ಮಣಿಪಾಲದಲ್ಲಿ ಗುರುವಾರ ತಡರಾತ್ರಿ ಹೊತ್ತಿ ಉರಿದ ಕಾರು

Upayuktha
0

 



ಮಣಿಪಾಲ: ಪರ್ಕಳದಿಂದ ಮಣಿಪಾಲಕ್ಕೆ ಬರುವ ರಸ್ತೆಯಲ್ಲಿ ಎಂಐಟಿ ಬಸ್ ನಿಲ್ದಾಣದಿಂದ ಸ್ವಲ್ಪ ಕೆಳಗೆ ನಿಲ್ಲಿಸಿದ್ದ ಕಾರೊಂದು ಗುರುವಾರ ತಡರಾತ್ರಿ 1:35ರ ಸುಮಾರಿಗೆ ಹೊತ್ತಿ ಉರಿದ ಘಟನೆ ನಡೆದಿದೆ.


ಕುಂದಾಪುರದಿಂದ ಕೆಎಂಸಿ ಆಸ್ಪತ್ರೆಗೆ ಬಂದ ರೋಗಿಗಳ ಪೈಕಿಯವರ ಕಾರು ಇದಾಗಿತ್ತು ಎಂದು ತಿಳಿದು ಬಂದಿದೆ.


ಇಬ್ಬರು ವ್ಯಕ್ತಿಗಳು ರಸ್ತೆ ಬದಿ ಕಾರನ್ನು ನಿಲ್ಲಿಸಿ ಒಳಗಡೆ ಮಲಗಿದ್ದರು. ಬೆಂಕಿ ಹತ್ತಿಕೊಂಡದ್ದು ಗೊತ್ತಾದ ತತ್ ಕ್ಷಣ ಇಬ್ಬರೂ ಹೊರಗೆ ಬಂದು ಪಾರಾಗಿದ್ದಾರೆ. ಧಗಧಗಿಸಿ ಉರಿಯುತ್ತಿದ್ದಂತೆ ಹ್ಯಾಂಡ್ ಬ್ರೇಕ್ ಮುಕ್ತವಾದ ಕಾರು ಹಿಮ್ಮುಖವಾಗಿ ಚಲಿಸಿತು.


ಹೊತ್ತಿ ಉರಿಯುತ್ತಿದ್ದ ಕಾರು ಹಾಗೆಯೇ ರಸ್ತೆಯಲ್ಲಿ ಹಿಂದಕ್ಕೆ ಹೋಗಿದ್ದರೆ ಭಾರಿ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಆದರೆ  ನಿನ್ನೆಯ ಗಾಳಿ- ಮಳೆಗೆ ಮುರಿದುಬಿದ್ದಿದ್ದ ಒಂದು ಮರದ ಗೆಲ್ಲೊಂದು ಆ ಕಾರನ್ನು ತಡೆದು ನಿಲ್ಲಿಸಿದೆ.


ಸುಮಾರು ಎರಡು ಗಂಟೆ ವೇಳೆಗೆ ಉಡುಪಿಯಿಂದ ಧಾವಿಸಿ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ಆದರೆ ಆ ವೇಳೆಗೆ ಕಾರು ಸಂಪೂರ್ಣವಾಗಿ ಉರಿದು ಹೋಗಿದೆ ಎಂದು ಮೂಲಗಳು ತಿಳಿಸಿವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top