ಸಿರಿಬಾಗಿಲು ಯಕ್ಷ ವೈಭವದಲ್ಲಿ ಸರಯೂ ಯಕ್ಷ ಬಳಗದ 'ವೀರ ಶತಕಂಠ' ಪ್ರದರ್ಶನ

Upayuktha
0


ಕುಂಬಳೆ: ಯಕ್ಷಗಾನದ ತವರೂರು ಕವಿ ಪಾರ್ತಿಸುಬ್ಬನ ನಾಡಾದ ಕುಂಬಳೆಯ ಸಿರಿಬಾಗಿಲು, ಗಡಿನಾಡು ಪ್ರದೇಶದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ಮುಖ್ಯಸ್ಥರಾದ ಸಿರಿಬಾಗಿಲು ಶ್ರೀ ರಾಮಕೃಷ್ಣ ಮಯ್ಯರ ನೇತೃತ್ವದಲ್ಲಿ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಂಘ- ಸಂಸ್ಥೆಗಳ ನೆರವಿನಿಂದ ಜರಗುತ್ತಿರುವ ಚಾರಿತ್ರಿಕ ಹವ್ಯಾಸಿ ತಂಡಗಳ ಯಕ್ಷಗಾನ ಬಯಲಾಟ ಸಂಭ್ರಮದಲ್ಲಿ ಧೋ ಯೆಂದು ಸುರಿಯುತ್ತಿರುವ ಮಳೆ, ಅಬ್ಬರದ ಗಾಳಿ ಬೀಸುತ್ತಿದ್ದರೂ ಚೆಂಡೆ- ಮದ್ದಲೆಗಳ ಯೇಂಕಾರದೊಂದಿಗೆ ವರ್ಕಾಡಿ ರವಿ ಅಲೆವೂರಾಯರ ನಿರ್ದೇಶನದಲ್ಲಿ ರಜತ ಮಹೋತ್ಸವದಲ್ಲಿರುವ ಸರಯೂ ಯಕ್ಷ ಬಳಗವು ಅಲೆವೂರಾಯರ" ವೀರ ಶತಕಂಠ" ಎಂಬ ಪ್ರಸಂಗವನ್ನು ಪ್ರಸ್ತುತಪಡಿಸಿತು.


ಲಕ್ಷ್ಮೀನಾರಾಯಣ ಹೊಳ್ಳ, ಕೃಷ್ಣಾಪುರ, ಅಂಬಾತನಯ ಅರ್ನಾಡಿ, ಮಧುಸೂದನ ಅಲೆವೂರಾಯ, ಲಕ್ಷ್ಮಣ ಕುಮಾರ್ ಮರಕಡ ಹಿಮ್ಮೇಳ ಸಹಕಾರ ನೀಡಿದರು ಮುಮ್ಮೇಳದಲ್ಲಿ ವಿಜಯಲಕ್ಷ್ಮೀ ಯಲ್. ಎಸ್., ನಾಗರಾಜ ಖಾರ್ವಿ, ಸಂತೋಷ್ ಪಿಂಟೋ, ಅಕ್ಷಯ್ ಸುವರ್ಣ, ರೇವಂತ್ ರಾಘವೇಂದ್ರ, ನಿತ್ಯಶ್ರೀ, ಕೃತಿ ದೇವಾಡಿಗ, ದೃಶಾಲ್, ವಿಶ್ವಾಸ್ ಆರ್. ಇದ್ದರು. ಸಿರಿಬಾಗಿಲಿನಲ್ಲಿ ನಾಲ್ಕು ದಿನಗಳ ಕಾಲ ತೆಂಕು-ಬಡಗಿನ ಯಕ್ಷವೈಭವ ನಡೆಯಿತು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top