ಸುರತ್ಕಲ್: ಅನುದಾನಿತ ವಿದ್ಯಾದಾಯಿನೀ ಪ್ರೌಢಶಾಲೆ ಸುರತ್ಕಲ್‌ನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ನಾಯಕ ಹಾಗೂ ವಿದ್ಯಾರ್ಥಿ ನಾಯಕಿ ಸ್ಥಾನಕ್ಕೆ ಇಂದು (ಜೂ.12) ನಡೆದ ಚುನಾವಣೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕನಾಗಿ 10ನೇ ಬಿ ವಿಭಾಗದ ಶ್ರೀಕೃಷ್ಣ 156 ಮತಗಳನ್ನು ಪಡೆದು ವಿಜಯಶಾಲಿ ಆಗಿರುತ್ತಾನೆ. ವಿದ್ಯಾರ್ಥಿ ನಾಯಕಿ ಸ್ಥಾನಕ್ಕೆ 10ನೇ ಎ ವಿಭಾಗದ ನೀಹಾರಿಕಾ 298 ಮತಗಳನ್ನು ಪಡೆದು ವಿಜಯಶಾಲಿ ಆಗಿರುತ್ತಾಳೆ.
ಒಟ್ಟು 430 ವಿದ್ಯಾರ್ಥಿಗಳು ಹಾಜರಿದ್ದು ಮತ ಚಲಾಯಿಸಿದರು. ಈ ಚುನಾವಣಾ ಪ್ರಕ್ರಿಯೆಯ ವೀಕ್ಷಣೆಗೆ ಶಾಲಾ ಆಡಳಿತ ಮಂಡಳಿಯಾದ ಹಿಂದು ವಿದ್ಯಾದಾಯಿನೀ ಸಂಘದ ಜೊತೆ ಕೋಶಾಧಿಕಾರಿ ರಮೇಶ್ ಟಿ.ಎನ್, ಆಗಮಿಸಿದರು. ಶಾಲಾ ಮುಖ್ಯೋಪಾಧ್ಯಾಯ ಬಾಲಚಂದ್ರ ಕೆ ಇವರು ಶಾಲಾ ಚುನಾವಣೆಯ ಬಗ್ಗೆ ಸವಿವರವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಚುನಾವಣೆಯ ಬಳಿಕ ವಿಜೇತರಾದ ವಿದ್ಯಾರ್ಥಿ ನಾಯಕ ಹಾಗೂ ವಿದ್ಯಾರ್ಥಿ ನಾಯಕಿಯ ಹೆಸರನ್ನು ಘೋಷಣೆ ಮಾಡಿದರು.
ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರ ಸಹಕಾರದಿಂದ ಚುನಾವಣೆ ಅರ್ಥಪೂರ್ಣವಾಗಿ ಜರಗಿತು. ದಿವಸ್ಪತಿ ಚುನಾವಣೆಯನ್ನು ನಡೆಸಿಕೊಟ್ಟರು. ವಸಂತ ಕುಮಾರ್ ಎಲ್ಲರನ್ನು ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ