ಜು.17ರಂದು ಸೋನೆ ಮಳೆ- ಹಸಿರು ಇಳೆ ಕವಿಗೋಷ್ಠಿ

Upayuktha
0


ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದ.ಕ.ಜಿಲ್ಲಾ ಸಮಿತಿ ವತಿಯಿಂದ ಅರಣ್ಯ ಇಲಾಖೆ ಮತ್ತು  ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆ ಸಹಯೋಗದಲ್ಲಿ ಜು.17ರಂದು ಬೆಳಗ್ಗೆ 10ಕ್ಕೆ ನಗರದ  ಲಾಲ್‌ಬಾಗ್ ಬಳಿಯ ಇಂದಿರಾ ಪ್ರಿಯದರ್ಶಿನಿ ವನಿತಾ ಪಾರ್ಕ್‌ನಲ್ಲಿ ವನಮಹೋತ್ಸವ ಹಾಗೂ  ‘ಸೋನೆ ಮಳೆ-ಹಸಿರು ಇಳೆ’ ಪರಿಸರ  ಕವಿಗೋಷ್ಠಿ ನಡೆಯಲಿದೆ.


ದೇರಳಕಟ್ಟೆಯ ವಿದ್ಯಾರತ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ‌ ಶೆಟ್ಟಿ ವನಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.ಅಭಾಸಾಪ‌ ದ.ಕ.ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಕವಿಗಳಿಗೆ ಅಭಿನಂದನಾ ಪತ್ರ ವಿತರಿಸಲಿದ್ದಾರೆ.


ಮಂಗಳೂರು ವಲಯ  ಸಹಾಯಕ    ಸಂರಕ್ಷಣಾಧಿಕಾರಿ ಶ್ರೀಧರ್ , ಕಾರ್ಪೋರೇಟರ್ ಸಂಧ್ಯಾ ಮೋಹನ್  ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಹಿರಿಯ ಕವಿ ಗುಣಾಜೆ ರಾಮಚಂದ್ರ ಭಟ್ ಕವಿಗೋಷ್ಠಿಗೆ ಚಾಲನೆ ನೀಡಲಿದ್ದಾರೆ.  ಡಾ.ಸುರೇಶ್ ನೆಗಳಗುಳಿ  ಗೋಷ್ಠಿಯ  ಅಧ್ಯಕ್ಷತೆ ವಹಿಸಲಿದ್ದಾರೆ  ಹಾಗೂ ಕವಿಗಳಾದ ಅರುಣಾ ನಾಗರಾಜ್ ರೇಮಂಡ್ ಡಿಕೂನಾ ತಾಕೊಡೆ  ಗೀತಾ ಲಕ್ಷ್ಮೀಶ ವಿದ್ಯಾಶ್ರೀ ಅಡೂರು ಜಯಾನಂದ ಪೆರಾಜೆ  ದಿವ್ಯಾ ಎ ಗಿರೀಶ್ ಚಂದನಾ ಕಾರ್ತಟ್ಟು‌ ಮಾಲಾ ಚೆಲುವನಹಳ್ಳಿ  ಮಂಜುನಾಥ ಮರವಂತೆ  ನಿಶಾನ್ ಅಂಚನ್ ಮನ್ಸೂರ್ ಮುಲ್ಕಿ ರೇಣುಕ ಸುಧೀರ್ ಶರಣ್ಯ ಬೆಳುವಾಯಿ ಉಮೇಶ ಕಾರಂತ ವಿನುತಾ ಅನುರಾಧಾ ರಾಜೀವ್ ಸುಲೋಚನಾ ನವೀನ್ ಮಂಗಳೂರು ದೀಪಾ ಜಿ ಎಮ್ ವೆಂಕಟೇಶ ಗಟ್ಟಿ ರೇಖಾ ಸುದೇಶ ರಾವ್ ಸುಮನಾ ಘಾಟೆ ವಿಜಯಪುರ ಸೋಮಶೇಖರ ಮುಂತಾದವರು ಈ ಗೋಷ್ಠಿಯಲ್ಲಿ ಸ್ವರಚಿತ ಕವನ ವಾಚಿಸಲಿದ್ದಾರೆ ಎಂದು ಅಭಾಸಾಪ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಮಂಗಲಾ ರತ್ನಾಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-ಡಾ ಸುರೇಶ ನೆಗಳಗುಳಿ

ಮಂಗಳೂರು


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top