ನಿಟ್ಟೆ: ಸಿಎ ಪರೀಕ್ಷೆಯಲ್ಲಿ ಡಾ. ಎನ್‌ಎಸ್‌ಎಎಂ ಪ್ರಥಮದರ್ಜೆ ಕಾಲೇಜಿನ ಅನುಶ್ರೀ, ಆಕಾಶ್ ಉತ್ತೀರ್ಣ

Upayuktha
0


ನಿಟ್ಟೆ:
ಹೊಸದಿಲ್ಲಿ ಲೆಕ್ಕಪರಿಶೋಧಕರ ಸಂಸ್ಥೆ ಐಸಿಎಐ ಮೇ 2024 ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿನಿ ಕುಮಾರಿ ಅನುಶ್ರೀ ನಿಟ್ಟೆ ಅತ್ಯುತ್ತಮ ಅಂಕಗಳಿಸುವ ಮೂಲಕ ತೇರ್ಗಡೆಯಾಗಿದ್ದಾರೆ. ಇವರು ನಿಟ್ಟೆ ಗಣೇಶ್ ಆಚಾರ್ಯ  ಶ್ರೀಮತಿ ವೀಣಾ ಆಚಾರ್ಯ ದಂಪತಿಗಳ ಪುತ್ರಿಯಾಗಿದ್ದು ಮಂಗಳೂರಿನ ಪಿ.ಪಿ.ಕೆ ಅಂಡ್ ಅಸೋ ಮತ್ತು ಸಿಯೆಟ್ ಸಂಸ್ಥೆಯಲ್ಲಿ ಸಿ.ಎ ಅರ್ಟಿಕಲ್ ಶಿಪ್ ತರಬೇತಿ ಪಡೆದಿರುತ್ತಾರೆ.


ಹೊಸದಿಲ್ಲಿ ಲೆಕ್ಕಪರಿಶೋಧಕರ ಸಂಸ್ಥೆ ಐಸಿಎಐ ಮೇ 2024 ರಲ್ಲಿ ನಡೆಸಿದ ಸಿ.ಎ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಪ್ರಸ್ತುತ ಅಂತಿಮ ಬಿಕಾಂನ ವಿದ್ಯಾರ್ಥಿ ಆಕಾಶ್ ಕೆ ತೇರ್ಗಡೆ ಹೊಂದಿರುತ್ತಾರೆ. ಇವರು ಕೆ ಯೋಗಿಶ್ ಆಚಾರ್ಯ ಮತ್ತು ಶ್ರೀಮತಿ ಮಮತ ವೈ ಇವರ ಪುತ್ರರಾಗಿದ್ದಾರೆ.


ಈ  ಇಬ್ಬರೂ  ವಿದ್ಯಾರ್ಥಿಗಳಿಗೆ  ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಎನ್.ವಿನಯ್ ಹೆಗ್ಡೆ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪ್ರೊ-ಚಾನ್ಸಲರ್ ಗಳಾದ ವಿಶಾಲ್ ಹೆಗ್ಡೆ ಮತ್ತು ಡಾ. ಶಾಂತರಾಮ ಶೆಟ್ಟಿ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ವೈಸ್-ಚಾನ್ಸಲೆರ್ ಪ್ರೊ. ಎಂ.ಎಸ್.ಮೂಡಿತ್ತಾಯ ಹಾಗೂ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ, ಕಾಲೇಜಿನ ಅಧ್ಯಾಪಕ ಅಧ್ಯಾಪಕೆತರ ಬಳಗ ಮತ್ತು ಕಾಲೇಜಿನ ಹಳೇ ವಿದ್ಯಾರ್ಥಿ ಸಂಘ ಶುಭ ಹಾರೈಸಿ ಅಭಿನಂದಿಸಿರುವರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top