ಸವಾಲುಗಳನ್ನು ಬಯಸಿ, ಅನುಕೂಲಗಳನ್ನಲ್ಲ: ದಿವಾನ್ ಗೋವಿಂದ ಭಟ್

Upayuktha
0

ವಿವೇಕಾನಂದ ಕಾಲೇಜಿನಲ್ಲಿ ವಿವರ್ಥನ - 2024 ರಾಷ್ಟ್ರೀಯ ಮಟ್ಟದ ಪ್ರತಿಭಾನ್ವೇಷಣಾ ಕಾರ್ಯಕ್ರಮ



ಪುತ್ತೂರು: ಯಶಸ್ಸನ್ನು ತಲುಪುವ ಛಲ ಇರುವವನು ಎಂದೂ ಅನುಕೂಲಗಳನ್ನು ಬಯಸುವುದಿಲ್ಲ, ಅನನುಕೂಲಗಳನ್ನು ಅವಕಾಶಗಳನ್ನಾಗಿ ಬದಲಿಸಿ ಮುನ್ನಡೆಯುವುದು ಯಶಸ್ವಿ ವ್ಯಕ್ತಿಗಳ ಲಕ್ಷಣ ಎಂದು ಉದ್ಯಮಿ, ಅನನ್ಯ ಫೀಡ್ಸ್ ಹುಬ್ಬಳ್ಳಿ ಇದರ ಸ್ಥಾಪಕ ದಿವಾನ್ ಗೋವಿಂದ ಭಟ್ ಅಭಿಪ್ರಾಯಪಟ್ಟರು.


ಪುತ್ತೂರಿನ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಇಲ್ಲಿನ  ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ಆಯೋಜಿಸಿದ್ದ ವಿವರ್ಥನ 2024 ಪ್ರತಿಭಾನ್ವೇಷಣಾ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ  ಇವರು, ಮಾಡುವ ಕೆಲಸದ ಬಗ್ಗೆ  ಶ್ರದ್ಧೆ, ಛಲ ಮತ್ತು ವಿಧೇಯತೆ ಇದ್ದರೆ ಯಶಸ್ಸು ನಿಮ್ಮ ಸಮೀಪಕ್ಕೆ ಬರುವುದು, ಅನುಕೂಲಗಳು ನಿಮ್ಮನ್ನು ಬೆಳೆಯಲು ಸಹಕಾರಿಯಾಗುವುದಿಲ್ಲ, ಹಾಗಾಗಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕಲಿಯಿರಿ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ ಎಂ ಕೃಷ್ಣ ಭಟ್, ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ ಇದ್ದರೆ ಹೊಸತನ್ನು ಏನಾದರೂ ಮಾಡಲು ಪ್ರಯತ್ನಿಸಿ. ಮನಸ್ಸಿನಲ್ಲಿರುವ ಕಲ್ಪನೆಗಳನ್ನು ಕಾರ್ಯರೂಪಕ್ಕೆ ತರಲು ಅವಕಾಶಗಳನ್ನು ಬಳಸಿಕೊಳ್ಳಿ ಎಂದು ನುಡಿದರು.


ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ ಎನ್ ಕಾರ್ಯಕ್ರಮಕ್ಕೆ ಶುಭಕೋರಿದರು. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ ಬಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. 


ವೇದಿಕೆಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಮತ್ತು ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ್ ಹೆಚ್ ಜಿ, ಕಾಲೇಜಿನ ವಿಶೇಷಾಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್, ವಿದ್ಯಾರ್ಥಿ ಪ್ರತಿನಿಧಿ ನಿರಂಜನ್ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಧನ್ಯಶ್ರೀ ಐ ಸ್ವಾಗತಿಸಿ, ರಾಹುಲ್ ಪಿ ಆರ್ ವಂದಿಸಿದರು. ಪುಣ್ಯಶ್ರೀ ನಿರೂಪಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ವಿವರ್ಥನ 2024 ರ ಪ್ರತಿಭಾನ್ವೇಷಣೆಯ ಟ್ರೋಫಿ ಅನಾವರಣಗೊಂಡಿತು. 

ಉದ್ಯಮಿ, ಅನನ್ಯ ಫೀಡ್ಸ್ ಹುಬ್ಬಳ್ಳಿ ಇದರ ಸ್ಥಾಪಕ ದಿವಾನ್ ಗೋವಿಂದ ಭಟ್ ಇವರನ್ನು ಗೌರವಿಸಲಾಯಿತು. 


ಸಮಾರೋಪ ಸಮಾರಂಭ:

ವಿವರ್ಥನ 2024ರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್ ಡಿ ಪಿ ರೆಮಿಡಿಸ್‌ನ ಎಂ ಡಿ ಡಾ. ಹರಿಕೃಷ್ಣ ಪಾಣಾಜೆ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಲು ಗುರಿ ಬೇಕು. ಗುರಿ ಇಲ್ಲದೆ ಸಾಧನೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ ಹೊಂದಿಕೊAಡಿದ್ದರೆ ಮಾತ್ರ ಸಾಧಕರಾಗಬಹುದು. ನಮ್ಮ ಕಾರ್ಯದಲ್ಲಿ ಸದುದ್ದೇಶವಿದ್ದರೆ ಸಫಲತೆ ನಮ್ಮ ಕೈ ಹಿಡಿಯುತ್ತದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕರಾದ ಮುರಳಿಕೃಷ್ಣ ಕೆ. ಎನ್. ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಿರುವ ಕಾಲಘಟ್ಟದಲ್ಲಿ ವಿದ್ಯಾಸಂಸ್ಥೆಗಳು ನಿಜವಾದ ಸಾಧಕರನ್ನು ಗುರುತಿಸಿದರೆ ವಿದ್ಯಾರ್ಥಿಗಳಿಗೆ ಸಾಧನೆಯ ಅರಿವಾಗುತ್ತದೆ. ಆಯುರ್ವೇದ ಜಗತ್ತಿಗೆ ಭಾರತ ನೀಡಿದ ಅಪೂರ್ವ ಕೊಡುಗೆ. ಇದರ ಮಹತ್ವವನ್ನು ನಮ್ಮವರು ಮೊದಲಿಗೆ ಅರಿತುಕೊಳ್ಳಬೇಕು ಎಂದು ಹೇಳಿದರು. 


ವೇದಿಕೆಯಲ್ಲಿ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಶ್ರೀಧರ್ ಹೆಚ್ ಜಿ, ವಿಶೇಷಾಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ ಬಿ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕ ರಾಘವೇಂದ್ರ, ವಿದ್ಯಾರ್ಥಿ ಸಂಯೋಜಕ ನಿರಂಜನ್ ಹಾಗೂ ಧನ್ಯಶ್ರೀ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ವಿದ್ಯಾರ್ಥಿ ನಿರಂಜನ್ ಸ್ವಾಗತಿಸಿ, ಜಿನಪ್ರಕಾಶ್ ವಂದಿಸಿದರು. ಸ್ವಾತಿ ನಿರೂಪಿಸಿದರು.


"ವಿವರ್ಥನ 2024 ಪ್ರತಿಭಾನ್ವೇಷಣೆಯ ಸಮಗ್ರ ಪ್ರಶಸ್ತಿಯನ್ನು ಅಂಬಿಕಾ ಕಾಲೇಜು ಬಪ್ಪಳಿಗೆ, ಹಾಗೂ ರನ್ನರ್ ಅಪ್ ಪ್ರಶಸ್ತಿಯನ್ನು ಶ್ರೀ ರಾಮ ಕಾಲೇಜು ಕಲ್ಲಡ್ಕ ಪಡೆದುಕೊಂಡರು".



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top