ಮಂಗಳೂರು: ದಕ್ಷಿಣ ಕನ್ನಡದ ನಾಗರಿಕರ ಪರವಾಗಿ ಮತ್ತು ವಿಶೇಷವಾಗಿ ರೈಲು ಪ್ರಯಾಣಿಕರ ಪರವಾಗಿ, ಜಿಲ್ಲೆಯ ರೈಲ್ವೆ ಸಮಸ್ಯೆಗಳನ್ನು ಪರಿಹರಿಸಲು ಮಂಗಳೂರಿನಲ್ಲಿ ಸಭೆ ನಡೆಸುವಂತೆ ಕೋರಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣರಿಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರ ಬರೆದು ವಿನಂತಿಸಿದ್ದಾರೆ.
ಈ ಸಭೆಯಲ್ಲಿ ಪ್ರಮುಖ ಎರಡು ವಿಷಯಗಳ ಕುರಿತು ಚರ್ಚೆ ನಡೆಸುವ ಉದ್ದೇಶವಿದೆ.
ಕೊಂಕಣ ರೈಲ್ವೆ ಮತ್ತು ಭಾರತೀಯ ರೈಲ್ವೆಯ ವಿಲೀನ: ಇದು ಕೊಂಕಣ ಭಾಗದಲ್ಲಿ ಪ್ರಯಾಣಿಸುತ್ತಿ ರುವ ಪ್ರಯಾಣಿಕರ ಬಹುಕಾಲದ ಬೇಡಿಕೆ. ಕೊಂಕಣ ರೈಲ್ವೆ ನಿಗಮ ಲಿಮಿಟೆಡ್ (ಕೆಆರ್‌ಸಿಎಲ್) ಸ್ವತಂತ್ರ ಸಂಸ್ಥೆಯಾಗಿ ಎದುರಿಸುತ್ತಿರುವ ಹಣಕಾಸು ಅಡಚಣೆಗಳನ್ನು, ಇತರ ವಲಯಗಳಿಂದ ಮುಖ್ಯ ರೈಲ್ವೆ ಮೂಲಸೌಕರ್ಯಗಳ ಅವಲಂಬನೆಯನ್ನು ನಿವಾರಿಸಲು, ಈ ವಿಲೀನ ಅತೀ ಅವಶ್ಯವಾಗಿದೆ.
ಮಂಗಳೂರು-ಬೆಂಗಳೂರು ರೈಲ್ವೆ ಮಾರ್ಗದ ಉನ್ನತೀಕರಣ: ಶಿರಾಡಿ ಘಾಟ್ ಭಾಗದ ಕಾರ್ಯ ಯೋಜನಾ ಅಧ್ಯಯನ ಅಗತ್ಯವಿದ್ದು, ಇದರಿಂದ ಮಂಗಳೂರು ಮತ್ತು ಬೆಂಗಳೂರು ನಡುವಿನ ಸರಕು ಮತ್ತು ಪ್ರಯಾಣಿಕರ ಸಾಗಣೆ ಸುಗಮಗೊಳ್ಳುತ್ತದೆ. ಈ ನಡುವೆ, ಸುಬ್ರಹ್ಮಣ್ಯದಿಂದ ಸಕಲೇಶಪುರದ ಘಾಟ್ ಭಾಗದ ಸಾಮರ್ಥ್ಯ ವೃದ್ಧಿಗಾಗಿ ಅಗತ್ಯ ಸೈಡಿಂಗ್ ಒದಗಿಸಲು ಕ್ರಮಗಳನ್ನು ಕೈಗೊಳ್ಳುವುದು.
ಉಳಿದಂತೆ ನಡೆಯುತ್ತಿರುವ ರೈಲ್ವೆ ಕಾಮಗಾರಿಗಳ ಪರಿಶೀಲನೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಯ ಬಗ್ಗೆ ಚರ್ಚೆ ನಡೆಸಲು ಪತ್ರದಲ್ಲಿ ಕೋರಲಾಗಿದೆ.
ಜಿಲ್ಲೆಯ ಎಲ್ಲಾ ಶಾಸಕರು, ದಕ್ಷಿಣ ರೈಲ್ವೆ, ದಕ್ಷಿಣ ಪಶ್ಚಿಮ ರೈಲ್ವೆ, ಕೊಂಕಣ ರೈಲ್ವೆ, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾಡಳಿತ, PWD ಇಲಾಖೆ, ಅರಣ್ಯ ಇಲಾಖೆ ಮತ್ತಿತರ ಸಂಬಂಧಿತ ಇಲಾಖೆಗಳನ್ನು ಒಟ್ಟು ಸೇರಿಸಿ ಮಂಗಳೂರಿನಲ್ಲಿ ಸಭೆಯನ್ನು ಮಾಡಲು ಉದ್ದೇಶಿಸಿದ್ದು ಈ ಸಭೆಯಲ್ಲಿ ಸಚಿವರು ಉಪಸ್ಥಿತರಿರುವಂತೆ ವಿನಂತಿಸಿ ಅವರ ಸಮಯಾವಕಾಶ ಕೋರಿ ಪತ್ರ ಬರೆಯಲಾಗಿದೆ.
ಈ ಸಭೆಯು ದಕ್ಷಿಣ ಕನ್ನಡದ ರೈಲು ಸೇವೆಗಳ ಸುಧಾರಣೆಗೆ ಮತ್ತು ಭವಿಷ್ಯದ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ