ಭಾರತ ರತ್ನಕ್ಕೆಅರ್ಹರು: ದೇಶದ ಅಭಿವೃದ್ಧಿಗೆ ಮಹಾನ್ ಕೊಡುಗೆ ನೀಡಿದ ಈ ಐವರು

Upayuktha
0

ಬೆಂಗಳೂರು: ಸ್ವಾತಂತ್ರ್ಯದ ನಂತರ ಐವರು ಮಹಾನ್ ಉದ್ಯಮಿಗಳು ಭಾರತದ ಪ್ರಗತಿಗೆ ಅದ್ಭುತವಾದ ಕೊಡುಗೆಗಳನ್ನು ನೀಡಿದ್ದಾರೆ. ಅವರೆಲ್ಲರೂ ದೇಶದ ಸವೋಚ್ಛ ಗೌರವವಾದ ಭಾರತ ರತ್ನಕ್ಕೆ ಅರ್ಹರು. ಜೆಆರ್‌ಡಿ ಟಾಟಾ, ಧೀರೂಭಾಯಿ ಅಂಬಾನಿ, ಎನ್‌.ಆರ್‌. ನಾರಾಯಣಮೂರ್ತಿ, ಮುಕೇಶ್ ಅಂಬಾನಿ, ನಂದನ್‌ ನಿಲೇಕಣಿ ಅವರೇ ಭಾರತ ರತ್ನಕ್ಕೆ ಅರ್ಹರಾದ ಈ ಐವರು ಮಹಾನ್ ವ್ಯಕ್ತಿಗಳು ಎಂದು ಅರಿಯನ್ ಕ್ಯಾಪಿಟಲ್ಸ್‌ನ ಚೇರ್ಮನ್‌ ಟಿ.ವಿ. ಮೋಹನ್‌ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ.


ಇವರೆಲ್ಲ ಯಾಕೆ ಭಾರತ ರತ್ನಕ್ಕೆ ಅರ್ಹರು ಎಂಬುದನ್ನೂ ಅವರು ಸಂದರ್ಶನದಲ್ಲಿ ಪ್ರತಿಪಾದಿಸಿದ್ದಾರೆ. 


ಮೊದಲನೆಯವರು ಜೆ.ಆರ್‌.ಡಿ ಟಾಟಾ: 

ಮೊದಲ ಎರಡು ದಶಕಗಳಲ್ಲಿ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದವರು ಅವರು. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಂದ ಸಾಕಷ್ಟು ಕಿರುಕುಳಗಳನ್ನು ಎದುರಿಸಿಯೂ ವಾಹನ, ಉಕ್ಕು ಮತ್ತಿತರ ಕ್ಷೇತ್ರಗಳಲ್ಲಿ ಕ್ರಾಂತಿಗೆ ಮುನ್ನುಡಿ ಬರೆದವರು ಅವರು. ಅವರಿಗೆ 1992ರಲ್ಲಿ ಮರಣೋತ್ತರವಾಗಿ ಭಾರತ ರತ್ನ ನೀಡಿ ಗೌರವಿಸಲಾಗಿದೆ.


ಆದರೆ ಇನ್ನೂ ನಾಲ್ವರು ಈ ಗೌರವಕ್ಕೆ ಅರ್ಹರಾದ ಉದ್ಯಮಿಗಳಿದ್ದಾರೆ. ಅವರ ಕುರಿತು ಮೋಹನ್ ದಾಸ್ ಪೈ ಉಲ್ಲೇಖಿಸಿದ್ದು ಹೀಗೆ:


ಧೀರೂಭಾಯಿ ಅಂಬಾನಿ:

ಭಾರತೀಯರಿಗೆ ದೊಡ್ಡ ದೊಡ್ಡ ಕನಸುಗಳನ್ನು ಹೇಗೆ ಕಾಣಬೇಕೆಂಬುದನ್ನು ಕಲಿಸಿದವರು ಧೀರೂಭಾಯಿ ಅಂಬಾನಿ. ಆ ದಿನಗಳಲ್ಲಿ ಎಲ್ಲ ಸಂಪ್ರದಾಯಗಳನ್ನೂ  ಮುರಿದು ಬೃಹತ್ ಉದ್ಯಮ ಸಾಮ್ರಾಜ್ಯದ ಸ್ಥಾಪನೆಗೆ ಅಡಿಪಾಯ ಹಾಕಿದರು. ಈಕ್ವಿಟಿ ಬಂಡವಾಳದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ನಿಂತರು. ಬಹುದೊಡ್ಡ ಕನಸುಗಾರರಾಗಿದ್ದ ಅವರು ಭಾರತದ ಪಥವನ್ನು ಬದಲಿಸಿದರು.


90ರ ದಶಕದಲ್ಲಿ - ಎನ್‌.ಆರ್‌. ನಾರಾಯಣ ಮೂರ್ತಿ:

ಅತ್ಯುತ್ತಮ ಕಾರ್ಫೊರೇಟ್‌ ಮಾನದಂಡಗಳಿಗೆ ಅನುಸಾರವಾಗಿ ಇನ್ಫೋಸಿಸ್‌ ಎಂಬ ಸಾಫ್ಟ್‌ವೇರ್‌ ದೈತ್ಯನನ್ನು ಹುಟ್ಟುಹಾಕಿದರು. ಜಾಗತಿಕ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಭಾರತದ ಒಂದು ಬಹುರಾಷ್ಟ್ರೀಯ ಕಂಪನಿಯನ್ನು ಅವರು ಸ್ಥಾಪಿಸಿ ಜಗತ್ತಿನ ಎದುರು ಭಾರತದ ಸ್ಥಾನಮಾನವನ್ನು ಎತ್ತರಕ್ಕೇರಿಸಿದರು.


ಮುಕೇಶ್ ಅಂಬಾನಿ: 

ಅವರು ರಿಲಯನ್ಸ್‌ ಜಿಯೋ ವನ್ನು ಹುಟ್ಟುಹಾಕಿದರು. ಜಿಯೋ ಕಂಪನಿ ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ, ಮೊಬೈಲ್ ಇಂಟರ್ನೆಟ್ ಪ್ರಪಂಚವನ್ನೇ ಬದಲಾಯಿಸಿಬಿಟ್ಟಿತು. ದೇಶವಿಂದು ಮಹೋನ್ನತ ಸಾಧನೆಗಳನ್ನು ಮಾಡುತ್ತಿರುವ ಡಿಜಿಟಲ್‌ ಕ್ರಾಂತಿಗೆ ಬಹುದೊಡ್ಡ ರೀತಿಯಲ್ಲಿ ಕಾರಣರಾದವರು ಮುಕೇಶ್ ಅಂಬಾನಿ.


ನಂದನ್ ನಿಲೇಕಣಿ:

ಆಧಾರ್‌, ಇಂಡಿಯಾ ಸ್ಟ್ಯಾಕ್‌, ಯುಪಿಐ, ಒಎನ್‌ಡಿಸಿ, - ಹೀಗೆ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಡಿಜಿಟಲ್ ಕ್ರಾಂತಿಗೆ ಒಂದು ಪೂರಕ ಪದರವನ್ನು ಸೃಷ್ಟಿಸಿದವರು ನಂದನ್ ನಿಲೇಕಣಿ. ಕಳೆದ 12 ವರ್ಷಗಳಲ್ಲಿ ಭಾರತದ ಪ್ರಗತಿಯಲ್ಲಿ ಅವರ ಕೊಡುಗೆಗಳು ಕಣ್ಣಿಗೆ ರಾಚುವಂತಿವೆ.


ಇವರು ನಿಜಕ್ಕೂ ಭಾರತದ ರತ್ನಗಳು. ಇವರನ್ನು ದೇಶದ ಅತ್ಯುನ್ನತ ಗೌರವದೊಂದಿಗೆ ಗುರುತಿಸುವುದು ಅಪೇಕ್ಷಣೀಯ ಎಂದು ಉದ್ಯಮಿ ಮೋಹನ್‌ದಾಸ್‌ ಪೈ ಹೇಳುತ್ತಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top