ಸುದಾನ ಶಾಲೆಯಲ್ಲಿ ಇಂಟರ್‍ಯಾಕ್ಟ್ ಕ್ಲಬ್ ಸ್ಪಂದನಾ ಪದಪ್ರದಾನ

Upayuktha
0




ಪುತ್ತೂರು: "ವಿದ್ಯಾರ್ಥಿಗಳು ಕಲಿಕೆ ಸಹಿತ ಎಲ್ಲಾ ಚಟುವಟಿಕೆಗಳಲ್ಲಿ ಉತ್ಸಾಹ ಮತ್ತು ಕೌತುಕ ದೊ‌ಂದಿಗೆ ತೊಡಗಿಸಿಕೊಳ್ಳಬೇಕು ಎಂದು ರೋಟರಿ ಪುತ್ತೂರು ಎಲೈಟ್ ಅಧ್ಯಕ್ಷ ರೊ.ಅಶ್ವಿನ್ ಎಲ್. ಶೆಟ್ಟಿ ಹೇಳಿದ್ದಾರೆ.


ಅವರು ಗುರುವಾರ ಸುದಾನ ವಿದ್ಯಾಸಂಸ್ಥೆಯ ಎಡ್ವರ್ಡ್ ಹಾಲ್‌ನಲ್ಲಿ ನಡೆದ ರೋಟರಿ ಪುತ್ತೂರು ಎಲೈಟ್‌ನ ಅಂಗ ಸಂಸ್ಥೆಯಾದ ಸುದಾನ ಇಂಟರಾಕ್ಟ್ ಕ್ಲಬ್ ನ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಪದಪ್ರದಾನ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು.


ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಸುದಾನ ಪದವಿಪೂರ್ವ ಕಾಲೇಜಿನ ಸಂಚಾಲಕರಾದ ಡಾ‌ ಪೀಟರ್ ವಿಲ್ಸನ್ ಪ್ರಭಾಕರ್ ಅವರು ಮಾತನಾಡಿ, "ಅರಿವಿನ ಮೂಲವು ಸೇವೆಯಲ್ಲಿದೆ. ಸ್ವಾಮಿ ವಿವೇಕಾನಂದರ ಮಾತಿನಂತೆ ವ್ಯಕ್ತಿ ವ್ಯಕ್ತಿಗೆ ಮಾಡುವ ಸೇವೆ, ಸಹಾಯದಲ್ಲಿ ದೇವರ ಸೇವೆ ಇದೆ. ಪ್ರತಿಯೊಬ್ಬರೂ ತಮ್ಮ ಇತಿಮಿತಿಯಲ್ಲಿ ಸಮಾಜಮುಖಿಯಾಗಿ ಸೇವೆಯನ್ನು ಮಾಡಬೇಕು" ಎಂದರು.


ಸಂಪನ್ಮೂಲ ವ್ಯಕ್ತಿಯಾಗಿ  ಆಗಮಿಸಿದ್ದ ಸುಶ್ಮಿತಾ ದೀಪಕ್ ಅವರು "ಹದಿಹರೆಯದ ಮಕ್ಕಳ ಮಾನಸಿಕ ಆರೋಗ್ಯ" ಎಂಬ ವಿಚಾರದ ಬಗೆಗೆ ಅರಿವನ್ನು ನೀಡುತ್ತಾ "ಮನಸ್ಸನ್ನು ನಿಯಂತ್ರಿಸಿಕೊಳ್ಳುವುದು ಸಾಧ್ಯವಾದರೆ ಸಾಧನೆ ಕಷ್ಟವಲ್ಲ" ಎಂದು ನುಡಿದರು.


ನೂತನ ಶೈಕ್ಷಣಿಕ ವರ್ಷದ ಸುದಾನ ಇಂಟರಾಕ್ಟ್ ಕ್ಲಬ್ ನ ವಿದ್ಯಾರ್ಥಿ ಅಧ್ಯಕ್ಷರಾಗಿ ರಿದಿಮ ಬೆಳಂದೂರು (10ನೇ) ಮತ್ತು ಕಾರ್ಯದರ್ಶಿಯಾಗಿ ಪಲ್ಲವಿ ಜಿ (9ನೇ) ಮತ್ತು ಪದಾಧಿಕಾರಿಗಳ ತಂಡ ಅಧಿಕಾರ ಸ್ವೀಕರಿಸಿತು.


ನಿಕಟಪೂರ್ವ ಅಧ್ಯಕ್ಷೆ ಇಶಿತಾ ನಾಯರ್ ಸ್ವಾಗತಿಸಿ, ತಮ್ಮ ಸೇವಾನುಭವವನ್ನು ಹಂಚಿಕೊಂಡರು. ಸುದಾನ ವಸತಿ ಶಾಲೆಯ ಮುಖ್ಯ ಶಿಕ್ಷಕಿ ಶೋಭಾನಾಗರಾಜ್ ರವರು ಶುಭಹಾರೈಸಿದರು. ರೋಟರಿ ಜಿಲ್ಲಾ ಕಾರ್ಯದರ್ಶಿ ಆಸ್ಕರ್ ಆನಂದ್, ಐಪಿಪಿ ಅಬ್ದುಲ್ ರಝಾಕ್ ಕಬಕಕಾರ್ಸ್, ಕ್ಲಬ್ ಕಾರ್ಯದರ್ಶಿ ಮೌನೇಶ ವಿಶ್ವಕರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. 


ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಂಟನೇ ತರಗತಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.


ವಿದ್ಯಾರ್ಥಿ ಸ್ವಲಾ (10ನೇ) ಕ್ಲಬ್ ನ ಚಟುವಟಿಕೆಗಳ ವರದಿಯನ್ನು ವಾಚಿಸಿದರು. ಮೊಹಮ್ಮದ್ ಇಝಾನ್ (10ನೇ) ಮತ್ತು ಫಾರಿಝಾ (10ನೇ) ಅತಿಥಿಗಳನ್ನು ಪರಿಚಯಿಸಿದರು.


ಸುದಾನ ಇಂಟ್ಯರಾಕ್ಟ್ ಸ್ಪಂದನ‌ದ ವಿದ್ಯಾರ್ಥಿ ಕಾರ್ಯದರ್ಶಿ‌ ಪಲ್ಲವಿ ಜಿ ವಂದಿಸಿದರು. ವಿದ್ಯಾರ್ಥಿಗಳಾದ ಅಮ್ನಾ ಶಾಹಿಸ್ತಾ, ಆಕಾಶ್ ಪೋಲಿಸ್ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top