ವ್ಯಾಸ ಪೀಠ-5: ಶ್ರೀ ವೈಷ್ಣವ ಸಿದ್ದಾಂತದ ದಿವ್ಯದರ್ಶನ- ಯತಿಶೈಲದೀಪ

Upayuktha
0

ಸಾಹಿತ್ಯ ರತ್ನ ಡಾ ಎನ್. ಕೆ. ರಾಮಶೇಷನ್ ರವರ ನೂತನ ಕೃತಿ 




ಭಕ್ತಿಪಂಥದ ಆಚಾರ್ಯತ್ರಯರಲ್ಲಿ ಒಬ್ಬರಾದ ಭಗವದ್ ರಾಮಾನುಜರ ಜೀವನ -ಸಾಧನೆ -ಸಂದೇಶವನ್ನು ತಿಳಿಸುವ ಈ  ಗ್ರಂಥ 1000 ವರ್ಷಗಳ ಸಾಂಸ್ಕೃತಿಕ ಚಿತ್ರಣವನ್ನು ನಮ್ಮ ಕಣ್ಣೆದುರು ತೆರೆದಿಡುತ್ತದೆ.


ಶ್ರೀಮನ್ನಾರಾಯಣನ ಶಯ್ಯಾಸನ ನಾದ ಆದಿಶೇಷನೇ ಮೂರು ಯುಗಗಳಲ್ಲಿ ಅಂದರೆ ತ್ರೇತಾಯುಗದಲ್ಲಿ ಶ್ರೀರಾಮಚಂದ್ರನ ಸಹೋದರ ಲಕ್ಷ್ಮಣನಾಗಿ, ದ್ವಾಪರದಲ್ಲಿ ಶ್ರೀ ಕೃಷ್ಣನ ಸಹೋದರ ಬಲಭದ್ರನಾಗಿ,ಕಲಿಯುಗದಲ್ಲಿ ಆಚಾರ್ಯ ರಾಮಾನುಜರಾಗಿ ಅವತರಿಸಿ ವ್ಯಷ್ಟಿ  ಸಮಷ್ಟಿ ಹಿತವನ್ನು ಆಶಿಸಿ ಜಗತ್ಪ್ರಸಿದ್ಧರಾದ ಮಹಾನ್ ದೈವಿ ಚೇತನ.


ಸಮಾಜಮುಖಿ ಚಿಂತಕರಾಗಿ, ಮನುಷ್ಯ ನಿರ್ಮಿತ ಜಾತಿ- ಮತ ನಿಕೃಷ್ಟ ಅನಿಸಿಕೊಂಡವರನ್ನು ಪ್ರೀತಿಯಿಂದ ಕಂಡು ಉದ್ಧರಿಸುತ್ತಾ ದೇವಾಲಯ ಪ್ರವೇಶ ಒದಗಿಸುವಷ್ಟು ಕ್ರಾಂತಿಕಾರಿಯಾದ ಆಚಾರ್ಯರ ದಿವ್ಯವಾದ ಬದುಕು ಕೃತಿ ಸಂಪದ -ಸಾಧನೆ ಮಾನವೀಯ ನಡೆ ಸಂದೇಶ ಇವೆಲ್ಲವನ್ನು ಸವಿವರವಾಗಿ ಲಭ್ಯ ಆಧಾರಗಳನ್ನು ನೀಡುತ್ತಾ ಗುರು ಭಕ್ತಿಯ ಕಾಣಿಕೆಯನ್ನು ಈ 600 ಪುಟಗಳ ಹೆಬ್ಬೊತ್ತಿಗೆಯ ಮೂಲಕ ನೀಡಿರುವ ಕನ್ನಡ ನಾಡಿನ ಅಪೂರ್ವ ವಿದ್ವಾಂಸರಾದ ಡಾ ನೀ. ಕೃ ರಾಮಶೇಷನ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಕನ್ನಡ ಸ್ನಾತಕೋತ್ತರ  ಪದವಿ, ಶಾಸನ ಶಾಸ್ತ್ರದಲ್ಲಿ ಡಿಪ್ಲೋಮೋ ಪಡೆದು,ವೃತ್ತಿಯಿಂದ ಭಾರತೀಯ ಜೀವ ವಿಮಾ ನಿಗಮದಲ್ಲಿ 33 ವರ್ಷ ಉನ್ನತ ಅಧಿಕಾರಿಯಾಗಿ ಸೇವೆ,ಬೆಂಗಳೂರು ವಿವಿ ಯಿಂದ ಹರಿದಾಸ ಸಾಹಿತ್ಯದಲ್ಲಿ ಡಾಕ್ಟರೇಟ್, ಗಮಕ ಕಾವ್ಯವಾಚನಗಳಲ್ಲಿ ಅಭಿರುಚಿ,ಶ್ರೀವೈಷ್ಣವ -ದ್ರಾವಿಡ ಸಂತರಾದ ಆಳ್ವಾರರ  ತಿರುವಾಯ್ಮೂಳಿ ದಿವ್ಯ ಪ್ರಬಂಧಗಳ ಅಧ್ಯಯನ -ಪ್ರವಚನ,


ಹಲವು ಗ್ರಂಥಗಳ ಅನುವಾದ ಮಾಡಿ,ವಿವಿಧ ಮಠ ಮಂದಿರಗಳಿಂದ ಪ್ರಶಸ್ತಿ ಗೌರವ ಗಳಿಗೆ ಪಾತ್ರರಾಗಿರುವ ಶ್ರೀಯುತರದು ಕ್ರಿಯಾಶೀಲ ವ್ಯಕ್ತಿತ್ವ.


ಸಾರ್ಥಕ 120 ವರ್ಷ ಬದುಕಿದ ಪರಮಯೋಗಿ ಆಚಾರ್ಯ ರಾಮಾನುಜರ ಸಹಸ್ರಮಾನೋತ್ಸವ ಇತ್ತೀಚಿಗಷ್ಟೇ ನಡೆದಿದೆ. ಆ ಸಂದರ್ಭದಲ್ಲಿ ಸಂಶೋಧನೆಗೆ ತೊಡಗಿ ಅಧ್ಯಯನ ಮಾಡಿ ಈ ಕೃತಿಯನ್ನು ಪ್ರಕಟಿಸಲಾಗಿದೆ.


ಶ್ರೀ ರಾಮಾನುಜಾಚಾರ್ಯರು ಯದುಶೈಲದೀಪ ಎನಿಸಿರುವ ಯಾದವಾದ್ರಿ ಮೇಲುಕೋಟೆಯಲ್ಲಿ ಹಾಗೂ ಕರ್ನಾಟಕ ಪರಿಸರದಲ್ಲಿ 32 ವರ್ಷ ಇದ್ದರೆಂದು ತಿಳಿದು ಬರುತ್ತದೆ. ಪರಮಭಕ್ತಿ ಸಿದ್ಧಾಂತ ವಿಶಿಷ್ಟಾದ್ವೈತವನ್ನು ಆಳ್ವಾರ್ ಯಾಮುನರು ಇನ್ನೂ ಹಿರಿಯ ಆಚಾರ್ಯರ ಮೂಲಕ  ಬೆಳಕಾಗಿ ಕಂಡುಕೊಂಡು ಜಗತ್ತಿಗೆ ಭಕ್ತಿ ಪಾರಮ್ಯ ತತ್ವವನ್ನು ಪ್ರತಿಪಾದಿಸಿದ ಸಂತ ಶ್ರೇಷ್ಠರು.


ಯತಿಶೈಲ ದೀಪ ಕೃತಿಯಲ್ಲಿ 10 ಅಧ್ಯಾಯಗಳಲ್ಲಿ ಆಚಾರ್ಯ ರಾಮಾನುಜರ ಕುರಿತ ಸಮೀಕ್ಷೆಯ ಅವಿಭಾಜ್ಯ ಅಂಗ ಆಳ್ವಾರರು ಹಾಗೂ ವಿಶಿಷ್ಟಾದ್ವೈತಕ್ಕೆ ಅವರು ನಿರ್ಮಿಸಿದ ಬುನಾದಿಯಿಂದ ಪ್ರಾರಂಭವಾಗಿ ಆಚಾರ್ಯ- ಶಿಷ್ಯ ಪರಂಪರೆ, ಭಕ್ತಿ ಆಂದೋಲನದ ಹಿನ್ನೆಲೆ, ವೇದಾಂತ ದರ್ಶನಗಳು, ರಾಮಾನುಜರು ಮಾಡಿದ ಸುಧಾರಣೆಗಳು, ದೇಶ ಪರ್ಯಟನೆ, ಭಾಷ್ಯ ರಚನೆ, ವಿದ್ಯಾಧಿ ದೇವತೆ ಸರಸ್ವತಿ ದೇವಿಯ ಪರಮಾನುಗ್ರಹ, ಭಾಷ್ಯಕಾರ ಎಂಬ ಬಿರುದು, ಕರ್ನಾಟಕ ಪ್ರವೇಶ, ಹೊಯ್ಸಳ ವಿಷ್ಣುವರ್ಧನ ರಾಜನಿಗೆ ಅನುಗ್ರಹ, ಬೀಬೀ ನಾಚಿಯಾರ್ ಪ್ರಸಂಗ, ದೇವತಾ ಮೂರ್ತಿಗಳ ಸ್ಥಾಪನೆ, ಆಚಾರ್ಯ ರಾಮಾನುಜರ ದಿವ್ಯಾಜ್ಞೆಗಳು ಹೀಗೆ ಅನೇಕ ವಿಚಾರಗಳಿಂದ ಕಂಗೊಳಿಸುವ ಈ ಕೃತಿ ಸಂಗ್ರಹಯೋಗ್ಯವೆನಿಸಿದೆ.


 ಕೃತಿಯ ಹೆಸರು : ಯತಿಶೈಲದೀಪ 

 ಲೇಖಕರು: ಡಾ.ಎನ್.ಕೆ.ರಾಮಶೇಷನ್ 

 ಪುಟಗಳು 638 ಬೆಲೆ ರೂ.500 

 ಲೇಖಕರೇ ಪ್ರಕಾಶಕರು 


 ಪ್ರತಿಗಳಿಗೆ ಸಂಪರ್ಕಿಸಿ 8277146110


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top