಂಪು ಮೊದಲಾದ ಶ್ರೇಷ್ಠ ಸಾಧಕರ ವಿಶಿಷ್ಟ ಸಾಧನಗಳ ಕುರಿತು ಬೆಳಕು ಚೆಲ್ಲಿದರು. ವಿಶಿಷ್ಟ ಹವ್ಯಾಸಗಳಾದ ಗಾಳಿಪಟ ತಯಾರಿಕೆ ಕೊಳಲು ವಾದನ ಇತ್ಯಾದಿಗಳ ಕುರಿತು ಮನಮುಟ್ಟುವಂತೆ ವಿವರಿಸಿದರು.
ಹಾಬಿ ಸರ್ಕಲ್ ನ ಸಂಯೋಜಕಿ ಇತಿಹಾಸ ವಿಭಾಗದ ಅಭಿಜ್ಞಾ ಉಪಾಧ್ಯಾಯ ರವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ವಿದ್ಯಾರ್ಥಿ ಸಂಯೋಜಕ ನಿಶಲ್ ಸಿಂಗ್ ವಂದಿಸಿದರು, ಹಾಗೂ ಯಶವಂತ್ ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ