ಹಣಕಾಸು ವರ್ಷ 2024-25ರಆಯವ್ಯಯ ಪತ್ರವನ್ನು ಅನಾವರಣಗೊಳಿಸಲಾಗಿದ್ದು ಇದು, ಭಾರತದ ಬೆಳವಣಿಗೆ ಪಯಣವನ್ನು ಮುಂದುವರಿಸುವುದಕ್ಕೆ ಸಮಗ್ರವಾದ ದೃಷ್ಟಿಕೋನದ ಭರವಸೆ ನೀಡುತ್ತದೆ. ಹೊಸ ಸಾಲ ಮೌಲ್ಯಮಾಪನ ಕಾರ್ಯಚೌಕಟ್ಟಿನ ಸೃಷ್ಟಿಯು, ಸಾಲಕ್ಕೆ ಅರ್ಹವಾದ MSMEಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ. ಕೇವಲ ಆಸ್ತಿಗಳು ಅಥವಾ ವಹಿವಾಟಿನ ಮೇಲೆ ಅಧಾರಿತವಾದ ಸಾಲ ಅರ್ಹತೆಯನ್ನು ತೀರ್ಮಾನಿಸುವ ಈ ಹಿಂದಿನ ಸಾಂಪ್ರದಾಯಿಕ ಮೌಲ್ಯಮಾಪನ ವ್ಯವಸ್ಥೆಗೆ ಹೋಲಿಸಿದರೆ, ಔಪಚಾರಿಕ ಲೆಕ್ಕಪತ್ರ ವ್ಯವಸ್ಥೆ ಇಲ್ಲದ MSMEಗಳನ್ನೂ ಇದು ಒಳಗೊಳ್ಳಲಿದೆ. ಮುದ್ರಾ ಸಾಲಗಳ ಮಿತಿಯನ್ನು ಪ್ರಸ್ತುತದ 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಿರುವುದು, ಈ ಕ್ಷೇತ್ರವು ಎದುರಿಸುತ್ತಿರುವ ಹಣಕಾಸು ಸವಾಲುಗಳನ್ನು ಪರಿಹರಿಸಲೂ ನೆರವಾಗುತ್ತದೆ.
ಸಾಂಪ್ರದಾಯಿಕ ಕಲಾವಿದರು, ಭಾರತದ ಆರ್ಥಿಕತೆಯ ಬಹುಮುಖ್ಯ ಅಂಶವಾಗಿದ್ದು, ಭಾರತದ ರಫ್ತುಗಳನ್ನು ಹೆಚ್ಚಿಸಿ ಜಾಗತಿಕ ಪ್ರಮಾಣದಲ್ಲಿ ದೇಶದ ಮೃದುಶಕ್ತಿಯನ್ನು ಪ್ರೋತ್ಸಾಹಿಸುವ ಅಪಾರ ಸಂಭಾವ್ಯತೆ ಹೊಂದಿದ್ದಾರೆ. ಈ ವಿಷಯದಲ್ಲಿ, ಸಾಂಪ್ರದಾಯಿಕ ಕಲಾವಿದರು ತಮ್ಮ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದಕ್ಕಾಗಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವಗಳ ಮೂಲಕ ಇ-ವಾಣಿಜ್ಯ ಕೇಂದ್ರಗಳ ಸ್ಥಾಪನೆಯು ಒಂದು ಸ್ವಾಗತಾರ್ಹ ಕ್ರಮವಾಗಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಹಾಗೂ ಇ-ವಾಣಿಜ್ಯ ರಫ್ತು ಕೇಂದ್ರಗಳ ಪ್ರೋತ್ಸಾಹವು ಕೂಡ ನಿರ್ದಿಷ್ಟವಾಗಿ ತತ್ಸಂಬಂಧಿತವಾಗಿದ್ದು, ಆನ್‌ಲೈನ್ ರೀಟೇಲ್‌ನ ಬೆಳೆಯುತ್ತಿರುವ ಪ್ರವೃತ್ತಿಗೆ ಹೊಂದಿಕೊಂಡು, ಭಾರತೀಯ ರೀಟೇಲರ್ ಗಳಿಗೆ ಹೊಸ ಮಾರ್ಗಗಳನ್ನು ತೆರೆದು ಜಾಗತಿಕ ಮಾರುಕಟ್ಟೆಗಳನ್ನು ಶೋಧಿಸಲು ಅವಕಾಶ ನೀಡುತ್ತದೆ.
ಭಾರತದ ಪದವೀಧರರ ಉದ್ಯೋಗಶೀಲತೆಯನ್ನು ಸುಧಾರಿಸಲು ವೃತ್ತಿಪರ ತರಬೇತಿ ಮತ್ತು ಉದ್ಯಮ-ಸಂಬಂಧಿತ ಕೌಶಲ್ಯಗಳನ್ನು ಒದಗಿಸುವುದು ಈಗಿರುವ ಅಗತ್ಯವಾಗಿದ್ದು, 1,000 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಒಂದು ಕೇಂದ್ರ ಮತ್ತು ಸ್ಪೋಕ್ ಮಾದರಿಯಾಗಿ ನವೀಕರಿಸುವ ಯೋಜನೆಯು ಈ ನಿಟ್ಟಿನಲ್ಲಿ ಖಂಡಿತವಾಗಿಯೂ ನಮ್ಮ ಪ್ರಗತಿಯನ್ನು ಇನ್ನಷ್ಟು ವರ್ಧಿಸಿ 2ನೆ ಮತ್ತು 3ನೆ ದರ್ಜೆ ನಗರಗಳಲ್ಲಿ ಉದ್ಯೋಗಸಂಭಾವ್ಯತೆಯನ್ನು ಹೆಚ್ಚಿಸುತ್ತದೆ. ಪ್ರಸ್ತುತ, ಭಾರತದ ಕುಶಲ ಕಾರ್ಯಪಡೆಗಾಗಿ, ಮೆಟ್ರೋಪಾಲಿಟನ್ ಮತ್ತು ಇನ್ನೇನು ಮೆಟ್ರೋಪಾಲಿಟನ್ ಆಗಲಿರುವ ನಗರಗಳ ಮೇಲೆ ಅಪಾರ ಅವಲಂಬನೆ ಬೆಳೆದಿದ್ದು, ಈ ಪುನರ್ರಚನೆಯು, ಪ್ರತಿಯೊಂದು ಚಿಕ್ಕ ಪಟ್ಟಣ ಹಾಗೂ ನಗರದ ವಿಶಿಷ್ಟವಾದ ಭೌಗೋಳಿಕ ಹಾಗೂ ಪ್ರಾದೇಶಿಕ ಬಲಗಳನ್ನು ವರ್ಧಿಸುವ ಉದ್ಯಮ-ಕೇಂದ್ರೀಕೃತ ಕೇಂದ್ರಗಳೊಂದಿಗೆ ಹೆಚ್ಚು ವಿತರಣೆಗೊಂಡ ಕಾರ್ಯಪಡೆಯನ್ನು ಸೃಷ್ಟಿಸಲು ನೆರವಾಗುತ್ತದೆ.
ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್‌ಗಳು ಮತ್ತು ಕ್ರೀಚ್‍ಗಳ ಸ್ಥಾಪನೆ ಮಾಡಲು, ಮಹಿಳಾ-ನಿರ್ದಿಷ್ಟ ಕೌಶಲ್ಯ ಪ್ರೊಗ್ರಾಮ್‌ಗಳ ಆಯೋಜನೆ ಮಾಡಲು, ಮತ್ತು ಮಹಿಳೆಯರ ಸ್ವಸಹಾಯ ಗುಂಪಿನ ಉದ್ದಿಮೆಗಳಿಗಾಗಿ ಮಾರುಕಟ್ಟೆ ಪ್ರವೇಶಾವಕಾಶವನ್ನು ಪ್ರೋತ್ಸಾಹಿಸಲು ಉದ್ದಿಮೆ ಭಾಗೀದಾರರೊಡನೆ ಸಹಯೋಗ ಏರ್ಪಡಿಸಿಕೊಳ್ಳುವ ಬಜೆಟ್‌ನ ಭರವಸೆ ಸ್ವಾಗತಾರ್ಹ ಕ್ರಮವಾಗಿದ್ದರೂ, ಸಾಮಾನ್ಯ ನೀತಿ ಕಾರ್ಯಚೌಕಟ್ಟುಗಳು ಮತ್ತು ಉದ್ಯೋಗದಾತ ಪ್ರೋತ್ಸಾಹಧನದೊಳಕ್ಕೆ ಇದರ ಔಪಚಾರೀಕರಣ ಮತ್ತು ಸ್ಥಿರೀಕರಣವು, ಭಾರತದ ಕಾರ್ಯಪಡೆಯಲ್ಲಿರುವ ಲಿಂಗ ಅಂತರಗಳನ್ನು ಕಡಿಮೆ ಮಾಡುವ ಅದರ ಸಾಮರ್ಥ್ಯವನ್ನು ತೀರ್ಮಾನಿಸಲಿದೆ.
ಯಾವುದೇ ಆರ್ಥಿಕತೆಯ ಪ್ರಗತಿಯು, ಅದರ ಗ್ರಾಹಕರ ಕೈಗಳಲ್ಲಿ ಮಿಲೇವಾರಿಯಾಗಬಹುದಾದ ಹಣಕ್ಕೆ ನೇರವಾಗಿ ಪ್ರಮಾಣಾನುಗುಣವಾಗಿರುತ್ತದೆ ಮತ್ತು, ಈ ನಿಟ್ಟಿನಲ್ಲಿ, ಸರ್ಕಾರದ ತೆರಿಗೆ ಸುಧಾರಣೆಗಳು, ಖರ್ಚು ಮಾಡುವ ಶಕ್ತಿ, ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗಕ್ಕೆ ಖರ್ಚು ಮಾಡುವ ಶಕ್ತಿಯನ್ನು ಹೆಚ್ಚಿಸುವ ಭರವಸೆ ನೀಡುತ್ತದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ