ಕಾಸರಗೋಡಿನ ಸರಕಾರಿ ಕಾಲೇಜಿಗೆ ನ್ಯಾಕ್ ತಂಡ ಭೇಟಿ

Upayuktha
0


ಕಾಸರಗೋಡು: ಮೂರನೇ ಸುತ್ತಿನ ಮಾನ್ಯತೆಗಾಗಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯ (ನ್ಯಾಕ್) ತಜ್ಞರ ತಂಡವು ಜುಲೈ 15 ಮತ್ತು 16 ರಂದು ಕಾಸರಗೋಡಿನ ಸರ್ಕಾರಿ ಕಾಲೇಜಿಗೆ ಭೇಟಿ ನೀಡಲಿದೆ.


ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ ಮೂಲಕ ಭಾರತದ ಶ್ರೇಷ್ಠ 200 ಕಾಲೇಜುಗಳಲ್ಲಿ 66 ವರ್ಷಗಳ ವೈಭವದ ಸೇವೆಯನ್ನು ಹೊಂದಿರುವ ಕಾಲೇಜು, NAAC ತಂಡದ ಎರಡು ದಿನಗಳ ಭೇಟಿಗೆ ಸಜ್ಜಾಗಿದೆ. ಈ ಹಿಂದೆ ಎ ಗ್ರೇಡ್ ಮಾನ್ಯತೆ ಪಡೆದಿರುವ ಕಾಲೇಜು ಈ ಬಾರಿಯೂ ಅತ್ಯುತ್ತಮ ಶ್ರೇಣಿ ಪಡೆಯುವ ವಿಶ್ವಾಸವಿದೆ ವ್ಯಕ್ತವಾಗಿದೆ. 


1957 ರಲ್ಲಿ ಕಾಸರಗೋಡು ಪಟ್ಟಣದ ಸ್ಥಳೀಯ ಪ್ರೌಢಶಾಲೆಯಲ್ಲಿ ಕಾಲೇಜು ಅನ್ನು ಸ್ಥಾಪಿಸಲಾಯಿತು. ನಂತರ ವಿದ್ಯಾನಗರದ 30.56 ಎಕರೆ ಸ್ಥಳದಲ್ಲಿ ಹೊಸದಾಗಿ ನಿರ್ಮಿಸಲಾದ ಅವರಣಕ್ಕೆ ಸ್ಥಳಾಂತರಗೊಂಡಿತು. ಪ್ರಸ್ತುತ ಸರಕಾರಿ ಕಾಲೇಜಿನಲ್ಲಿ 14 ಶಿಸ್ತುಗಳಲ್ಲಿ ಪದವಿ , 8 ಶಿಸ್ತು ಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು 7 ಶಿಸ್ತುಗಳಲ್ಲಿ ಪಿಎಚ್‌ಡಿ ಪದವಿಗಳಿಗೆ ಅವಕಾಶ ಗಳಿವೆ.


ಕಾಲೇಜು ವಿಸ್ತರವಾದ ಶೈಕ್ಷಣಿಕ ಕಟ್ಟಡಗಳು, ವಿದ್ಯಾರ್ಥಿಗಳ ವಸತಿ ನಿಲಯಗಳು, ಸಿಬ್ಬಂದಿ ವಸತಿಗೃಹಗಳು, ಕ್ಯಾಂಟೀನ್, ಪಿಟಿಎ ನಡೆಸುವ ಸ್ಟೇಷನರಿ ಮಳಿಗೆಗಳು, ವಿಶಾಲವಾದ ಆಟದ ಮೈದಾನ, ವ್ಯವಸ್ಥಿತ ಪ್ರಯೋಗಾಲಯಗಳು, ಗ್ರಂಥಾಲಯಗಳು, ವಸ್ತುಸಂಗ್ರಹಾಲಯಗಳು, ಸಂಶೋಧನ ಕೇಂದ್ರಗಳು, ವಿಶಿಷ್ಟ ಉದ್ಯಾನಗಳು ಇತ್ಯಾದಿಗಳನ್ನು ಒಳಗೊಂಡಿವೆ. ಕಾಲೇಜಿನಲ್ಲಿ ಜಿಸಿಕೆ ಓಪನ್ ಡಾಟಾ ಲ್ಯಾಬ್, ಯಕ್ಷಗಾನ ಸಂಶೋಧನ ಕೇಂದ್ರ, ಹಸ್ತಪ್ರತಿ ಮತ್ತು ಶಾಸನ ಸಂರಕ್ಷಣೆಗೆ ವ್ಯವಸ್ಥೆ ಇದೆ. ದೃಷ್ಟಿ ದೋಷವಿರುವ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಓದುವ "ಕಿಬೋ ಎಕ್ಸ್‌ಎಸ್" ವ್ಯವಸ್ಥೆ, ಜೈವಿಕ ವೈವಿಧ್ಯ ಉದ್ಯಾನ, ಆರ್‌ಇಟಿ ಉದ್ಯಾನ, ಬಿದಿರಿನ ಉದ್ಯಾನ, ರಸಾಯನ ವಿಜ್ಞಾನ ಮತ್ತು ಗಣಕ ವಿಜ್ಞಾನಗಳಲ್ಲಿ ಇ -ಕ್ಲಾಸ್ ಕೋರ್ಸ್‌ಗಳು, ಸಾಂಸ್ಕೃತಿಕ ವಸ್ತುಸಂಗ್ರಹಾಲಯ ಮತ್ತು ಭೂವಿಜ್ಞಾನ ವಸ್ತುಸಂಗ್ರಹಾಲಯ, ಅನುವಾದ ಸೌಲಭ್ಯಗಳ ಜೊತೆಗೆ ಎನ್ಎಸ್ಎಸ್,  ಎನ್ ಸಿ ಸಿ, ಭೂಮಿತ್ರಸೇನ ಮೊದಲಾದ ವಿದ್ಯಾರ್ಥಿ ಬೆಂಬಲ ಕಾರ್ಯಕ್ರಮಗಳಿವೆ. ಬರ್ಡ್ಸ್ ಕ್ಲಬ್, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಮಾಹಿತಿ ಸಮಿತಿ , ಜೀವನಿ ಕೌನ್ಸಿಲಿಂಗ್ ಸೆಂಟರ್, ವೈಐಪಿ, ಮಹಿಳಾ ಸಶಕ್ತಿಕರಣ ಸಮಿತಿ, ಸಮರ್ಥ ರಕ್ಷಕ ಶಿಕ್ಷಕ ಸಂಘ ವಿವಿಧ ವಿಭಾಗಗಳ ಹಳೆಯ ವಿದ್ಯಾರ್ಥಿಗಳ ಸಂಘಗಳು ಮತ್ತು ಕಚೇರಿ ಸಿಬ್ಬಂದಿ ಸೇರಿದಂತೆ ಇಡೀ ಕಾಲೇಜು ಸಂಸ್ಥೆಯ ಮಾನ್ಯತೆಗಾಗಿ ಅವಿರತವಾಗಿ ಶ್ರಮಿಸುತ್ತಿದೆ. NAAC ತಂಡದ ಭೇಟಿಯು ಕಾಲೇಜಿನ ಸಾಮರ್ಥ್ಯ ಮತ್ತು ಸಾಧನೆ ಗಳನ್ನು ಪ್ರದರ್ಶಿಸುವ ಅವಕಾಶವಾಗಿದೆ .


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top